ರಾಮನಗರ, [ಅ.30]:  ಕುಮಾರಸ್ವಾಮಿ ನಡವಳಿಕೆಯಿಂದ ಮುನಿಸಿಕೊಂಡಿದ್ದ ಜೆಡಿಎಸ್ ವಿಧಾನಪರಿಷತ್ ಸದಸ್ಯರು ಮತ್ತೆ ಸುದ್ದಿಯಲ್ಲಿದ್ದಾರೆ.

ಉಪಚುನಾವಣೆ ಬೆನ್ನಲ್ಲೇ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಜೆಡಿಎಸ್ ತೊರೆಯುವುದಾಗಿ ಘೋಷಿಸಿದ್ದಾರೆ.  ಇನ್ನು ಈ ಬಗ್ಗೆ ರಾಮನಗರದಲ್ಲಿ ಇಂದು [ಬುಧವಾರ] ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪುಟ್ಟಣ್ಣ, ನಾನು ಜೆಡಿಎಸ್ ಪಕ್ಷ ಬಿಡಲು ತೀರ್ಮಾನ ಮಾಡಿದ್ದೇನೆ. ಆದರೆ ಮುಂದಿನ ದಿನಗಳಲ್ಲಿ ಅದನ್ನ ಪ್ರಕಟ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ನಲ್ಲಿ ಅಸಮಾಧಾನ ಸ್ಫೋಟ: ಅಪ್ಪ-ಮಗ ಥಂಡಾ

ನನಗೆ ಸಹಕಾರ ಕೊಟ್ಟಿರುವ ಶಿಕ್ಷಕರಿದ್ದು, ಅವರ ಜೊತೆಗೆ ನಾನು ಚರ್ಚೆ ಮಾಡುತ್ತೇನೆ. ಬಹುತೇಕ ಎಲ್ಲಾ ಜೆಡಿಎಸ್ MLC ಗಳು ಇದೇ ತೀರ್ಮಾನ ಮಾಡಿದ್ದಾರೆ. ಹೊರಟ್ಟಿಯವರು ಈ ಬಗ್ಗೆ ಮಾತನಾಡಿದ್ದು, ಚರ್ಚೆ ಮಾಡೋಣ ಎಂದಿದ್ದಾರೆ ಎಂದು ಹೇಳುವ ಮೂಲಕ ಜೆಡಿಎಸ್ ಗೆ ಶಾಕ್ ಕೊಟ್ಟರು.

ಈಗಲೇ ನಾನು ಎಲ್ಲವನ್ನ ಹೇಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವನ್ನು ಸ್ಪಷ್ಟಪಡಿಸುತ್ತೇನೆ. ಪಕ್ಷದಲ್ಲಿ ಆದ ನೋವಿನ ಬಗ್ಗೆ ವರಿಷ್ಠರಿಗೆ ಹೇಳಿದ್ದೀರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲವರಿಗೆ ಯಾರಿಗೆ ನೋವಾದ್ರು, ಯಾರು ಸತ್ತರು ಏನು ಅನಿಸಲ್ಲ ಎಂದು ಕುಮಾರಸ್ವಾಮಿ ಹೆಸರು ಹೇಳಿದ ಟಾಂಗ್ ಕೊಟ್ಟರು.

ಸಾ.ರಾ. ಮಹೇಶ್ ರಾಜೀನಾಮೆ ಬೆನ್ನಲ್ಲೇ ಮತ್ತೋರ್ವ JDS ನಾಯಕ ಸರದಿಯಲ್ಲಿ?

ಪುಟ್ಟಣ್ಣ ಅವರು ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ 3 ಬಾರಿ ಗೆದ್ದು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಇತ್ತೀಚೆಗೆ ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರವಾಗಿರುವ ಅವರು, ಇದೀಗ ಜೆಡಿಎಸ್ ತೊರೆಯುವುದಾಗ ಕಡ್ಡಿ ಮುರಿದಂತೆ ಹೇಳಿದ್ದಾರೆ.

 ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಎಚ್. ಡಿ. ಕುಮಾರಸ್ವಾಮಿ ವಿಧಾನ ಪರಿಷತ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ, ಯಾವುದೇ ಸ್ಥಾನಮಾನ ನೀಡಿಲ್ಲ ಎಂಬುದು ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಸೇರಿದಂತೆ ಹಲವು ನಾಯಕರ ಆರೋಪ ಮಾಡಿದ್ದರು. ಅಷ್ಟೇ ಅಲ್ಲದೇ ಈ ಬಗ್ಗೆ  ಹೊರಟ್ಟಿ ನೇತೃತ್ವದಲ್ಲಿ ಅಸಮಾಧಾನಗೊಂಡ ನಾಯಕರು ಸಭೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹದು.

ಒಟ್ಟಿನಲ್ಲಿ ಪುಟ್ಟಣ್ಣ ಹೇಳಿದಂತೆ ಇದು ಜಸ್ಟ್ ಟ್ರೈಲರ್ ಅನ್ನಿಸುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜೆಡಿಎಸ್ ನಾಯಕರು ಪಕ್ಷ ತೊರೆಯವುದು ಖಚಿತವಾದಂತಿದೆ.