Asianet Suvarna News Asianet Suvarna News

JDS ವಿಧಾನಸಭೆ- ವಿಧಾನಪರಿಷತ್ ಸದಸ್ಯರ ಜಟಾಪಟಿ, ಎಂಎಲ್ಸಿ ರಾಜಕೀಯ ನಿವೃತ್ತಿ ಸವಾಲು

* ಜೆಡಿಎಸ್ ವಿಧಾನಸಭೆ- ವಿಧಾನಪರಿಷತ್ ಸದಸ್ಯರ ಜಟಾಪಟಿ
* ಎಂಎಲ್‌ಸಿ ವಿರುದ್ಧ ವಿರುದ್ಧ ಗಂಭೀರ ಆರೋಪ ಮಾಡಿದ ಎಂಎಲ್‌ಎ
* ರಾಜಕೀಯ ನಿವೃತ್ತಿ ಸವಾಲು ಹಾಕಿದ ಎಂಎಲ್‌ಸಿ

JDS MLC Govindaraju Challenged to Kolar MLA Srinivas gouda rbj
Author
Bengaluru, First Published Dec 29, 2021, 6:28 PM IST

ಕೋಲಾರ, (ಡಿ.29): ನಾನು ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದಷ್ಟು ದಿನ ಯಾವುದೇ ರೀತಿ ಅಕ್ರಮ ನಡೆಸಿಲ್ಲ. ಆದರೆ, ಶಾಸಕ ಶ್ರೀನಿವಾಸಗೌಡರು ಮಾಡಿರುವ ಆರೋಪ ಸಾಬೀತುಪಡಿಸಿದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವಿಧಾನ ಪರಿಷತ್‌ ಸದಸ್ಯ ಇಂಚರ ಗೋವಿಂದರಾಜು (Govindaraju) ಸವಾಲು ಹಾಕಿದರು.

ನಗರದ ತಮ್ಮ ಕಚೇರಿಯಲ್ಲಿ ಸೋಮವಾರವಷ್ಟೇ ಶಾಸಕ ಶ್ರೀನಿವಾಸಗೌಡರು(K Shrinivas Gowda) ) ಮಾಡಿದ್ದ ಆರೋಪಕ್ಕೆ ಉತ್ತರಿಸುವ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಅವರು ಹೇಳಿರುವಂತೆ ಅಕ್ರಮ ಎಸಗಿದ್ದರೆರಾಜಕೀಯದಿಂದ ದೂರವಾಗುತ್ತೇನೆ. ಆದರೆ, ಅದನ್ನು ಸಾಬೀತುಪಡಿಸಲಾಗದಿದ್ದರೆ ಶ್ರೀನಿವಾಸಗೌಡರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದ ದೂರ ಸರಿಯಲು ಎಂದು ಆಗ್ರಹಿಸಿದರು.

