* ಮಂಡ್ಯದಲ್ಲಿ ಮತ್ತೆ ಆರಂಭವಾದ ಸಂಸದೆ ಸುಮಲತಾ, ಜೆಡಿಎಸ್ ಶಾಸಕರ ವಾಗ್ಯುದ್ದ* ಶಾಸಕರು ಕೆಲಸ ಮಾಡ್ತಿಲ್ಲ, ಜನರು ನನ್ನ ಬಳಿ ಬರ್ತಿದ್ದಾರೆ ಎಂದಿದ್ದ ಸುಮಲತಾ* ಮಾನ್ಯ ಸಂಸದರೆ ನೀವು ಮೊದಲು ಜನರ ಬಳಿ ಬನ್ನಿ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿ

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ, ಮಂಡ್ಯ. 

ಮಂಡ್ಯ, (ಮಾ.21):
ಮಂಡ್ಯ ಜಿಲ್ಲೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ (Mandya MP Sumalatha Ambareesh) ಹಾಗೂ ಜೆಡಿಎಸ್‌ ಶಾಸಕರ(JDS MLA) ನಡುವಿನ ವಾಕ್ಸರ, ಆರೋಪ-ಪ್ರತ್ಯಾರೋಪಗಳು ಕಾಣಿಸುತ್ತಿಲ್ಲ.

ಹೌದು... ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ಶಾಸಕರ ವಾಗ್ಯುದ್ದ ಮತ್ತೆ ಆರಂಭವಾಗಿದೆ. ಶಾಸಕರು ಕೆಲಸ ಮಾಡ್ತಿಲ್ಲ ಜನರು ಸಮಸ್ಯೆ ಹೊತ್ತು ನನ್ನ ಬಳಿ ಬರ್ತಿದ್ದಾರೆ ಎಂದಿದ್ದ ಸಂಸದೆ ಸುಮಲತಾ ಹೇಳಿಕೆಗೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ(Ravindra Srikantaiah) ತಿರುಗೇಟು ನೀಡಿದ್ದಾರೆ. ಅಲ್ಲದೇ ಪರೋಕ್ಷವಾಗಿ ಅಂಬರೀಶ್ (Ambareesh) ಅವರಿಗೂ ಟಾಂಗ್ ಕೊಟ್ಟಿದ್ದಾರೆ.

ಮಂಡ್ಯದಲ್ಲಿ ಮುಂದುವರೆದ ಸುಮಲತಾ v/s ಜೆಡಿಎಸ್ ಸಮರ, ಗುದ್ದಲಿ ಪೂಜೆ ಮಾಡದೆ ವಾಪಸ್!

ಇಂದು(ಸೋಮವಾರ) ಶ್ರೀರಂಗಪಟ್ಟಣ ಸುದ್ದಿಗಾರರೊಂದಿದೆ ಮಾತನಾಡಿದ ಅವರು ಜೆಡಿಎಸ್‌ ಶಾಸಕರು ಕೆಲಸ ಮಾಡ್ತಿಲ್ಲ ಎಂದು ಹೇಳುವ ಮೊದಲು ನೀವು ಜನರ ಬಳಿಗೆ ಬನ್ನಿ. ತಿಂಗಳಿಗೊಮ್ಮೆ ಯಾವುದೋ ದಿಶಾ ಮೀಟಿಂಗ್ ಮಾಡಿಕೊಂಡು ಓಡಾಡಿದ್ರೆ ಆಗಲ್ಲ. ನಿಮ್ಮ ಮೇಲೆ ಮಂಡ್ಯ ಜನ ತುಂಬ ನಿರೀಕ್ಷೆ ಇಟ್ಟಿದ್ದಾರೆ. ಕೇಂದ್ರ ಸರ್ಕಾರ ನಮ್ಮ ಸೌತ್ ರೈಲ್ವೆಗೆ ಬರಿ 59 ಕೋಟಿ ನೀಡಿದೆ. 1300 ಕೋಟಿಯನ್ನ ನಾರ್ಥ್ ‌ಗೆ ನೀಡಿದ್ದಾರೆ. ಇದರ ಬಗ್ಗೆ ಯಾವ ಎಂಪಿ ಕೂಡ ಮಾತನಾಡ್ತಿಲ್ಲ. ನಮ್ಮ ಮೇಡಂ ಕೂಡ ಇಂಡಿಪೆಂಡೆಂಟ್ ಆಗಿ ಗೆದ್ದವರು. ಜನ ಪ್ರೀತಿಯಿಂದ ಗೆಲ್ಲಿಸಿದ್ದಾರೆ. ಆದ್ರೆ ಇದರ ಬಗ್ಗೆ ಸುಮಲತಾ ಒಂದು ಚಕಾರ ಎತ್ತಲಿಲ್ಲ ಎಂದು ಚಾಟಿ ಬೀಸಿದರು.

