ಬೆಂಗಳೂರು, (ಅ.24): ಆರ್.ಆರ್. ನಗರದ ಓಲಾ, ಊಬರ್ ಹಾಗೂ ಟ್ಯಾಕ್ಸಿ ಡ್ರೈವರ್​ಗಳು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಇಂದು (ಶನಿವಾರ) ಸೇರ್ಪಡೆಯಾದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್,​ ಕೊರೋನಾ ಬಂದ ಮೇಲೆ ಚಾಲಕರಾಗಿ ಕೆಲಸ ಮಾಡುತ್ತಿರುವವರಿಗೆ ಸರ್ಕಾರದಿಂದ ಸಹಾಯ ಆಗಬೇಕು ಅಂತ ಒತ್ತಾಯ ಮಾಡಿದೆವು. ನಾವು ತಿಂಗಳಿಗೆ ಹತ್ತು ಸಾವಿರ ರೂಪಾಯಿ ಕೊಡಿ ಎಂದೆವು. ಆದರೆ ಸಿಎಂ 7 ಲಕ್ಷ 75 ಸಾವಿರ ಜನರಿಗೆ ಮಾತ್ರ ಒಂದು ಬಾರಿ 5 ಸಾವಿರ ಘೋಷಿಸಿದರು ಆದರೆ ರಾಜ್ಯದಲ್ಲಿ ಲೈಸೆನ್ಸ್ ಇರುವವರು 32 ಲಕ್ಷ ಚಾಲಕರಿದ್ದಾರೆ ಚಾಲಕರ ಕುಟುಂಬಕ್ಕೆ ಆಗ್ತಿರೋ ತೊಂದರೆ ಬಗ್ಗೆ ಈ ಸರ್ಕಾರಕ್ಕೆ ಕಣ್ಣು ಕಾಣಲಿಲ್ಲ, ಕಿವಿಯೂ ಕೇಳಲಿಲ್ಲ ಎಂದು ಕಿಡಿಕಾರಿದರು.

ದೇವೇಗೌಡ-ಹೆಚ್‌ಡಿಕೆ ನಡೆಯಿಂದ ಬೇಸತ್ತ ಮತ್ತೊಬ್ಬ ಜೆಡಿಎಸ್‌ ನಾಯಕ ಕಾಂಗ್ರೆಸ್‌ ತೆಕ್ಕೆಗೆ..?

ಕೆಪಿಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಲ್ಲಿ ಕಾರ್ಯಕ್ರಮದಲ್ಲಿ ‌ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ಸೇರಿದಂತೆ ಹಲವರು ಭಾಗಿಯಾಗಿದ್ರು.

ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಪಕ್ಷ ಸಂಘಟನೆಗೆ ಹೊತ್ತು ನೀಡುತ್ತಿದ್ದಾರೆ. ಅದರಲ್ಲೂ ಜೆಡಿಎಸ್‌ನ ನಾಯಕರುಗಳಿಗೆ ಗಾಳ ಹಾಕಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಇದರಿಂದಲೇ ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ವಿರುದ್ಧ ರೇಗುಡುತ್ತಿದ್ದಾರೆ.