ಚನ್ನಪಟ್ಟಣ ಉಪಚುನಾವಣೆ: ನಾನೇ ಸ್ಪರ್ಧೆ ಮಾಡಬೇಕು ಅಂತೇನಿಲ್ಲ, ನಿಖಿಲ್ ಕುಮಾರಸ್ವಾಮಿ

ಈ ಬಾರಿ ಉಪಚುನಾವಣೆ ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆದಿದೆ. ಚನ್ನಪಟ್ಟಣ ಕುಮಾರಸ್ವಾಮಿ ಅವರ ಸ್ವಕ್ಷೇತ್ರ. ಚುನಾವಣೆಯಲ್ಲಿ ಕೆಲವೊಂದು ತೀರ್ಮಾನಗಳನ್ನು ತೆಗೆದುಕೊಳ್ಳಬೇಕಿದೆ. ಅಭ್ಯರ್ಥಿ ಆಯ್ಕೆ, ಚುನಾವಣೆ ಜವಾಬ್ದಾರಿ ಬಗ್ಗೆ ಚರ್ಚೆ ಮಾಡಲಾಗುತ್ತದೆ: ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ

JDS Leader Nikhil Kumaraswamy Talks Over Channapatna Byelection grg

ರಾಮನಗರ(ಅ.12):  ಪಕ್ಷದ ಕಾರ್ಯಕರ್ತರು, ಮುಖಂಡರ ಸಭೆ ಕರೆದಿದ್ದೇವೆ. ಈಗಾಗಲೇ ಜಿಪಂ ಕ್ಷೇತ್ರವಾರು ಹಾಗೂ ನಗರ ಪ್ರದೇಶಗಳಲ್ಲಿ ಸಭೆ ನಡೆಸಿದ್ದೇವೆ. ಅತೀ ಶೀಘ್ರದಲ್ಲಿ ಚುನಾವಣೆ ಘೋಷಣೆ ಆಗುತ್ತೆ‌. ಚನ್ನಪಟ್ಟಣ ಜನತಾದಳದ ಭದ್ರಕೋಟೆ ಅನ್ನೋದರಲ್ಲಿ ಅನುಮಾನ ಇಲ್ಲ‌. ಪ್ರತಿ ಚುನಾವಣೆಯಲ್ಲೂ ನಮಗೆ ನಮ್ಮದೇ ಆದ ಮತಗಳಿವೆ. ಕ್ಷೇತ್ರದಲ್ಲಿ ಕಾರ್ಯಕರ್ತರೇ ಚುನಾವಣೆ ನಡೆಸುತ್ತಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. 

ಇಂದು(ಶನಿವಾರ) ಜಿಲ್ಲೆಯ ಬಿಡದಿಯ ಕೇತಿಗಾನಹಳ್ಳಿಯ ತೋಟದ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಈ ಬಾರಿ ಉಪಚುನಾವಣೆ ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆದಿದೆ. ಚನ್ನಪಟ್ಟಣ ಕುಮಾರಸ್ವಾಮಿ ಅವರ ಸ್ವಕ್ಷೇತ್ರ. ಚುನಾವಣೆಯಲ್ಲಿ ಕೆಲವೊಂದು ತೀರ್ಮಾನಗಳನ್ನು ತೆಗೆದುಕೊಳ್ಳಬೇಕಿದೆ. ಅಭ್ಯರ್ಥಿ ಆಯ್ಕೆ, ಚುನಾವಣೆ ಜವಾಬ್ದಾರಿ ಬಗ್ಗೆ ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಚನ್ನಪಟ್ಟಣ ಬೈಎಲೆಕ್ಷನ್‌: ಅಭ್ಯರ್ಥಿ ಆಯ್ಕೆ ಬಗ್ಗೆ ಮಹತ್ವದ ಅಪಡೇಟ್‌ ಕೊಟ್ಟ ಕುಮಾರಸ್ವಾಮಿ

ನಿಖಿಲ್ ಕುಮಾರಸ್ವಾಮಿ ಅವರೇ ಅಭ್ಯರ್ಥಿ ಎಂಬ ವಿಚಾರದ ಬಗ್ಗೆ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ, ನಾನು ಅನೇಕ ಬಾರಿ ತಿಳಿಸಿದ್ದೇನೆ. ಇಲ್ಲಿ ಕ್ಯಾಂಡಿಡೇಟ್ ಯಾರಾದ್ರೂ ಇರಬಹುದು. ನಿನ್ನೆ ಕೂಡ ಕೂತು ಬೂತ್ ವೈಸ್ ಸರ್ವೇ ಮಾಡಿಸಿದ್ದೇವೆ. ನೀವು ಹೇಗೆ ಲೆಕ್ಕಾ ಹಾಕಿದ್ರೂ 80 ಸಾವಿರ ಮತ ನಿರಂತರವಾಗಿ ಜೆಡಿಎಸ್ ಪಕ್ಷದ ಮೇಲಿದೆ. ಯಾರೇ ಅಭ್ಯರ್ಥಿ ಆದ್ರೂ ಈ ಮತಗಳು ಪಕ್ಷಕ್ಕೆ ಬರುತ್ತೆ‌. ನಿಖಿಲ್ ಕುಮಾರಸ್ವಾಮಿ ಅವರೇ ಬಂದು ಸ್ಪರ್ಧೆ ಮಾಡಬೇಕು ಅಂತೇನಿಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತ ನಿಂತ್ರೂ ಗೆಲ್ತಾರೆ‌. ನೀವು ಯಾವುದೇ ರೀತಿ ಲೆಕ್ಕಾ ಹಾಕಿದ್ರೂ 80 ಸಾವಿರ ಮತಗಳು ಜೆಡಿಎಸ್ ಗೆ ಇವೆ. ಒಳ್ಳೇ ಲೀಡ್ ಬೇಕು ಅಂದ್ರೆ 20 ಸಾವಿರ ವೋಟ್ ತಗೋಬೇಕು ಅಷ್ಟೇ‌. ಅಂತಿಮವಾಗಿ ಎನ್ ಡಿಎ ಪಕ್ಷದ ನಾಯಕರು ಕೂತು ಚರ್ಚೆ ಮಾಡ್ತಾರೆ ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios