ಚನ್ನಪಟ್ಟಣ ಉಪಚುನಾವಣೆ: ಜೆಡಿಎಸ್‌ಗೆ ಟಿಕೆಟ್ ಕೊಟ್ಟರೆ ಯೋಗೇಶ್ವರ್ ಬಂಡಾಯ ಸಾರಲ್ಲ, ಎ.ಮಂಜು
ಕೇಂದ್ರದಲ್ಲಿ ಕುಮಾರಸ್ವಾಮಿ ಅವರು ಸಚಿವರಾಗಿದ್ದಾರೆ. ಮೋದಿಜಿ, ಅಮಿತ್ ಶಾ ಅವರೆಲ್ಲರೂ ಕುಳಿತು ಚರ್ಚಿಸಿ ನಿರ್ಧರಿಸುತ್ತಾರೆ. ನಮ್ಮವರಿಗೆ ಟಿಕೆಟ್ ಸಿಕ್ಕಿದರೆ ಎಲ್ಲರೂ ಸಹಕಾರ ನೀಡಲೇಬೇಕು. ಹೀಗಾಗಿ ಯೋಗೇಶ್ವರ್ ಅವರು ಬಂಡಾಯ ಸಾರಲ್ಲ ಅಂದುಕೊಂಡಿದ್ದೇವೆ. ಯೋಗೇಶ್ವರ್ ಅವರಿಗೆ ಟಿಕೆಟ್ ಸಿಕ್ಕರೆ ನಾವು ಸಹಕಾರ ನೀಡುತ್ತೇವೆ. ಅಂದ ಮೇಲೆ ಅವರು ನಮ್ಮವರಿಗೆ ಸಹಕಾರ ನೀಡಲೇಬೇಕು: ಅರಕಲಗೂಡು ಶಾಸಕ ಎ. ಮಂಜು
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಅ.18): ಲೋಕಸಭಾ ಚುನಾವಣೆಯಿಂದಲೂ ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು ಜೆಡಿಎಸ್ ಗೆ ಟಿಕೆಟ್ ನೀಡಿದರೆ ಸಿ.ಪಿ. ಯೋಗೇಶ್ವರ್ ಅವರು ಯಾವುದೇ ಕಾರಣಕ್ಕೂ ಬಂಡಾಯ ಸಾರಲ್ಲ. ಬದಲಾಗಿ ಮೈತ್ರಿ ಧರ್ಮ ಪಾಲಿಸುತ್ತಾರೆ ಎಂದು ಅರಕಲಗೂಡು ಶಾಸಕ ಎ. ಮಂಜು ಪ್ರತಿಕ್ರಿಯಿಸಿದ್ದಾರೆ.
ಇಂದು(ಶುಕ್ರವಾರ) ಜಿಲ್ಲೆಯ ಕುಶಾಲನಗರ ಸಮೀಪದ ಹಾರಂಗಿ ಜಲಾಶಯಕ್ಕೆ ಮಗನೊಂದಿಗೆ ಬಾಗಿನ ಅರ್ಪಿಸಲು ಆಗಮಿಸಿದ್ದ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಎ. ಮಂಜು ಅವರು, ಈ ಹಿಂದೆ ನಮ್ಮ ಪಕ್ಷದವರೇ ಶಾಸಕರಾಗಿದ್ದರು, ಹೀಗಾಗಿ ಮತ್ತೆ ಅಲ್ಲಿ ನಮ್ಮವರಿಗೆ ಟಿಕೆಟ್ ಕೊಡಬೇಕು. ನಮ್ಮವರಿಗೆ ಟಿಕೆಟ್ ಕೊಡಿ ಎಂದು ಕೇಳುವುದು ನಮ್ಮ ಧರ್ಮ ಎಂದಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಮತ್ತೊಂದು ತಿರುವು! ಶಾಸಕ ಎ ಮಂಜು ಕೈವಾಡ?
ಕೇಂದ್ರದಲ್ಲಿ ಕುಮಾರಸ್ವಾಮಿ ಅವರು ಸಚಿವರಾಗಿದ್ದಾರೆ. ಮೋದಿಜಿ, ಅಮಿತ್ ಶಾ ಅವರೆಲ್ಲರೂ ಕುಳಿತು ಚರ್ಚಿಸಿ ನಿರ್ಧರಿಸುತ್ತಾರೆ. ನಮ್ಮವರಿಗೆ ಟಿಕೆಟ್ ಸಿಕ್ಕಿದರೆ ಎಲ್ಲರೂ ಸಹಕಾರ ನೀಡಲೇಬೇಕು. ಹೀಗಾಗಿ ಯೋಗೇಶ್ವರ್ ಅವರು ಬಂಡಾಯ ಸಾರಲ್ಲ ಅಂದುಕೊಂಡಿದ್ದೇವೆ. ಯೋಗೇಶ್ವರ್ ಅವರಿಗೆ ಟಿಕೆಟ್ ಸಿಕ್ಕರೆ ನಾವು ಸಹಕಾರ ನೀಡುತ್ತೇವೆ. ಅಂದ ಮೇಲೆ ಅವರು ನಮ್ಮವರಿಗೆ ಸಹಕಾರ ನೀಡಲೇಬೇಕು. ನಾವು ಮಾತ್ರ ನಮ್ಮವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸುತ್ತೇನೆ ಎಂದಿದ್ದಾರೆ.
ಮುಡಾದಲ್ಲಿ ಬರೋಬ್ಬರಿ 5 ಸಾವಿರ ಕೋಟಿ ಮೌಲ್ಯದ ಹಗರಣವಾಗಿದೆ. ಹೀಗಾಗಿ ಮುಡಾ ಹಗರಣ ಸರಿಯಾಗಿ ತನಿಖೆಯಾಗಿ ಎಲ್ಲವೂ ಹೊರಬರಬೇಕು. ಆಗ ಮಾತ್ರ ನ್ಯಾಯ ಸಿಗಲು ಸಾಧ್ಯ, ಸದ್ಯಕ್ಕೆ ಸಿದ್ದರಾಮಯ್ಯನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶಾಸಕ ಎ. ಮಂಜು ಆಗ್ರಹಿಸಿದ್ದಾರೆ.
ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟರು, ಬಳಿಕ ಎಫ್ಐಆರ್ ಆಯ್ತು. ಎಫ್ಐಆರ್ ಆದ ಮೇಲೆ ಸಿದ್ದರಾಮಯ್ಯನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಲ್ವಾ? ನಾವು 14 ಸೈಟುಗಳನ್ನು ವಾಪಸ್ ಕೊಡಿ ಎಂದಿರಲಿಲ್ಲ, ಕಳ್ಳನ ಮನಸ್ಸು ಉಳ್ಳು ಉಳ್ಳುಗೆ ಅಂದಹಾಗೆ, ಇವರು ಸೈಟ್ ವಾಪಸ್ ಕೊಟ್ಟಿದ್ದಾರೆ. ಅಂದರೆ ತಪ್ಪು ಮಾಡಿರುವುದು ಸಾಬೀತಾದಂತೆ ಅಲ್ಲವೇ? ಅತ್ತ ಮುಡಾ ಅಧ್ಯಕ್ಷ ಮರೀಗೌಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಕೂಡ ಅಪರಾಧವಾಗಿದೆ ಅಂತ ಸಾಬೀತಾದಂತೆ ಅಲ್ಲವೇ. ಸಿದ್ದರಾಮಯ್ಯನವರು ನಾನು ಲಾಯರ್ ನಂದೂ ಒಂದು ಕಾನೂನಿದೆ ಎನ್ನುತ್ತಿದ್ದವರು. ಹಿಂದೆ ರಾಮಕೃಷ್ಣ ಹೆಗಡೆ, ದೇವೇಗೌಡ್ರು ಅವರ ಮೇಲೆಲ್ಲಾ ಆರೋಪ ಬಂದಿದ್ದವು. ಆಗ ಅವರೆಲ್ಲಾ ರಾಜೀನಾಮೆ ಕೊಟ್ಟಿದ್ದರು, ಸಿದ್ದರಾಮಯ್ಯನವರು ರಾಜೀನಾಮೆ ಕೊಡಲಿ. ತಪ್ಪಿಲ್ಲ ಎಂದು ಸಾಬೀತಾದರೆ ಮತ್ತೆ ಸಿಎಂ ಆಗಲಿ. ನನ್ನದೂ ಸೈಟುಗಳಿದ್ದರೂ ಅದು ತನಿಖೆಯಾಗಲಿ, ಯಾವುದೇ ಪಕ್ಷದವರದ್ದು ಇದ್ದರೂ ತನಿಖೆಗಳಾಗಲಿ. ಜನಸಾಮಾನ್ಯರ ತೆರಿಗೆ ಹಣ ನಷ್ಟವಾಗಬಾರದು ಎಂದು ಅರಕಲಗೂಡು ಶಾಸಕ ಎ ಮಂಜು ಆಗ್ರಹಿಸಿದರು.
ಮಡಿಕೇರಿ ಶಾಸಕರು ಮಂತರ್ ಗೌಡ್ರೋ, ಇಲ್ಲ ಅಪ್ಪ ಎ.ಮಂಜುವೋ: ಮಾಜಿ ಶಾಸಕ ಅಪ್ಪಚ್ಚು ರಂಜನ್ ಪ್ರಶ್ನೆ
ಹಾಸನ ಲೋಕಸಭಾ ಚುನಾವಣೆಯಲ್ಲಿ 7 ಕೋಟಿ ಹಣ ಹಂಚಿದ್ದಾರೆ ಎನ್ನುವ ಆಡಿಯೋ ವೈರಲ್ ಆಗಿದ್ದು, ನೈಜ ಆಡಿಯೋ ಆಧರಿಸಿಯೇ ಮಾಧ್ಯಮಗಳು ವರದಿ ಮಾಡಿವೆ ಎಂದುಕೊಂಡಿದ್ದೇನೆ. ಆಡಿಯೋದಲ್ಲಿ ಇರುವ ಧ್ವನಿ ಮತ್ತು ಹಣ ಹಂಚಿಕೆ ಕುರಿತು ತನಿಖೆ ಆಗಲಿ. ತನಿಖೆಯಲ್ಲಿ ಹಣ ಹಂಚಿಕೆ ಸಾಬೀತಾದರೆ ಅದಕ್ಕೆ ಸಂಬಂಧಿಸಿದವರೆಲ್ಲಾ ರಾಜೀನಾಮೆ ನೀಡಬೇಕು ಶಾಸಕ ಎ. ಮಂಜು ಆಗ್ರಹಿಸಿದ್ದಾರೆ.
ಅದರಲ್ಲಿ ಇರುವ ಧ್ವನಿ ಯಾರದ್ದು ಎಂದು ಸಂಬಂಧಿಸಿದವರೇ ಸ್ಪಷ್ಟಪಡಿಸಬೇಕು. ಆದರೆ ಅವರು ಸ್ಪಷ್ಟಪಡಿಸುವುದು ಸುಳ್ಳು ಎನಿಸುತ್ತದೆ. ಆದರೆ ಅದರ ಅಸಲಿಯತ್ತಿನ ಬಗ್ಗೆ ಇಂದು ಇರುವ ತಂತ್ರಜ್ಞಾನ ಬಳಸಿಕೊಂಡು ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.