ಶ್ರೀರಾಮುಲು ಭೇಟಿ ಬಳಿಕ ಜಿಟಿಡಿ ರಿಯಾಕ್ಷನ್: ಸಂಚಲನ ಮೂಡಿಸಿದ ಗೌಡ್ರ ಮಗ ಹರೀಶ್ ಮಾತು
ಮೈಸೂರಿನಲ್ಲಿ ಸಚಿವ ಶ್ರೀರಾಮುಲು ಭೇಟಿ ಮಾಡಿದ ಬಳಿಕ ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆದ್ರೆ, ಜಿಟಿಡಿ ಪುತ್ರ ಮಾತ್ರ ಒಂದು ಹೇಳಿಕೆ ಕೊಟ್ಟು ಭಾರೀ ಸಂಚಲ ಮೂಡಿಸಿದ್ದಾರೆ. ಹಾಗಾದ್ರೆ ಜಿಟಿಡಿ ಸಪೋರ್ಟ್ ಯಾರಿಗೆ..? ಈ ಬಗ್ಗೆ ಅವರು ಏನು ಹೇಳಿದ್ರು..? ಮುಂದೆ ಓದಿ...
ಮೈಸೂರು, [ನ.25]: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದಾರೆ. ಜೆಡಿಎಸ್ ನ ಯಾವ ಕಾರ್ಯಕ್ರಮದಲ್ಲಿಯೂ ಅವರು ಪಾಲ್ಗೊಳ್ಳುದೇ ದೂರ ಆಗಿದ್ದಾರೆ. ಆದ್ರೆ, ಬಿಜೆಪಿ ಹತ್ತಿರವಾಗುತ್ತಿದ್ದಾರೆ.
ಇದೀಗ ಉದ್ಭವಿಸಿರುವ ಪ್ರಶ್ನೆ ಅಂದ್ರೆ ಹುಣಸೂರು ಉಪಚುನಾವಣೆಯಲ್ಲಿ ಜಿಟಿ ದೇವೇಗೌಡ್ರ ಬೆಂಬಲ ಯಾವ ಪಕ್ಷಕ್ಕೆ ಎನ್ನುವುದು. ಹೌದು..ಹುಣಸೂರು ಬೈ ಎಲೆಕ್ಷನ್ ನಲ್ಲಿ ಜಿಟಿಡಿ ಯಾರಿಗೆ ಬೆಂಲಿಸುತ್ತಾರೆ ಎನ್ನುವುದು ನಿಗೂಢವಾಗಿದೆ.
ರಂಗೇರಿದ ಹುಣಸೂರು ಬೈ ಎಲೆಕ್ಷನ್: ಹೇಳಿದಂತೆ ಜಿಟಿಡಿ ಮನೆಗೆ ಶ್ರೀರಾಮುಲು
ಇತಂಹ ಸಂದರ್ಭದಲ್ಲಿ ಸಚಿವ ಶ್ರೀರಾಮುಲು ಹುಟ್ಟುಹಬ್ಬದ ಶಭಾಶಯ ತಿಳಿಸಲು ಜಿಟಿ ದೇವೇಗೌಡರನ್ನ ಭೇಟಿ ಮಾಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಮೈಸೂರಿನಲ್ಲಿ ಶ್ರೀರಾಮುಲು ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಟಿಡಿ. ನನಗೆ ಮೂರು ಪಕ್ಷದವರು ಬೆಂಬಲ ಕೇಳಿದ್ದಾರೆ. ಸಿಎಂ ಬಿಎಸ್ ವೈ, ಮಾಜಿ ಸಿಎಂ ಸಿದ್ದರಾಮಯ್ಯರು ಕರೆ ಮಾಡಿ ಬೆಂಬಲ ಕೋರಿದ್ದಾರೆ.
ಅದೆ ರೀತಿ ಮೂರು ಪಕ್ಷದ ಅಭ್ಯರ್ಥಿಗಳು ಸಪೋರ್ಟ್ ಮಾಡುವಂತೆ ಮನವಿ ಮಾಡಿದ್ದಾರೆ. ಆದ್ರೆ ಎಲ್ಲರಿಗೂ ಒಳ್ಳೆಯದಾಗಲಿ ಅಂತ ಹೇಳಿದ್ದೇನೆ ಅಷ್ಟೆ. ನಾನು ಸದ್ಯಕ್ಕೆ ತಟಸ್ಥವಾಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದು, ಮುಂದಿನ ದಿನಗಳ ಬಗ್ಗೆ ಏನೂ ಹೇಳಿಲ್ಲ.
ಆದ್ರೆ. ಜಿಟಿಡಿ ಪುತ್ರ ಹರೀಶ್ ಮಾತನಾಡಿ ಮುಂದಿನ 10 ದಿನಗಳಲ್ಲಿ ಏನಾಗುತ್ತದೆ ನೋಡಿ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲ ಮೂಡಿಸಿದರು.