90ರ ದಶಕದಲ್ಲಿ ಯಾರ ಹೆಗಲ ಮೇಲೆ ಕೂತಿದ್ರು? : ಸಿದ್ದುಗೆ ದೇವೇಗೌಡ ಟಾಂಗ್‌

90ರ ದಶಕದಲ್ಲಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಯಾರ ಹೆಗಲ ಮೇಲೆ ಕುಳಿತಿದ್ದರು ಎಂದು ಮಾಜಿ ಪ್ರಧಾನಿ ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ

JDS Supremo HD Devegowda Slams Siddaramaiah snr

ಕಲಬುರಗಿ (ಅ.09): ’ಅಯ್ಯೋ ಆ ಮಾತನ್ನೂ ಕೇಳಿದ್ದೀನ್ರಿ, ಜೆಡಿಎಸ್‌ ರಾಷ್ಟ್ರೀಯ ಪಕ್ಷ. 90ರ ದಶಕದಲ್ಲಿ ಹೀಗೆ ಮಾತನಾಡಿದವರೆಲ್ಲ ಎಲ್ಲಿದ್ರು? ಇವ್ರು ಆಗ ಯಾರ ಹೆಗಲ ಮೇಲೆ ಕುತಿದ್ರು?’

ಜೆಡಿಎಸ್‌ ಪಕ್ಷ ಸದಾ ಅನ್ಯರ ಹೆಗಲನ್ನೇರಿ ಸವಾರಿ ಮಾಡೋ ಪಕ್ಷವೆಂಬ ಸಿದ್ದರಾಮಯ್ಯ ಹೇಳಿಕೆಯನ್ನು ಸುದ್ದಿಗಾರರು ಪ್ರಸ್ತಾಪಿಸಿದಾಗ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಈ ರೀತಿ ಟಾಂಗ್‌ ನೀಡಿದ್ದಾರೆ. ಜೆಡಿಎಸ್‌ ಪಕ್ಷದ ಬಗ್ಗೆ, ತಮ್ಮ ಹಾಗೂ ತಮ್ಮ ಕುಟುಂಬದವರ ಬಗ್ಗೆ ರಾಜಕೀಯವಾಗಿ ಯಾರೇ ಲಘುವಾಗಿ ಮಾತನಾಡಿದರೂ ಸಹ ಅದನ್ನೆಲ್ಲ ವಿಶ್ಲೇಷಣೆ ಮಾಡುತ್ತಾ ಕೂರುವುದಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್‌ನವರು ಬಿಜೆಪಿ ಹೋಗಲು ಕಾರಣ ಯಾರೆಂದು ಗೊತ್ತು : HDK ಬಾಂಬ್ ..

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರಿವರ ಲೇವಡಿ ಮಾತನ್ನಿಲ್ಲಿ ಪ್ರಸ್ತಾಪಿಸಿ ನೀವು (ಮಾಧ್ಯಮದವರು) ನನ್ನಿಂದ ಏನೆಲ್ಲಾ ಉತ್ತರ ಬಯಸಿದ್ದೀರಿ ಅಂತ ಗೊತ್ತು. ಆದರೆ, ಅಂತಹ ಮಾತುಗಳಿಗೆ ವಿಶ್ಲೇಷಣೆ ಮಾಡುವ ಕಾಲವಿದಲ್ಲ. ನಾವೀಗ ಚುನಾವಣೆ ಕಾಲದಲ್ಲಿದ್ದೇವೆ ಎಂದರು.

ಮುಂಚೆ ದೇವೇಗೌಡರು ಅಳುತ್ತಿದ್ದರು, ಈಗ ಕುಮಾರಸ್ವಾಮಿ ತಂದೆಯನ್ನು ಅನುಕರಿಸಿ ಅಳುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಯಾರ ಹೇಳಿಕೆ ಬಗ್ಗೆಯೂ ಮಾತಾಡೋಕೆ ಹೋಗುವುದಿಲ್ಲ. ಅದರ ಅವಶ್ಯಕತೆಯೂ ಇಲ್ಲ ಎಂದರು. ಇದೇ ಸಂದರ್ಭದಲ್ಲಿ ಉಪಚುನಾವಣೆ ಮತ್ತು ಶಿಕ್ಷಕರ ಕ್ಷೇತ್ರ, ಪದವೀಧರರ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios