ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷರು, ಕೆಲ ಸದಸ್ಯರು, ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಶುಕ್ರವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡರು. 

ಮಂಡ್ಯ(ಫೆ.03): ತಾಲೂಕಿನ ಉಪ್ಪರಕನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷರು, ಕೆಲ ಸದಸ್ಯರು, ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಶುಕ್ರವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಬಂದೀಗೌಡ ಬಡಾವಣೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಚಿವ ಎನ್‌. ಚಲುವರಾಯಸ್ವಾಮಿ ಹಾಗೂ ಶಾಸಕ ಪಿ. ರವಿಕುಮಾರ್ ಗೌಡರ ನೇತೃತ್ವದಲ್ಲಿ ಉಪ್ಪರಕನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಮಲ್ಲಾಘಟ್ಟ ಗ್ರಾಮದ ಭಾಗ್ಯಲಕ್ಷ್ಮಿ, ಪೂರ್ಣಿಮಾ, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚಲುವೇಗೌಡ, ಸದಸ್ಯರಾದ ಜವರೇಗೌಡ, ಪುಟ್ಟಸ್ವಾಮಿ, ಪ್ರಕಾಶ್, ಮಾಜಿ ಸದಸ್ಯರಾದ ವೆಂಕಟಗಿರಿ.

ದೇವೇಗೌಡ, ಕುಮಾರಸ್ವಾಮಿಯವ್ರ ಆರೋಗ್ಯ ಕೆಡಿಸಿದ್ದೇ ಚಲುವರಾಯಸ್ವಾಮಿ: ಮಾಜಿ ಸಚಿವ ಪುಟ್ಟರಾಜು ಕಿಡಿ

ಸೊಸೈಟಿ ನಿರ್ದೇಶಕರಾದ ಮರಿಸ್ವಾಮಿಗೌಡ, ಯಜಮಾನ್ ಮರೀಗೌಡ, ಹಾಗೂ ಮುಖಂಡರಾದ ಕುಮಾರ್, ಸ್ವಾಮಿ, ಕೇಬಲ್ ಬೆಟ್ಟೇಗೌಡ, ನಿಂಗೇಗೌಡ, ನಂಜಪ್ಪ, ಶಂಕರೇಗೌಡ, ತಿಮ್ಮೆಗೌಡ, ವೆಂಕಟರಾಮು, ಕುಮಾರ್, ಕಾಂತರಾಜು, ಗಿರೀಶ್, ಜವರೇಗೌಡ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.