ಗುಲಾಮನಂತಿರಲು ಆಗದೆ ಪಕ್ಷ ತೊರೆದು ಕಾಂಗ್ರೆಸ್‌ಗೆ ಮರಳಿದೆ : ಶಾಸಕ

ಮಾನನಷ್ಟ ಮೊಕದ್ದಮೆ ದಾಖಲು: ಶಾಸಕ ಶ್ರೀನಿವಾಸಗೌಡರ ವಯಸ್ಸು, ರಾಜಕಾರಣದ ಬಗ್ಗೆ ಬಹಳ ಗೌರವ ಇದೆ. ಆದರೆ, ಗೌರವಕ್ಕೆ ತಕ್ಕಂತೆ ನಡೆದುಕೊಂಡಿಲ್ಲ. ನಾನು ಸಾರಿಗೆ ಸಂಸ್ಥೆಯ ಕೆಲಸಕ್ಕೆ ಸೇರಿದ್ದು 1985ರಲ್ಲಿ. ಆನಂತರ 1987ರಲ್ಲಿ ವರ್ಗಾವಣೆಯಾಗಿ 1988ಕ್ಕೆ ಬೆಂಗಳೂರು ಬಿಎಂಟಿಸಿಗೆ ಬಂದೆ,ಆನಂತರ 1996ರಲ್ಲಿ ಸ್ವಯಂ ನಿವೃತ್ತಿಪಡೆದು ಕೃಷಿ ಚಟವಟಿಕೆಗಳನ್ನು ಆರಂಭಿಸಿ, ಈಗ ಉದ್ಯಮಿಯಾಗಿದ್ದೇನೆ. ಅವರು ನನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತುಪಡಿಸದಿದ್ದರೆ ಮಾನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜಕೀಯದಿಂದ ಹಿಂದೆ ಸರಿಯಲಿ: ಶ್ರೀನಿವಾಸಗೌಡರು ಪ್ರಥಮವಾಗಿ ಶಾಸಕರಾಗಿ 1990ರಲ್ಲಿ. ಅವರು ಇದನ್ನು ಮರೆತಿದ್ದಾರೆ. ಸಂಸ್ಥೆಯಲ್ಲಿ 11 ವರ್ಷ ಸೇವೆ ಸಲ್ಲಿಸಿದ್ದೇವೆ,ಈಗಲೂ ನನಗೆ ಉತ್ತಮ ಹೆಸರು ಇದೆ. ನಾನು ತಪ್ಪು ಮಾಡಿದ್ದರೆ ತನಿಖೆಯಾಗಿರುವ ದಾಖಲೆಗಳು ಇರುತ್ತವೆ. ವಯಸ್ಸನಲ್ಲಿಹಿರಿಯರಿದ್ದಾರೆ, ನಿರೂಪಿಸದಿದ್ದರೆ ರಾಜಕೀಯದಿಂದ ಹಿಂದಕ್ಕೆ ಸರಿಯಲಿ ಎಂದು ಸಲಹೆ ನೀಡಿದರು.

ಸಚಿವರಿಗೆ ಪತ್ರ ಬರೆದಿದ್ದೇನೆ: ಕಲಾಪಗಳಲ್ಲಿ ವರ್ತನೆ ನಮ್ಮಂತವರಿಗೆ ಆಗಿ ಬರಲ್ಲ. ಕೋಲಾರ ನಗರದಲ್ಲಿ 80 ಕಿ.ಮೀ ಈಗಲೂ ಮಣ್ಣು ರಸ್ತೆಗಳು ಇವೆ, ನಗರಸಭೆಯನ್ನು ಎ ಗ್ರೇಡ್‌ಗೆ ಏರಿಸಲಾಗಿದೆ, ಪ್ರಮುಖ ಮೂರು ರಸ್ತೆಗಳಲ್ಲಿ ಬೀದಿದೀಪ ಆವಳವಡಿಸಲು ಕ್ರಮಕೈಗೊಳ್ಳಲಾಗಿದ್ದು, ಈ ಬಗ್ಗೆ ನಗರಾಭಿವೃದ್ಧಿಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಜನ ಪ್ರಶ್ನೆ ಮಾಡಲಿ: ನಗರ, ಕ್ಷೇತ್ರ ಬಗ್ಗೆ ಶ್ರೀನಿವಾಸಗೌಡರಿಗೆ ಕಾಳಜಿಯಿಲ್ಲ. ಅವರನ್ನು ಬಲವಂತ ಮಾಡಿ ತಾಜ್‌ ಹೋಟೆಲ್‌ಗೆ ಕರೆದುಕೊಂಡು ಹೋಗಿ ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಸಿ ಮೂರು ರಸ್ತೆಗೆ 17 ಕೋಟಿ ರೂ. ಮಂಜೂರು ಮಾಡಿಸಲಾಯಿತು. ಜ್ಞಾಪಕ ಇದ್ರೆ ಮೆಲಕು ಹಾಕಲಿ. ನಾನು ರಾಜಕಾರಣ ಮಾಡಲ್ಲ. ಜಿಲ್ಲೆಯಲ್ಲಿ ಸಂಸದರು, ಶಾಸಕರುಇದ್ದಾರೆ ಎಷ್ಟರ ಮಟ್ಟಿಗೆ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ ಎಂಬುದಕ್ಕೆ ಜನ ಪ್ರಶ್ನೆ ಮಾಡಲಿ ಎಂದು ಕಿವಿಮಾತು ಹೇಳಿದರು.

