ಕೆಲವು ಮಂತ್ರಿಗಳ "ತೆರೆದ ದೃಶ್ಯ"ಗಳು ಶೀಘ್ರದಲ್ಲೇ ರಾರಾಜಿಸಲಿವೆ: ಶರವಣ ಬಾಂಬ್
* ಕುಮಾರಸ್ವಾಮಿ ವಿರುದ್ಧ ಬಿಜೆಪಿ ಟ್ವೀಟ್ ವಾರ್
* ಬಿಜೆಪಿ ವಿರುದ್ಧ ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ನಾಯಕ
* ಕುಮಾರಸ್ವಾಮಿ ವಿರುದ್ಧ ಬಿಜೆಪಿ ಟ್ವೀಟ್‌ಗೆ ಶರವಣ ತಿರುಗೇಟು
ಬೆಂಗಳೂರು, (ಅ.21): ಎಚ್‌ಡಿ ಕುಮಾರಸ್ವಾಮಿ (HD Kumaraswamy( ವಿರುದ್ಧ ಕರ್ನಾಟಕ ಬಿಜೆಪಿ (BJP) ಟ್ವೀಟ್ ವಾರ್ (Twitter War) ಮುಂದುವರೆಸಿದ್ದು, ಇದಕ್ಕೆ ಜೆಡಿಎಸ್ ನಾಯಕ ಶರವಣ ತಿರುಗೇಟು ಕೊಟ್ಟಿದ್ದಾರೆ.
ಟ್ವೀಟ್ ಮೂಲಕವೇ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ (TA Sharavana), ನೀವು ಹೇಗೆ ಹೇಳುತ್ತಾ ಹೋದರೆ.. ಇನ್ನೂ ಕೆಲವು ಮಂತ್ರಿಗಳ" ತೆರೆದ ದೃಶ್ಯ "ಗಳು ಮುಂದೆ ಕಿರುತೆರೆಯಲ್ಲಿ ಶೀಘ್ರದಲ್ಲೇ ರಾರಾಜಿಸಲಿವೆ. ಆಗ ಬಿಜೆಪಿ ಪಕ್ಷ ಏನು ಹೇಳುತ್ತದೆ ಯೋ ನೋಡೋಣ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಬೈ ಎಲೆಕ್ಷನ್ ಅಖಾಡದಲ್ಲಿ 'ಜನನಾಯಕರ' ಬಾಯಲ್ಲಿ ಹಳಿ ತಪ್ಪಿದ ಮಾತುಗಳು!
ನೀವು ಹೇಗೆ ಹೇಳುತ್ತಾ ಹೋದರೆ..
— Sharavana TA (@SharavanaTa) October 21, 2021
ಇನ್ನೂ ಕೆಲವು ಮಂತ್ರಿಗಳ" ತೆರೆದ ದೃಶ್ಯ "
ಗಳು ಮುಂದೆ ಕಿರುತೆರೆಯಲ್ಲಿ ಶೀಘ್ರದಲ್ಲೇ ರಾರಾಜಿಸಲಿವೆ. ಆಗ ಬಿಜೆಪಿ ಪಕ್ಷ ಏನು ಹೇಳುತ್ತದೆ ಯೋ ನೋಡೋಣ.
ಕೊಚ್ಚೆಯಲ್ಲಿ ಅರಳುತ್ತಿರುವ ನಿಮ್ಮ ರಾಜಕಾರಣ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ. ಸಾರ್ವಜನಿಕ ಬದುಕಲ್ಲಿ ಇರುವ ಯೋಗ್ಯತೆಯನ್ನು ಕಳೆದು ಕೊಂಡಿದ್ದೀರ. ಪಕ್ಷದ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆ ಘನತೆ ತರುವಂಥದ್ದಲ್ಲ ಎಂದು ಬಿಜೆಪಿ ನಾಯಕ, ಮಾಜಿ ಸಿಎಂ ಯಡಿಯೂರಪ್ಪ ಅವರೇ ಹೇಳಿದ್ದಾರೆ ಎಂದು ಟ್ವೀಟ್ ಬಾಣ ಬಿಟ್ಟಿದ್ದಾರೆ.
ನಮ್ಮ *ಜನಪ್ರಿಯ ನಾಯಕರಾದ ಕುಮಾರಸ್ವಾಮಿ* ಅವರ ಚಾರಿತ್ರ್ಯ ವಧೆಯನ್ನೆ ದೊಡ್ಡ ಗುರಿಯಾಗಿಸಿಕೊಂಡು ತುಚ್ಛ ಮತ್ತು ನೀಚ ಬುದ್ದಿಯ ಟ್ವೀಟ್ ಮಾಡುತ್ತಿರುವ ಬಿಜೆಪಿ ನಾಯಕರೇ ನಿಮ್ಮ ವಿಕೃತ ಮನಸ್ಸಿಗೆ ಧಿಕ್ಕಾರ.
— Sharavana TA (@SharavanaTa) October 21, 2021
ಚುನಾವಣೆ ಅಖಾಡದಲ್ಲಿ ಶೂನ್ಯ ಸಾಧನೆಯ https://t.co/PXNfCw7xq6
ನಮ್ಮ ಜನಪ್ರಿಯ ನಾಯಕರಾದ ಕುಮಾರಸ್ವಾಮಿ ಅವರ ಚಾರಿತ್ರ್ಯ ವಧೆಯನ್ನೆ ದೊಡ್ಡ ಗುರಿಯಾಗಿಸಿಕೊಂಡು ತುಚ್ಛ ಮತ್ತು ನೀಚ ಬುದ್ದಿಯ ಟ್ವೀಟ್ ಮಾಡುತ್ತಿರುವ ಬಿಜೆಪಿ ನಾಯಕರೇ ನಿಮ್ಮ ವಿಕೃತ ಮನಸ್ಸಿಗೆ ಧಿಕ್ಕಾರ.ಚುನಾವಣೆ ಅಖಾಡದಲ್ಲಿ ಶೂನ್ಯ ಸಾಧನೆಯ ಎಂದಿದ್ದಾರೆ.
ಸಾರ್ವಜನಿಕ ಬದುಕಲ್ಲಿ ಇರುವ ಯೋಗ್ಯತೆಯನ್ನು ಕಳೆದು ಕೊಂಡಿದ್ದೀರ. ಪಕ್ಷದ *ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್* ಅವರ ಹೇಳಿಕೆ ಘನತೆ ತರುವಂಥದ್ದಲ್ಲ ಎಂದು ಬಿಜೆಪಿ ನಾಯಕ, *ಮಾಜಿ ಸಿಎಂ ಯಡಿಯೂರಪ್ಪ* ಅವರೇ ಹೇಳಿದ್ದಾರೆ. ನಿಮ್ಮ ಇದಕ್ಕಿಂತ ಪಾಠ ಇನ್ನೇನು ಹೇಳಬೇಕು.