ಬೆಳಗಾವಿ, (ಡಿ.10): ವಿಧಾನಪರಿಷತ್ ಸಭಾಪತಿ ಸ್ಥಾನಕ್ಕಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ನಾಯಕರ ನಡುವಿನ ಪೈಪೋಟಿ ಅಂತಿಮ ಹಂತಕ್ಕೆ ಬಂದು ನಿಂತಿದೆ.

 ಎಸ್.ಆರ್. ಪಾಟೀಲ್ ಅವರನ್ನ ಸಭಾಪತಿ ಮಾಡಲು ಕಾಂಗ್ರೆಸ್ ನಲ್ಲಿ ಚೆರ್ಚೆಗಳು ನಡೆದಿದ್ದವು. ಆದ್ರೆ ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿಯನ್ನ ಅಂತಿಮಗೊಳಿಸಿದೆ.

ಅತ್ತ ಸಿದ್ದು ವಿದೇಶಕ್ಕೆ: ಇತ್ತ ದೋಸ್ತಿಗಳ ನಡುವೆ ಶುರುವಾಯ್ತು ಜಟಾಪಟಿ

ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದ್ದು, ನಾಯಕರ ಸೂಚನೆ ಮೇರೆಗೆ ಪ್ರತಾಪ್ ಚಂದ್ರ ಶೆಟ್ಟಿ ಅವರು ಇಂದು (ಮಂಗಳವಾರ) ನಾಮಪತ್ರ ಸಲ್ಲಿಸಿದರು.

ಈ ಮೂಲಕ ಜೆಡಿಎಸ್ ಸಭಾಪತಿ ಹುದ್ದೆ ರೇಸ್ ನಿಂದ ಹಿಂದೆ ಸರಿದಿದ್ದು, ಪ್ರತಾಪ್ ಚಂದ್ರ ಶೆಟ್ಟಿ ಸಭಾಪತಿಯಾಗುವುದು ಬಹುತೇಕ ಖಚಿತವಾದಂತಾಗಿದೆ. ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಅವರನ್ನೇ ಮುಂದುವರೆಸಲು ಜೆಡಿಎಸ್ ಪ್ಲ್ಯಾನ್ ಮಾಡಿತ್ತು.

ಆದರೆ, ಬದಲಾದ ಬೆಳವಣಿಗೆ ನಂತರ ಜೆಡಿಎಸ್, ಸಭಾಪತಿ ಸ್ಥಾನವನ್ನ ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿದೆ. ಸಭಾಪತಿ ಕಾಂಗ್ರೆಸ್ ಪಾಲಾಗಿರುವುದು ಒಂದು ಕಡೆ ಬಸವರಾಜ್ ಹೊರಟ್ಟಿಗೆ ವರವಾಗಿದ್ದು, ಮಿನಿಸ್ಟರ್ ಗಿರಿ ಸಿಗುವ ಎಲ್ಲಾ ಸಾಧ್ಯತೆಗಳಿಗೆ.

ಹಿರಿತನ ಆಧಾರದ ಮೇಲೆ ಬಸವರಾಜ್ ಹೊರಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಈ ಹಿಂದೆಯೇ ಪಕ್ಷದಲ್ಲಿ ತೀರ್ಮಾನಿಸಲಾಗಿತ್ತು. ಆದ್ರೆ ಇನ್ನುಳಿದ ಪರಿಷತ್ ಸದಸ್ಯರು ತಮಗೂ ಸಚಿವ ಸ್ಥಾನ ಬೇಕು ಎಂದು ಪಕ್ಷದ ವರಿಷ್ಠರ ಬಳಿ ಮನವಿ ಮಾಡಿಕೊಂಡಿದ್ದರು.

ಇದ್ರಿಂದ ಯಾವೊಬ್ಬ ಪರಿಷತ್ ಸದದಸ್ಯರಿಗೆ ಸಚಿವ ಸ್ಥಾನ ಕೊಡದಿರಲು ಜೆಡಿಎಸ್ ನಿರ್ಧರಿಸಿತ್ತು. ಇದ್ರಿಂದ ಹೊರಟ್ಟಿಗೆ ಸಚಿವ ಸ್ತಾನ ಕೈತಪ್ಪಿತ್ತು. ಇದೀಗ ಸಬಾಪತಿ ಸ್ಥಾನವನ್ನ ಹೊರಟ್ಟಿ ಬಿಟ್ಟುಕೊಟ್ಟಿರುವುದನ್ನ ಗಮನಿಸಿದರೆ ಸಚಿವ ಸ್ಥಾನ ಖಾತ್ರಿ ಆದಂತಿದೆ.