ಕೊಟ್ಟಿರುವ ಹಣ ಚುಕ್ತಾ ಮಾಡಲಿ :
ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಶ್ರೀನಿವಾಸಗೌಡರ ಮೇಲಿನ ಗೌರವದಿಂದ ಜೆಡಿಎಸ್‌ನಲ್ಲಿ ಕೆಲಸ ಮಾಡಿದ್ದೇನೆ. ಇದರಿಂದಾಗಿ 2018ರ ಚುನಾವಣೆಯ ಬಿಫಾರಂ ಗೌಡರಿಗೆ ಕೊಡಿಸಲು ಅನುಕೂಲವಾಯಿತು. ಆದರೆ, ಈ ಚುನಾವಣೆಯಿಂದ ನನಗೆ ಆರ್ಥಿಕ ಹೊರೆ ತಂದಿದ್ದಾರೆ. ಆನಷ್ಟದಿಂದ ಹೊರಬರಲು ಸಾಧ್ಯವಾಗಿಲ್ಲ. ನಾನು ನೀಡಿರುವಹಣ ಚುಕ್ತಾ ಮಾಡಿ ಹೇಳಿಕೆ ನೀಡಲಿ. ಅವರ ಬಗ್ಗೆ ಸಾಕಷ್ಟುದುಗುಡ ಇದೆ. ಮುಂದಿನ ದಿನಗಳಲ್ಲಿ ಸಾಕ್ಷಿ ಸಮೇತ ಬಹಿರಂಗ ಪಡಿಸಲಾಗುವುದು ಎಂದು ತಿಳಿಸಿದರು.

ನಾನು ಯಾರನ್ನು ಓಲೈಸಿಕೊಂಡು ಶಾಸಕನಾಗಿಲ್ಲ. ಗೌಡರ ಋಣದಲ್ಲಿ ನಾನು ಇಲ್ಲ. ಎಂಎಲ್ಸಿಯಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ನನ್ನದು ತೆರೆದ ಪುಸ್ತಕ ಇದ್ದಂತೆ. ಶ್ರೀನಿವಾಸಗೌಡರೇ ನೀವು ಕಾಂಗ್ರೆಸ್‌ ಪಕ್ಷಕ್ಕೆ ಹೋಗಿದ್ದೀರಾ ಅಲ್ಲಾದರೂ ನಿಷ್ಠೆಯಿಂದ ಇರಿ ಎಂದುಎಂಎಲ್ಸಿ ಇಂಚರ ಗೋವಿಂದರಾಜು ವ್ಯಂಗ್ಯವಾಡಿದರು. ಶಾಸಕಶ್ರೀನಿವಾಸಗೌಡರಿಗೋಸ್ಕರ ಮಾಡಿದ ಖರ್ಚು ನನ್ನ ಶ್ರಮದಿಂದಸಂಪಾದನೆ ಮಾಡಿದ್ದು. ಜೆಡಿಎಸ್‌ನಲ್ಲಿ ಉಸಿರುಗಟ್ಟಿದ ವಾತಾವರಣ ಇದೆ ಎಂಬುದು ಗೊತ್ತಿದ್ದರೂ ಬಿ ಫಾರಂಗಾಗಿ ನನ್ನಲ್ಲಿಗೆ ಯಾಕೆ ಬರಬೇಕಿತ್ತು. ಕಾಂಗ್ರೆಸ್‌ನಲ್ಲಿ ನಿಮಗೆ ಪೂರಕ ವಾತಾವರಣ ಇದೆ. ಸತ್ಯ ಬೆಂಕಿ ಇದ್ದಹಾಗೆ ಎಂದರು.

Follow Us:
Download App:
  • android
  • ios