ಬೆಳಗಾವಿ, [ಡಿ.12]: ವಿಧಾನಪರಿಷತ್ ಸಭಾಧ್ಯಕ್ಷ ಸ್ಥಾನ ಕೊನೆಗೂ ಕಾಂಗ್ರೆಸ್ ಪಾಲಾಗಿದೆ. ಹಿರಿಯ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ  ಅವರು ಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇನ್ನು ಸಭಾಪತಿ ಸ್ಥಾನ ಕೈ ತಪ್ಪಿದ್ದಕ್ಕೆ ಜೆಡಿಎಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಸವರಾಜ್ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

"

ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಚ್ಚರಿ ಹೆಸರು, ಹೊರಟ್ಟಿಗೆ ಮಂತ್ರಿಗಿರಿ ನಾ..?

ಇಂದು [ಬುಧವಾರ] ಬೆಳಗಾವಿ ಸುವರ್ಣಸವಧದಲ್ಲಿ ಸಭಾಪತಿ ಸ್ಥಾನದಿಂದ ಇಳಿದ ಬಳಿಕ ತೀವ್ರ ಭಾವುಕರಾದ ಬಸವರಾಜ್ ಹೊರಟ್ಟಿ ಅವರು ಕಣ್ಣೀರು ಒರೆಸಿಕೊಳ್ಳುತ್ತಾ ಸದನದಿಂದ ಹೊರ ನಡೆದರು.

ಈ ಬಗ್ಗೆ ಆಪ್ತರ ಬಳಿ ನೋವು ತೋಡಿಕೊಂಡ ಹೊರಟ್ಟಿ, ಕಾಂಗ್ರೆಸ್ ನವರನ್ನ ನಂಬಿಕೊಂಡು ನಾನು ಮೋಸ ಹೋದೆ ಎಂದು ಹೇಳಿದ್ದಾರೆ. 

ಕಾಂಗ್ರೆಸ್ ಮೈತ್ರಿ ಧರ್ಮ ಪಾಲಿಸುತ್ತದೆ ಅಂದಿಕೊಂಡಿದ್ದೆ. ಇದ್ರಿಂದ ನಾನು ಯಾವುದೇ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದಿಲ್ಲ. ಬೇಷರತ್ ಬೆಂಬಲದಿಂದ ಸಭಾಪತಿಯಾಗಿ ನೇಮಿಸುತ್ತೇವೆ ಅಂತ ಬರವಸೆ ನೀಡದ್ದರಿಂದ ನಾನು ಸುಮ್ಮನಾಗಿದ್ದೇ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಇನ್ನೂ ತಮ್ಮದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಕೂಡಾ ಸಂಪುಟ ರಚಿಸುವಾಗ ಇದರ ಬಗ್ಗೆ ಚರ್ಚಿಸೋಣ ಅಂತ ಹೇಳಿದ್ದರು. ಆದ್ರೆ ಈ ಬಗ್ಗೆ ಯಾವೊಬ್ಬ ನಾಯಕರು ಚಕಾರ ಎತ್ತುತ್ತಿಲ್ಲ. ಎಲ್ಲ ಬೆಳವಣಿಗೆಯಿಂದ ನನಗೆ ನೋವಾಗಿದೆ.

ಇನ್ನು ಮುಂದೆ ಸರ್ಕಾರದ ವಿಚಾರದಲ್ಲಿ ನಾನು ತಟಸ್ಥನಾಗಿರುತ್ತೇನೆ ಎಂದು ಬಸವರಾಜ್ ಹೊರಟ್ಟಿ ಅಸಮಾಧಾನ ಹೊರಹಾಕಿದರು.