ಬಿಜೆಪಿಯದು ಮಂಚದ ಸರ್ಕಾರ, ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಬೇಕು: ಸಿ.ಎಂ.ಇಬ್ರಾಹಿಂ

ಬಿಜೆಪಿ 13 ಜನರನ್ನು ಮಂಚದ ಮೇಲೆ ಮಲಗಿಸಿ ರಾಜ್ಯದಲ್ಲಿ ಸರ್ಕಾರ ರಚಿಸಿದೆ. ಇದು ಮಂಚದ ಸರ್ಕಾರ. ಇವರಿಗೆ ನಾಚಿಕೆ ಆಗಬೇಕು. ಹಾಗಾಗಿ ಕೂಡಲೇ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಆಗ್ರಹಿಸಿದರು.

JDS State President CM Ibrahim Slams On BJP Govt At Hubballi gvd

ಹುಬ್ಬಳ್ಳಿ (ಫೆ.06): ಬಿಜೆಪಿ 13 ಜನರನ್ನು ಮಂಚದ ಮೇಲೆ ಮಲಗಿಸಿ ರಾಜ್ಯದಲ್ಲಿ ಸರ್ಕಾರ ರಚಿಸಿದೆ. ಇದು ಮಂಚದ ಸರ್ಕಾರ. ಇವರಿಗೆ ನಾಚಿಕೆ ಆಗಬೇಕು. ಹಾಗಾಗಿ ಕೂಡಲೇ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಡಿ ಪ್ರಕರಣದಲ್ಲಿ ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ 12 ಮಂದಿಯ ಕ್ಯಾಸೆಟ್‌ ಬಿಡುಗಡೆ ಮಾಡಿ ಅವರನ್ನು ಪಕ್ಷದಿಂದ ಹೊರದೂಡಬೇಕು. ಇಲ್ಲದಿದ್ದರೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸಜ್ಜನರ ಜತೆಗೆ ಬರಬೇಕು ಎಂದು ಬೊಮ್ಮಾಯಿ ಅವರನ್ನು ಜೆಡಿಎಸ್‌ಗೆ ಆಹ್ವಾನಿಸಿದರು.

ಮಂಚ ಏರಿದ್ದ 13 ಜನರಲ್ಲಿ 12 ಜನರು ಈಗ ಮಂತ್ರಿ ಆಗಿದ್ದಾರೆ. ಅದರಲ್ಲಿ ಮಂತ್ರಿ ಸ್ಥಾನ ಕಳೆದುಕೊಂಡ ರಮೇಶ ಜಾರಕಿಹೊಳಿ ಸಿಡಿ ಹಿಡಿದುಕೊಂಡು ಕೇಂದ್ರ ಗೃಹ ಸಚಿವರ ಬಳಿ ಹೋಗಿದ್ದಾರೆ. ಇದೀಗ ಸಮಾಜದಲ್ಲಿರುವ ಸಣ್ಣ ಮಕ್ಕಳು ಸಿಡಿ ಅಂದರೆ ಏನೆಂದು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿಯವರು ಉತ್ತರ ಕೊಡತ್ತಾರಾ? ಇಲ್ಲವೇ ನಾವೇ ಕೊಡಬೇಕಾ? ಎಂದು ಪ್ರಶ್ನಿಸಿದರು. ಉನ್ನತ ಸ್ಥಾನದಲ್ಲಿ ಇದ್ದವರನ್ನು ಗುರುತಿಸಿ ಸಿಡಿ ಮಾಡುತ್ತಿದ್ದ ಸ್ಯಾಂಟ್ರೊ ರವಿ ಈಗ ಎಲ್ಲಿದ್ದಾನೆ? ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕು. ಬಿಜೆಪಿಯವರು ಕೇವಲ ಪರಸತಿ, ಪರಧನದ ಮಹಾಸಂಗಮ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು ಇಬ್ರಾಹಿಂ.

ನನ್ನ ಅವಧಿಯಲ್ಲಿ ದಾಖಲೆಯ ರೀತಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ: ಜಿ.ಟಿ.ದೇವೇಗೌಡ

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಬಂಧನವಾಗಿದ್ದವರಿಗೆ ಜಾಮೀನು ಸಿಕ್ಕಿದೆ. ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್‌ ನೀಡಲಾಗಿದೆ. ಇದರ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಜೆಡಿಎಸ್‌ನವರು ಕುಟುಂಬ ರಾಜಕಾರಣ ಮಾಡುತ್ತಾರೆ, ನವಗ್ರಹ ಪೂಜೆ ಮಾಡಬೇಕೆಂಬ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನವಗ್ರಹ ಪೂಜೆ ಮಾಡಲೇಬೇಕು. ಅವರು ನಿಜವಾದ ಮಾತು ಹೇಳಿದ್ದಾರೆ. ಅವರು ತಮ್ಮ ಸಹೋದರ ಬ್ಯಾಂಕ್‌ನಲ್ಲಿ ಮಾಡಿದ ಅವ್ಯವಹಾರವನ್ನು ಯಾಕೆ ಮುಚ್ಚಿಟ್ಟಿದ್ದಾರೆ? ನಮ್ಮ ತಂಟೆಗೆ ಬಂದರೆ ನಾವು ಅವರ ಮನೆಗೆ ಹೋಗುತ್ತೇವೆ ಎಂದು ಎಚ್ಚರಿಸಿದರು.

