Asianet Suvarna News Asianet Suvarna News

Karnataka Election 2023: ಈ ಬಾರಿ ಜೆಡಿಎಸ್‌ಗೆ ಸ್ಪಷ್ಟ ಬಹುಮತ ಸಿಗಲಿದೆ, ಕುಮಾರಸ್ವಾಮಿ

ಅತಂತ್ರ ಫಲಿತಾಂಶ ವಿಚಾರದ ಬಗ್ಗೆ ಮುಂದೆ ಮಾತನಾಡ್ತೇನೆ.  ಬಿಜೆಪಿ-ಕಾಂಗ್ರೆಸ್ ಹಣದಿಂದ ಚುನಾವಣೆ ನಡೆಸಿವೆ. ರಾಮನಗರ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಚನ್ನಪಟ್ಟಣ, ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್​ ನಾವು ಜಯ ಸಾಧಿಸಲಿದ್ದೇವೆ ಅಂತ ಭರವಸೆ ವ್ಯಕ್ತಪಡಿಸಿದ ಎಚ್‌ಡಿಕೆ

JDS Will Get Clear Majority in Karnataka Assembly Election 2023 Says HD Kumaraswamy grg
Author
First Published May 10, 2023, 1:19 PM IST | Last Updated May 10, 2023, 1:19 PM IST

ರಾಮನಗರ(ಮೇ.10): ಇವತ್ತು ‌ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ನಾಡಿನ ಜನತೆ ಮತದಾನ ಮಾಡುವುದರಿಂದ ವಂಚಿತರಾಗಬೇಡಿ ಎಂದು ಮನವಿ ಮಾಡ್ತೇನೆ. ನನಗೆ ಅತ್ಯಂತ ನೋವಾಗಿದೆ, ಹಲವಾರು ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲು ಆಗಿಲ್ಲ. ರಾಜ್ಯದಲ್ಲಿ ಈ ಬಾರಿ ನನ್ನ ಅಭ್ಯರ್ಥಿಗಳಿಗೆ ಹಣ ಒದಗಿಸಲು ಆಗಿಲ್ಲ. ಆರ್ಥಿಕ ನೆರವು ನೀಡುವುದರಲ್ಲಿ ವಿಫಲಗೊಂಡಿರೋದು ನನಗೆ ಆಘಾತವಾಗಿದೆ ಅಂತ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 

ಇಂದು(ಬುಧವಾರ) ಜಿಲ್ಲೆಯ ಕೇತಗಾನಹಳ್ಳಿ ಮತಗಟ್ಟೆ ಬಳಿ‌ ಮತ ಚಲಾವಣೆ ಮಾಡಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಮಾಜಿ ಎಚ್‌.ಡಿ. ಕುಮಾರಸ್ವಾಮಿ ಅವರು, ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಿದ್ದರು. ಆದರೆ ಹಣದ ಕೊರತೆಯಿಂದಾಗಿ ನಮಗೆ ಹಿನ್ನಡೆಯಾಗಿದೆ. ಕನಿಷ್ಠ 25ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಹಣದ ಕೊರತೆಯಿಂದ ಹಿನ್ನಡೆಯಾಗಿದೆ. ಗೆಲ್ಲುವ ಕ್ಷೇತ್ರಗಳಲ್ಲಿ ಹಣದ ಕೊರತೆಯಿಂದ ಪೆಟ್ಟು ತಿಂದಿದ್ದೇನೆ. ಕಾರ್ಯಕರ್ತರಲ್ಲಿ ಮನವಿ‌ ಮಾಡ್ತೇನೆ ಕೆಲವು ಅಭ್ಯರ್ಥಿಗಳು ಬುಕ್ ಆಗಿಬಿಟ್ರೂ ಅಂತೇಳಿ ತಪ್ಪು ತಿಳಿಯಬೇಡಿ. ನನ್ನಿಂದ ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಆಯಾ ಕ್ಷೇತ್ರದ ಕೆಲವು ಬೂತ್ ಗಳಿಗೆ ಹಣ ನೀಡಲು ಆಗಿಲ್ಲ. ಕೊನೆಯ ಹಂತದಲ್ಲಿ ಅಭ್ಯರ್ಥಿಗಳ ನಿರೀಕ್ಷೆ ಮುಟ್ಟಲು‌‌ ಆಗಿಲ್ಲ. ನಮ್ಮ ‌ಅಭ್ಯರ್ಥಿಗಳ ಮೇಲೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಬೇಡಿ. ಆದರೂ ಕಾಂಗ್ರೆಸ್, ಬಿಜೆಪಿಗಿಂತ ಮುಂದೆ ಇರ್ತೇವೆ, ಜೆಡಿಎಸ್‌ಗೆ ಬಹುಮತ ಬರಲಿದೆ ಅಂತ ತಿಳಿಸಿದ್ದಾರೆ. 

Karnataka Election 2023: ರಾಜ್ಯದಲ್ಲಿ ಸ್ಥಿರ ಮತ್ತು ಬಹುಮತದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ: ಸಿಎಂ

ಅತಂತ್ರ ಫಲಿತಾಂಶ ವಿಚಾರದ ಬಗ್ಗೆ ಮುಂದೆ ಮಾತನಾಡ್ತೇನೆ.  ಬಿಜೆಪಿ-ಕಾಂಗ್ರೆಸ್ ಹಣದಿಂದ ಚುನಾವಣೆ ನಡೆಸಿವೆ. ರಾಮನಗರ ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಚನ್ನಪಟ್ಟಣ, ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್​ ನಾವು ಜಯ ಸಾಧಿಸಲಿದ್ದೇವೆ ಅಂತ ಭರವಸೆ ವ್ಯಕ್ತಪಡಿಸಿದ್ದಾರೆ. 

ಇದೇ ವೇಳೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಈ ಬಾರಿಯ ಚುನಾವಣೆ ಹಣದಿಂದ ನಡೆದಿದೆ. ನಾನೊಬ್ಬ ಯುವಕನಾಗಿ ನನಗೂ ಆತಂಕವಿದೆ. ಮುಂದೆ ಈ ವ್ಯವಸ್ಥೆಯನ್ನ ರಾಜ್ಯದ ಜನರು ಸರಿಪಡಿಸಬೇಕಿದೆ. ನಾವು ರಾಮನಗರದಲ್ಲಿ 25 ವರ್ಷಗಳಿಂದ ಸೇವೆ ಮಾಡಿದ್ದೇವೆ. ಜನರು ನಮ್ಮನ್ನ ಕಯಹಿಡಿಯುತ್ತಾರೆಂಬ ನಂಬಿಕೆಯಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Latest Videos
Follow Us:
Download App:
  • android
  • ios