Asianet Suvarna News Asianet Suvarna News

ಕರ್ನಾಟಕದ ಹಣ ತಿರುಪತಿಗೆ ಕೊಟ್ಟಿದ್ದು ಸುಳ್ಳಾ?: ಡಿಸಿ ರೋಹಿಣಿಗೆ ಜೆಡಿಎಸ್ ಶಾಸಕ ಪ್ರಶ್ನೆಗಳ ಸುರಿಮಳೆ..!

* ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಶಾಸಕ‌ ಸಾ.ರಾ.ಮಹೇಶ್ ವಾಗ್ದಾಳಿ
* ಆರೋಪ ಮಾಡಿದವರು ಕ್ಷಮೆ ಕೇಳಬೇಕು ಎಂದು ರೋಹಿಣಿ ಸಿಂಧೂರಿ ಹೇಳಿಕೆಗೆ ಸಾರಾ ಮಹೇಶ್ ಕೆಂಡಾಮಂಡಲ
* ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಸಾ.ರಾ ಮಹೇಶ್​​ ಪ್ರಶ್ನೆಗಳ ಸುರಿಮಳೆ

JDS MLA Sara Mahesh Hits out at Mysuru DC Rohini Sindhuri rbj
Author
Bengaluru, First Published May 16, 2021, 3:30 PM IST

ಮೈಸೂರು, (ಮೇ.16): ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಶಾಸಕ‌ ಸಾ.ರಾ.ಮಹೇಶ್ ವಾಗ್ದಾಳಿ ಮುಂದುವರೆದಿದ್ದು, ನನ್ನ ಮೇಲೆ ಆರೋಪ ಮಾಡಿದವರು ಕ್ಷಮೆ ಕೇಳಬೇಕು ಎಂದು ರೋಹಿಣಿ ಸಿಂಧೂರಿ ಹೇಳಿಕೆಗೆ ಸಾ.ರಾ ಮಹೇಶ್​​ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಇಂದು (ಭಾನುವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹೇಶ್​, ಒಬ್ಬ ಕನ್ನಡಿಗ ದಲಿತ ಡಿಸಿಯನ್ನು 28 ದಿನಕ್ಕೆ ವರ್ಗಾವಣೆ ಮಾಡಿಸಿದ್ದು ಸುಳ್ಳಾ? ನಿಮ್ಮ ಹಾಸನದ ಪ್ರಕರಣದಲ್ಲಿ ತಕ್ಷಣ ನಿಮ್ಮ ಪರ ತೀರ್ಪು ಬಂತು. ಈಗ ಅದರ ತೀರ್ಪು ಬರದಂತೆ ಸಿಎಟಿ ಮ್ಯಾನೇಜ್ ಮಾಡಿದ್ದು ಸುಳ್ಳಾ?  ಎಂದು ಪ್ರಶ್ನಿಸಿದರು.

'7 ತಿಂಗಳಿಂದಲೂ ಇದೇ ಆಗಿದೆ : ಆರೋಪ ಮಾಡಿದವರು ಕ್ಷಮೆ ಕೇಳಲಿ' 

ವಾಲ್ಮಿಕಿ ಜಯಂತಿ ಆಚರಣೆಗೆ ಬರಲಿಲ್ಲ, ಬಂಡೀಪುರಕ್ಕೆ ಹೋಗಿದ್ದು ಸುಳ್ಳಾ? ಸೋಂಕಿತರಿಗೆ ಮಾತ್ರೆ ಕೊಡಲು ದುಡ್ಡಿಲ್ಲ. ಆದ್ರೆ ಕೊರೋನಾ ಸಂದರ್ಭದಲ್ಲಿ ಡಿ.ಸಿ ಮನೆಯಲ್ಲಿ ಇನ್ಡೋರ್ ಜಿಮ್, ಸ್ವಿಮ್ಮಿಂಗ್ ಪೂಲ್ ಏಕೆ? ಪಾರಂಪರಿಕ ಕಟ್ಟಡದಲ್ಲಿ ಈಜುಕೊಳಕ್ಕೆ ಅನುಮತಿ ಕೊಟ್ಟವರು ಯಾರು? ಇದಕ್ಕೆ ಹಣ ಎಲ್ಲಿಂದ ಬಂತು ? ಅದು ಕಟ್ಟಿರೋದು ಸುಳ್ಳಾ? ರಾಜ್ಯದ ಸಿಎಂ, ರಾಷ್ಟ್ರದ ಪಿಎಂ ಮನೆಯಲ್ಲಿ ಈಜುಕೊಳ ಇದೆಯಾ? ರಾಜ್ಯ ಮುಖ್ಯ ಕಾರ್ಯದರ್ಶಿ ಮನೆಯಲ್ಲಿ ಇದೆಯಾ? ನಾವು ನೀವು ಜನರಿಗೆ ಮಾದರಿಯಾಗಿರಬೇಕು. ಕರ್ನಾಟಕದ ಹಣ ತಿರುಪತಿಗೆ ಕೊಟ್ಟಿದ್ದು ಸುಳ್ಳಾ? ಎಂದರು.

ಐಎಎಸ್ ಅಧಿಕಾರಿಗಳ ಬೇಜವಾಬ್ದಾರಿಯಿಂದ ರಾಜ್ಯ ಹೊತ್ತಿ ಉರಿದಿದ್ದು ಸುಳ್ಳ. ಈಜುಕೊಳದ 50 ಲಕ್ಷ ಕೊರೋನಾಗೆ ಬಳಸಬೇಕಿತ್ತು. ನಿಮ್ಮನ್ನು ಯಾರು ಕೇಳಬೇಕು? ಇಂತಹ ಪರಿಸ್ಥಿತಿಯಲ್ಲೂ ಮೈಸೂರಿನಲ್ಲಿ ಶಾಸಕರು, ಪಾಲಿಕೆ ಸದಸ್ಯರು ಕೆಲಸ ಮಾಡುತ್ತಿರುವುದಕ್ಕೆ ಕ್ಷಮೆ ಕೇಳಬೇಕು.ಇದಕ್ಕೆ ಸೂಕ್ತ ವೇದಿಕೆಯಲ್ಲಿ ತಕ್ಕ ಉತ್ತರ ನೀಡುವೆ. ಇದೆಲ್ಲಾ ಏನೇ ಇರಲಿ ನೊಂದವರ ನಿಟ್ಟುಸಿರು ತಟ್ಟದೆ ಬಿಡುವುದಿಲ್ಲ ಎಂದು ರೋಹಿಣಿ ಸಿಂಧೂರಿ ವಿರುದ್ದ ಕಿಡಿಕಾರಿದರು.

Follow Us:
Download App:
  • android
  • ios