ಸಿದ್ದರಾಮಯ್ಯ ಅವರಿಗೆ 2 ಬಾರಿ ರಾಜಕೀಯ ಮರುಜನ್ಮ ಕೊಟ್ಟಿದ್ದೇನೆ. ಮಾನವೀಯತೆ ಇದ್ದರೆ ನನ್ನ ಮಗ ಸ್ಪರ್ಧಿಸುತ್ತಿರುವ ಹುಮನಾಬಾದ್‌ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡಬಾರದು. ಜಮೀರ್‌ ಅಹ್ಮದ್‌ಗೆ ಕಾಳಜಿ ಇದ್ದರೆ ನನ್ನ ಮಗನಿಗೆ ಅವನ ಕ್ಷೇತ್ರ ಬಿಟ್ಟು ಕೊಡಲಿ. ಆದರೆ, ಸಿದ್ದರಾಮಯ್ಯ ಜಮೀರ್‌ ಅಹಮ್ಮದ್‌ ಅವರನ್ನು ಕಟ್ಟಿಕೊಂಡು ಹಾಲಲ್ಲಿ ವಿಷ ಹಾಕುತ್ತಿದ್ದಾರೆ. ಹುಮನಾಬಾದ್‌ನಲ್ಲಿ ನನ್ನ ಮಗ ಹಾಗೂ ಬಿಜೆಪಿಗೆ ನೇರ ಹಣಾಹಣಿ ಇದೆ. ಅಲ್ಲಿ ಕಾಂಗ್ರೆಸ್‌ 3ನೇ ಸ್ಥಾನದಲ್ಲಿದೆ. ಇದು ಗುಪ್ತಚರ ಇಲಾಖೆಯ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಗೊತ್ತಿದೆ. ನನ್ನ ಮಗ ಗೆಲ್ಲಲಿದ್ದಾನೆ. ಈ ಮೂಲಕ ರಾಜ್ಯದಲ್ಲಿ ಜನತಾದಳ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ-ಯಡಿಯೂರಪ್ಪ ಒಂದೇ: ವರುಣಾದಲ್ಲಿ ಯಡಿಯೂರಪ್ಪ ಇಲ್ಲದೇ ಸಿದ್ದರಾಮಯ್ಯ ಗೆಲ್ಲುವುದಿಲ್ಲ. ಹಾಗಾಗಿ ಯಡಿಯೂರಪ್ಪನವರೇ ಕೋಲಾರದಲ್ಲಿ ನಿಲ್ಲಲಿ ಎಂದಿದ್ದಾರೆ. ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಇಬ್ಬರು ಒಂದೇ. ನಾನು ಕೂಡ ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ನಿಲ್ಲುವುದು ಬೇಡ ಎಂದಿದ್ದೇನೆ ಎಂದು ಸಿ.ಎಂ. ಇಬ್ರಾಹಿಂ ಹೇಳಿದರು.

ನಮ್ಮ ಕುಟುಂಬದ ಟಿಕೆಟ್‌ ಬಗ್ಗೆ ವರಿಷ್ಠರು ತೀರ್ಮಾನ: ನಿಖಿಲ್‌ ಕುಮಾರಸ್ವಾಮಿ

ಜೋಶಿ ವಿರುದ್ಧ ಕಿಡಿ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರೇ ಈದ್ಗಾ ಮೈದಾನದಲ್ಲಿ ಗಣಪತಿ ಕೂಡ್ರಿಸಿ ಪೂಜೆ ಮಾಡಿದಿರಿ, ಬೈರಿದೇವರಕೊಪ್ಪದ ದರ್ಗಾ ತೆರವು ಮಾಡಿದಿರಿ, ಇದರಿಂದ ನಿಮಗೆ ಏನು ಸಿಕ್ಕಿತು? ನೀವು ಜನರ ಮನಸ್ಸಿನಲ್ಲಿ ಗಣಪತಿ ಕೂರಿಸಬೇಕಾಗಿತ್ತು. ಆದರೆ ಆ ಕೆಲಸವನ್ನು ನೀವು ಮಾಡಲಿಲ್ಲ. ಮೇಲ್ಸೇತುವೆ ನಿಮಾರ್ಣದ ಮೂಲಕ ದರ್ಗಾ ಉಳಿಸಬಹುದಿತ್ತು. ಶಾಸಕ ಅರವಿಂದ ಬೆಲ್ಲದ ಅವರ ಜಾಗ ಉಳಿಸಲು ನೀವು ದರ್ಗಾ ತೆರವು ಮಾಡಿದ್ದೀರಿ. ಮುಖ್ಯಮಂತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಕ್ಷಮೆಯಾಚಿಸಿದ್ದಾರೆ. ಮುಂದೆ ಇಂತಹ ಕೆಲಸ ಮಾಡಬೇಡಿ ಎಂದು ಕಿಡಿಕಾರಿದರು.

Latest Videos
Follow Us:
Download App:
  • android
  • ios