JDS Pancharatna Rathayatra: ಬಸವರಾಜ ಬೊಮ್ಮಾಯಿ ಹೆಬ್ಬೆಟ್ಟು ಸಿಎಂ: ಹೆಚ್.ಡಿ.ಕುಮಾರಸ್ವಾಮಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಬ್ಬೆಟ್ಟಿನ ಸಿಎಂ. ಇಲ್ಲಿಂದ ದೆಹಲಿಗೆ ತೆರಳಿ ವರಿಷ್ಟರ ಮುಂದೆ ಏನು ಮಾತನಾಡದೇ ಕೈ ಕಟ್ಟಿಕೊಂಡು ಸುಮ್ನನೆ ವಾಪಸ್ಸು ಬರುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರ (ನ.27): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೆಬ್ಬೆಟ್ಟಿನ ಸಿಎಂ. ಇಲ್ಲಿಂದ ದೆಹಲಿಗೆ ತೆರಳಿ ವರಿಷ್ಟರ ಮುಂದೆ ಏನು ಮಾತನಾಡದೇ ಕೈ ಕಟ್ಟಿಕೊಂಡು ಸುಮ್ನನೆ ವಾಪಸ್ಸು ಬರುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಶನಿವಾರ ಪಂಚರತ್ನ ರಥಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಂದ ವೇಳೆಯೇ ಗಡಿ ವಿವಾದ ಬರುತ್ತೆ. ಬೊಮ್ಮಾಯಿ ಹೆಬ್ಬೆಟ್ಟಿನ ಮುಖ್ಯಮಂತ್ರಿ. ಹೊರನೋಟಕ್ಕೆ ಕನ್ನಡಿಗರಿಗೆ ಮುಂದೆ ಹೇಳೋದೇ ಬೇರೆ. ಅಂತಿಮವಾಗಿ ದೆಹಲಿ ನಾಯಕರ ಮುಂದೆ ಕೈಕಟ್ಟಿನಿಲ್ಲುತ್ತಾರೆಂದು ಟೀಕಿಸಿದರು.
ಪಿನಾಕಿನಿ ನೀರು ರಾಜ್ಯಕ್ಕಿಲ್ಲ: ಕೇಂದ್ರ ಸರ್ಕಾರ ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ ಜೋಡಣೆ ತೀರ್ಮಾನ ಮಾಡಿದೆ. ಎರಡೂ ನದಿಗಳ ಉಗಮಸ್ಥಾನವಾದ ಕರ್ನಾಟಕಕ್ಕೆ ಏನೂ ಹಂಚಿಕೆ ಮಾಡಿಲ್ಲ. ಈಗ ಮತ್ತೊಂದು ನ್ಯಾಯಾಧಿಕರಣ ಸ್ಥಾಪನೆ ಮಾಡಲು ಮುಂದಾಗಿದೆ. ನಿಮ್ಮ ಒಳ ಆಂತರಿಕ ವ್ಯವಹಾರದ ಮೂಲಕ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಬೇಡ. 25 ಸಂಸದರಿಗೆ ಅಮಿತ್ ಶಾ ಮೋದಿ ಮುಂದೆ ಮಾತನಾಡುವ ಶಕ್ತಿ ಇಲ್ಲ. ನಮಗೆ ನೀರು ಕೊಡದೆ, ನೆರೆಯ ರಾಜ್ಯಕ್ಕೆ ಕೊಟ್ಟಿದ್ದಾರೆ. ಟ್ರಿಬ್ಯುನಲ್ ಮಾಡಿದ್ದಾರೆ. ನಮಗೆ ನೀರು ಕೊಡದೆ, ಎರಡೂ ರಾಷ್ಟ್ರೀಯ ಪಕ್ಷಗಳೂ ದ್ರೋಹ ಮಾಡುತ್ತಿವೆ ಎಂದು ಆರೋಪಿಸಿದರು.
JDS Pancharatna Rathayatra: ಬಿಜೆಪಿ ಬಿ ಟೀಮ್ ಜೆಡಿಎಸ್ ಅಲ್ಲ ಕಾಂಗ್ರೆಸ್: ಎಚ್.ಡಿ.ಕುಮಾರಸ್ವಾಮಿ
ಬೆಳಗಾವಿ ಗಡಿ ಭಾಗದ ಅಭಿವೃದ್ಧಿಗೆ ಕರ್ನಾಟಕದ ಕೊಡುಗೆ ಹೆಚ್ಚು. ಹೆಚ್ಚು ಸಕ್ಕರೆ ಕಾರ್ಖಾನೆಗಳು, ಸುವರ್ಣಸೌಧ, ನೀರಾವರಿ ಸೌಲಭ್ಯ ಕೊಟ್ಟಿದ್ದೇವೆ. ಶಿಕ್ಷಣ, ಭಾಷಾವಾರು ಸೌಲಭ್ಯದಲ್ಲಿ ಸ್ವಲ್ಪ ಸಮಸ್ಯೆ ಇರೋದು ನಿಜ. ಅಲ್ಲಿನ ಆರ್ಥಿಕ ಚಟುವಟಿಕೆಗಳನ್ನ ಮಹಾರಾಷ್ಟ್ರಕ್ಕೆ ಸೆಳೆಯಲು ಪ್ರಯತ್ನ ನಡೆದಿದೆ. ಮಹಾರಾಷ್ಟ್ರದ ಧ್ವನಿಗೆ ಕರ್ನಾಟಕ ಬಿಜೆಪಿಯವರ ಕುಮ್ಮಕ್ಕು ಇದೆ ಅನಿಸುತ್ತದೆ. ಬೆಳಗಾವಿ ಪಡೆದು ಬೇರೆ ಜಾಗ ಬಿಟ್ಟುಕೊಡುವುದಾಗಿ ಮಹಾರಾಷ್ಟ್ರ ಹೇಳುತ್ತಿದೆ. ಪದೇ ಪದೇ ಯಾಕೆ ಇಂತಹ ವಿಷಯ ಕೆದಕುತ್ತಿದ್ದೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು..