ಸುಮಲತಾಗೆ ರವೀಂದ್ರ ಪ್ರಶ್ನೆ
ಜಿಲ್ಲೆಯ ಶಾಸಕರ ಕೆಲಸ ಪ್ರಶ್ನಿಸಿದ ಸುಮಲತಾ ವಿರುದ್ಧ ಹರಿಹಾಯ್ದ ಶಾಸಕ ರವೀಂದ್ರ ಶ್ರೀಕಂಠಯ್ಯ. ಶಾಸಕರಿಗೆ, ಸಂಸದರಿಗೆ ಅನುದಾನ ಬಂದೆ ಬರುತ್ತದೆ. ಅದನ್ನು ಬಿಟ್ಟು ಬೇರೆ ಯಾವ ಅನುದಾನ ತಂದಿದ್ದೀರಾ ಎಂದು ಪ್ರಶ್ನಿಸಿದರು. ನಾನು ಅನುದಾನ ತಂದಿದ್ದೇನೆ‌, ಬೇಕು ಅಂದ್ರೆ ಲೆಕ್ಕ ಕೊಡುತ್ತೇನೆ. ಮಂಡ್ಯಕ್ಕೆ ನೀವೇನು ಅನುದಾನ ತಂದಿದ್ದಿರಿ‌ ಎಂದು ಸವಾಲು ಹಾಕಿದರು. ಮಂಡ್ಯ ಜಿಲ್ಲೆಗೆ ಸಂಸದರು ಏನ್ ಕೊಡುಗೆ ಕೊಡ್ತಾರೆ ಅಂತ ಜನ ಕಾಯುತ್ತಿದ್ದಾರೆ. ಮುಂದಿನ ಚುನಾವಣೆಗೆ ಜನರು ಉತ್ತರ ಕೊಡ್ತಾರೆ ಎಂದರು.

ಅಂಬರೀಶ್ ಸಾವಿನ ಅನುಕಂಪ ನಿಮ್ಮನ್ನ ಗೆಲ್ಲಿಸಿತು
ನೀವು ಗೆದ್ದಿದ್ದು ಅಂಬರೀಶ್ ಹೆಂಡತಿ, ಅಂಬರೀಶ್ ಅವರು ಅಕಾಲಿಕವಾಗಿ ಮರಣ ಹೊಂದಿದ್ರು ಆನ್ನೋ ಗೌರವಾರ್ಥ ಜನರು ನಿಮ್ಮನ್ನ ಗೆಲ್ಲಿಸಿದ್ದಾರೆ. ಎಲ್ಲಾ ಸಮಯದಲ್ಲೂ ಇದು ನಡೆಯಲ್ಲ.‌ ಅಂಬರೀಶ್ ಅವರು 25 ವರ್ಷ ಎಂಪಿಯಾಗಿ ಅಧಿಕಾರಿ ಅನುಭವಿಸಿದ್ದಾರೆ.
ಆದ್ರೆ ಮಂಡ್ಯ ಇದ್ದಾಗೆ ಇದೆ. ಪಕ್ಕದ ಹಾಸನ ಜಿಲ್ಲೆ ಅಭಿವೃದ್ಧಿಯಾಗಿದೆ. ಈಗಲಾದ್ರು ಎಚ್ಚೆತ್ತು ಹೋರಾಟ ಮಾಡಿ ವಿಶೇಷ ಅನುದಾನ ತೆಗೆದುಕೊಂಡು ಬನ್ನಿ ಎಂದರು.

ಅಲ್ಲದೇ ಜನರಿಗೆ ಗೊಂದಲ ಸೃಷ್ಟಿ ಮಾಡಿ ಮುಗ್ದ ಜನರು ಹೊಡೆದಾಡುವಂತೆ ಮಾಡಬೇಡಿ ಎಂದು ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ತಿರುಗೇಟು ನೀಡಿದರು.

ಗುದ್ದಲಿ ಪೂಜೆ ಮಾಡದೇ ವಾಪಸ್‌ ಆಗಿದ್ದ ಸುಮಲತಾ
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಚೌಕಹಳ್ಳಿ ಗ್ರಾಮದಲ್ಲಿ ಕಳೆದ ಬುಧವಾರ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪೂಜೆಗೆ ಸಂಸದೆ ಸುಮಲತಾ ಕೂಡ ಬಂದಿದ್ದರು. ಆದ್ರೆ ಸರಿಯಾಗಿ ಶಾಮಿಯಾನ, ಚೇರ್ ವ್ಯವಸ್ಥೆ ಮಾಡದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ಸ್ಥಳದಲ್ಲಿ ಸರಿಯಾಗಿ ಯಾವುದೇ ವ್ಯವಸ್ಥೆ ಮಾಡದಿದ್ದಕ್ಕೆ ಅಧಿಕಾರಿಗಳ ವಿರುದ್ಧ ಸಂಸದೆ ಸುಮಲತಾ ಕೆಂಡಾಮಂಡಲರಾಗಿದ್ದಾರೆ. ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್ ಪ್ರತಿನಿಧಿಸುವ K.R.ನಗರ ಕ್ಷೇತ್ರದ ಕಾರ್ಯಕ್ರಮದಲ್ಲೇ ಇಂತಹ ವ್ಯವಸ್ಥೆ ಕಂಡು ನಿಗದಿಯಾಗಿದ್ದ ಗುದ್ದಲಿ ಪೂಜೆ ನೆರವೇರಿಸದೆ ಸುಮಲತಾ ವಾಪಸ್ ಆಗಿದ್ದರು.