Asianet Suvarna News Asianet Suvarna News

ರೇವಣ್ಣಗೂ ಕೊರೋನಾ: ಒಂದೇ ಜಿಲ್ಲೆಯ ಮೂವರು ಜೆಡಿಎಸ್ ಶಾಸಕರಿಗೆ ಸೋಂಕು

ಜ್ವರದಿಂದ ಆಸ್ಪತ್ರೆಗೆ ದಾಖಲಾದ್ದ ಮಾಜಿ ಸಚಿವ , ಶಾಸಕ ಎಚ್‌ಡಿ ರೇವಣ್ಣ ಅವರಿಗೆ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ಒಂದೇ ಜಿಲ್ಲೆ ಮೂವರು ಜೆಡಿಎಸ್ ಶಾಸಕರಿಗೆ ಸೋಂಕು ದೃಢಪಟ್ಟಂತಾಗಿದೆ.

JDS MLA hd revanna tests positive For Coroanvirus
Author
Bengaluru, First Published Aug 28, 2020, 2:54 PM IST

ಬೆಂಗಳೂರು, (ಆ.28): ಜೆಡಿಎಸ್ ಶಾಸಕ ಎಚ್. ಡಿ. ರೇವಣ್ಣ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಇವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಮೊದಲು ಜ್ವರ ಕಾಣಿಸಿಕೊಂಡಿದ್ದರಿಂದ ರೇವಣ್ಣ ಅವರು ಇಂದು (ಶುಕ್ರವಾರ) ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರಿಗೆ ಕೊರೋನಾ ಟೆಸ್ಟ್ ಮಾಡಲಾಗಿದ್ದು, ವರದಿಯಲ್ಲಿ ಪಾಸಿಟಿವ್ ಅಂತ ಬಂದಿದೆ. ಈ ಹಿನ್ನೆಲೆಯಲ್ಲಿ  ಅವರಿಗೆ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ಮುಂದುವರೆದಿದೆ.

ಮತ್ತೋರ್ವ ಜೆಡಿಎಸ್‌ ಶಾಸಕರೊಬ್ಬರಿಗೆ ಕೊರೋನಾ: ಚೇತರಿಕೆಗೆ ದೇವೇಗೌಡ ಹಾರೈಕೆ

ಸದ್ಯ ಎಚ್​​.ಡಿ ರೇವಣ್ಣ ಬೆಂಬಲಿಗರು, ಕಾರ್​​ ಚಾಲಕ ಸೇರಿದಂತೆ ಮನೆಯ ಸದಸ್ಯರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹಾಗೆಯೇ ಅವರೊಂದಿಗೆ ಇತ್ತೀಚೆಗೆ ಸಂಪರ್ಕ ಹೊಂದಿದ್ದ ಎಲ್ಲರನ್ನು ಕೋವಿಡ್​​-19 ಟೆಸ್ಟ್​ಗೆ ಒಳಗಾಗುವಂತೆ ರೇವಣ್ಣ ಮನವಿ ಮಾಡಿದ್ದಾರೆ.

 ಇನ್ನು, ಎಚ್​.ಡಿ ರೇವಣ್ಣಗೆ ಹಲವರು ಹಿರಿಯ ರಾಜಕಾರಣಿಗಳು ಸೇರಿದಂತೆ ಬೆಂಬಲಿಗರು ಫೋನ್​​ ಮಾಡಿ ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ. ಎಲ್ಲರೂ ಶೀಘ್ರದಲ್ಲೇ ರೇವಣ್ಣ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಈಗಾಗಲೇ ಹಾಸನ ಜಿಲ್ಲೆಯ ಬೇಲೂರು ಜೆಡಿಎಸ್ ಶಾಸಕ ಲಿಂಗೇಶ್ ಹಾಗೂ ಅರಸೀಕೆರೆ ಕ್ಷೇತ್ರದ ಶಾಸಕ ಕೆ. ಎಂ ಶಿವಲಿಂಗೇಗೌಡರಿಗೂ ಕೋವಿಡ್​​-19 ಪಾಸಿಟಿವ್​​ ಕಾಣಿಸಿಕೊಂಡಿತ್ತು. ಇದೀಗ ಜಿಲ್ಲೆಯ ಮೂರನೇ ಜೆಡಿಎಸ್ ಶಾಸಕ ರೇವಣ್ಣ ಅವರಿಗೂ ಕೊರೋನಾ ವಕ್ಕರಿಸಿದೆ.

Follow Us:
Download App:
  • android
  • ios