Asianet Suvarna News Asianet Suvarna News

ಸಿದ್ದು ಭೇಟಿ ಮಾಡಿದ ಮಧು,  ದಳಕ್ಕೆ ಗುಡ್ ಬೈ, ಕಾಂಗ್ರೆಸ್‌ಗೆ ಜೈ ಜೈ

ಕಾಂಗ್ರೆಸ್ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಭೇಟಿ ಮಾಡಿದ ಮಧುಬಂಗಾರಪ್ಪ/ ಕಾಂಗ್ರೆಸ್ ಗೆ ಮಾಜಿ ಶಾಸಕ ಮಧುಬಂಗಾರಪ್ಪ/ ಕಾಂಗ್ರೆಸ್ ಸೇರ್ಪಡೆ ಕುರಿತು ಸಿದ್ದು ಭೇಟಿ ಮಾಡಿದ ಮಧುಬಂಗಾರಪ್ಪ/  ಕುಮಾರಸ್ವಾಮಿ ಯಾಕೆ ಹಾಗೆ ಹೇಳಿದರೋ ಗೊತ್ತಿಲ್ಲ

JDS Leader Madhu Bangarappa Meets Siddaramaiah Likely To Join Congress mah
Author
Bengaluru, First Published Mar 11, 2021, 3:00 PM IST

ಬೆಂಗಳೂರು(ಮಾ.  11) ಕರ್ನಾಟಕ ರಾಜಕಾರಣದ ಮಟ್ಟಿಗೆಮಹತ್ವದ ಬೆಳವಣಿಗೆಯೊಂದು ಆಗಿದೆ. ಜೆಡಿಎಸ್ ನಾಐಕ, ಮಾಜಿ ಶಾಸಕ, ಮಾಜಿ ಮುಖ್ಯಮಂತ್ರಿ  ಎಸ್ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಿದ್ಧವಾಗಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ  ಅವರನ್ನು ಮಧು ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಕುರಿತು ಸಿದ್ದು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು.

ಜೆಡಿಎಸ್‌ಗೆ ಗುಡ್ ಬೈ  ಹೇಳಲು ಕಾರಣವೇನು?

ನಮ್ಮ ತಂದೆ ಬಂಗಾರಪ್ಪ ಅವರು ಕಾಂಗ್ರೆಸ್ ನಿಂದ ಸಿಎಂ ಆಗಿದ್ದರು. ಕಾಂಗ್ರೆಸ್ ಸೇರ್ಪಡೆ ನನಗೆ ಸಂತೋಷ ಕೊಡ್ತಿದೆ. ಪ್ರಸ್ತುತ ರಾಜ್ಯ ಮತ್ತು ದೇಶಕ್ಕೆ ಕಾಂಗ್ರೆಸ್ ಅಗತ್ಯವಾಗಿದೆ.. ಇವತ್ತಿನಿಂದನೇ ಕಾಂಗ್ರೆಸ್ ಕಾರ್ಯಕರ್ತನಾಗಿ ನಾನು ಕೆಲಸ ಆರಂಭಿಸ್ತೇನೆ ಎಂದು ಹೇಳಿದ್ದಾರೆ.

ಎಚ್‌ಡಿ  ಕುಮಾರಸ್ವಾಮಿ ದೊಡ್ಡವರು. ಅವರು ಏಕೆ ಹಾಗೆ ಹೇಳಿದ್ರೊ ಗೊತ್ತಿಲ್ಲ. ನಾನು ಜೆಡಿಎಸ್ ನಲ್ಲಿ ಯಾವುದೇ ಅಧಿಕಾರ ಅನುಭವಿಸಿಲ್ಲ ನಾನು ಶಾಸಕನಾಗಿ ಸೋತವನು. ಇನ್ನು ಜೆಡಿಎಸ್ ನಲ್ಲಿ ಯಾವ ಅಧಿಕಾರ ಅನುಭವಿಸಲು ಸಾಧ್ಯ? ಎಂದು ಪ್ರಶ್ನೆ ಮಾಡಿರು.

ಶಿವಮೊಗ್ಗದಲ್ಲಿ ಕಾಂಗ್ರೆಸ್ ಹೋರಾಟವೊಂದನ್ನು ಹಮ್ಮಿಕೊಂಡಿದ್ದು ಅದಕ್ಕೂ ಮುನ್ನವೇ ಮಧು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಬಂಗಾರಪ್ಪ ಅವರ ಇನ್ನೊಬ್ಬ ಪುತ್ರ ಕುಮಾರ್ ಬಂಗಾರಪ್ಪ ಸಹ ಈ ಹಿಂದೆ ಕಾಂಗ್ರೆಸ್ ನಲ್ಲಿಯೇ ಇದ್ದರು. ಬದಲಾದ ರಾಜಕಾರಣದಲ್ಲಿ ಬಿಜೆಪಿ ಸೇರಿ ಸೊರಬ ಕ್ಷೇತ್ರದ ಶಾಸಕರಾಗಿದ್ದಾರೆ.

Follow Us:
Download App:
  • android
  • ios