ಡಬ್ಬಲ್ ಎಂಜಿನ್ ಸರ್ಕಾರ ಕಾರಣ: ಬೆಳಗಾವಿಯ ಬಗ್ಗೆ ಮಹಾರಾಷ್ಟ್ರದ ವಿಚಾರವಾಗಿ ಶಿವಸೇನೆಯಿಂದ ಹೊರಬಂದ ಗುಂಪು ಬಿಜೆಪಿ ಜೊತೆ ಸೇರಿದ್ದಾರೆ. ಮಹಾರಾಷ್ಟ್ರಕ್ಕೆ ನಿಪ್ಪಾಣಿ ಸೇರಬೇಕು ಅಂತ ಡಿಮ್ಯಾಂಡ್ ಮಾಡಿದ್ದಾರೆ. ಭಾಷಾ ಸಮಸ್ಯೆ ಇರೋ ಬಗ್ಗೆ ನಾನು ನೋಡಿದ್ದೇನೆ. ಆದರೆ ಆ ಭಾಗದ ಅಭಿವೃದ್ಧಿ, ಆರ್ಥಿಕ ಚಟುವಟಿಕೆ ಗಮನಿಸಿ. ಎರಡೂ ಭಾಗವನ್ನ ಸೆಳೆಯಲು ಅವರ ಒತ್ತಡ ಇದೆ. ಬಿಜೆಪಿ ಸರ್ಕಾರ ಬಂದಾಗಲೇ ಈ ಸಮಸ್ಯೆ ಬರ್ತಿದೆ. ಡಬಲ್ ಎಂಜಿನ್ ಸರ್ಕಾರವೇ ಇದಕ್ಕೆ ಕಾರಣ ಎಂದರು. ಜನಸಂಕಲ್ಪ ಅಂತ ರಾರಯಲಿ ಹೊರಟಿದ್ದಾರೆ. ವಿಧಾನಸೌಧದಲ್ಲಿ ಯಾರೂ ಇಲ್ಲ. ಎಲ್ಲಾ ಲೂಟಿ ಹೊಡೆದಾಗಿದೆ. ಈಗ ಜನರ ಬಳಿ ಮತ ಕೊಡಿ ಅಂತ ಹೋಗುತ್ತಿದ್ದಾರೆ. 150 ಸೀಟು ಅಂತ ಹೇಳಿಕೊಂಡು ಹೋಗುತ್ತಿದ್ದಾರೆ. ಜನತೆಗೆ ಇವರ ಆಡಳಿತ ನೋಡಿ ಸಾಕಾಗಿದೆ ಎಂದರು.
JDS Pancharatna Rathayatra: ಕೊಳೆಚೆ ನೀರು ತಂದವರಿಗೆ ತಕ್ಕಪಾಠ ಕಲಿಸಿ: ಎಚ್‌ಡಿಕೆ
ಸರ್ವಪಕ್ಷ ಸಭೆ ಗೋಡಂಬಿ, ದ್ರಾಕ್ಷಿ ತಿನ್ನಕಾ?: ಸಿಎಂ ಬೊಮ್ಮಾಯಿ ಸರ್ವ ಪಕ್ಷ ಸಭೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ, ಗೋಡಂಬಿ, ದ್ರಾಕ್ಷಿ ತಿನ್ನೋಕೆ ಹೋಗಬೇಕಾ ಎಂದು ಖಾರವಾಗಿ ಪ್ರಶ್ನಿಸಿದರು. ಮೊದಲು ನಿಮ್ಮ ಪಕ್ಷದವರು ತೀರ್ಮಾನ ಮಾಡಿ. ನಮ್ಮನ್ನು ಕರೆದು ಒಗ್ಗಟಾಗಿರೋಣ ಅಂತ ಹೇಳೋಕಾ. ಪರಸ್ಪರ ಒಗ್ಗಟ್ಟಾಗಿ ಇರಬೇಕು. ನಾವೆಲ್ಲರೂ ಭಾರತೀಯರು ಅಂತ ಹೇಳುತ್ತೀರಿ, ನಾವಂತೂ ಕನ್ನಡಿಗರು, ಕನ್ನಡ ಅಂತೀರಾ. ನೀವು ಒಂದು ದೇಶ, ಒಂದು ತೆರಿಗೆ ಮಾಡುತ್ತೀರಿಯೆಂದು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.