‘ಆಂತರಿಕ ಪ್ರಜಾಪ್ರಭುತ್ವ ಎಂದರೆ ಪ್ರಧಾನಿ ನರೇಂದ್ರ ಮೋದಿ ಮುಂದೆ ‘ಸತ್ತ ಸೊಂಟ’ದವರಂತೆ ನಡುಬಗ್ಗಿಸಿ ತಲೆ ಅಲ್ಲಾಡಿಸುವುದಾ? ಜೀ ಜೀ ಎನ್ನುತ್ತಾ ಜೀ ಹುಜೂರ್‌ ಎನ್ನುವುದಾ? 25 ಸಂಸದರ ಯೋಗ್ಯತೆ ಏನು? ಅವರಿಗೆಷ್ಟು ಸ್ವಾತಂತ್ರ್ಯ ಕೊಟ್ಟಿದ್ದೀರಿ?’ಜೆಡಿಎಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂಬ ಬಿಜೆಪಿ ನಾಯಕ ಸಿ.ಟಿ. ರವಿಗೆ ಈ ರೀತಿ ಭರ್ಜರಿ ತಿರುಗೇಟು ನೀಡಿದ್ದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ.

ಬೆಂಗಳೂರು (ಜು.05): ‘ಆಂತರಿಕ ಪ್ರಜಾಪ್ರಭುತ್ವ ಎಂದರೆ ಪ್ರಧಾನಿ ನರೇಂದ್ರ ಮೋದಿ ಮುಂದೆ ‘ಸತ್ತ ಸೊಂಟ’ದವರಂತೆ ನಡುಬಗ್ಗಿಸಿ ತಲೆ ಅಲ್ಲಾಡಿಸುವುದಾ? ಜೀ ಜೀ ಎನ್ನುತ್ತಾ ಜೀ ಹುಜೂರ್‌ ಎನ್ನುವುದಾ? 25 ಸಂಸದರ ಯೋಗ್ಯತೆ ಏನು? ಅವರಿಗೆಷ್ಟು ಸ್ವಾತಂತ್ರ್ಯ ಕೊಟ್ಟಿದ್ದೀರಿ?’ಜೆಡಿಎಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂಬ ಬಿಜೆಪಿ ನಾಯಕ ಸಿ.ಟಿ. ರವಿಗೆ ಈ ರೀತಿ ಭರ್ಜರಿ ತಿರುಗೇಟು ನೀಡಿದ್ದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಆಪರೇಷನ್‌ ದಕ್ಷಿಣ್‌ ಎಂಬ ಸ್ಲೋಗನ್‌ ಮೂಲಕ ಬಿಜೆಪಿಯು ಪ್ರಾದೇಶಿಕ ಪಕ್ಷಗಳನ್ನು ಸಂಪೂರ್ಣವಾಗಿ ಮೂಲೋತ್ಪಾಟನೆ ಮಾಡಿ, ಪ್ರತಿಪಕ್ಷ ಮತ್ತು ಪ್ರಜಾಪ್ರಭುತ್ವ ಮುಕ್ತ ಭಾರತ ನಿರ್ಮಾಣ ಮಾಡಲು ಹೊರಟಿದೆ. ಹೈದರಾಬಾದ್‌ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು, ಜನರ ಮನಸ್ಸುಗಳನ್ನು ಒಡೆದು ‘ರಾವಣ ರಾಜಕೀಯ’ದ ವಿನಾಶಕಾರಿ ದಾರಿಗೆ ಹಿಡನ್‌ ಅಜೆಂಡಾ ಸಿದ್ಧ ಮಾಡಲಾಯಿತಾ? ಎಂದು ವ್ಯಂಗ್ಯವಾಡಿದ್ದಾರೆ.

ಅಪ್ಪ ಭೀಷ್ಮನಿದ್ದಂತೆ, ಬಯಸಿದಾಗ ಸಾವು ಬರುತ್ತದೆ: ಎಚ್‌ಡಿಕೆ

ನೆಮ್ಮದಿಯ ಸಮಾಜಕ್ಕೆ ಕೋಮು ವಿಷ ಪ್ರಾಶನ ಮಾಡುವ ಇಂಜೆಕ್ಷನ್‌. ಧರ್ಮ, ದೇವರು, ಜಾತಿ, ಭಾಷೆ, ಆಚಾರ, ಆಹಾರ, ವ್ಯಾಪಾರಗಳನ್ನು ಎಳೆತಂದು, ಅಸಹಿಷ್ಣುತೆ ಸೃಷ್ಟಿಸಿ ಭಾರತವನ್ನು ಧರ್ಮದ ಆಧಾರದಲ್ಲಿ ಒಡೆದು ಹಾಕುವುದಾ? ಕರ್ನಾಟಕದ ನಂತರ ನಿಮ್ಮ ಮುಂದಿನ ಗುರಿ ದಕ್ಷಿಣ ಭಾರತ. ಹೌದಲ್ಲವೇ ಸಿ.ಟಿ.ರವಿಯವರೇ? ದಕ್ಷಿಣದಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಶಕ್ತಿ. ಇಲ್ಲಿ ಹೆಜ್ಜೆ ಇಡಲು ಬಿಜೆಪಿಗೆ ಆಗುತ್ತಿಲ್ಲ. ಆಪರೇಷನ್‌ ಕಮಲದಿಂದ ಕರ್ನಾಟಕದಲ್ಲಿ ಅಧಿಕಾರ ಹಿಡಿದಿರಿ. 

ಒಡಿಶಾ, ತೆಲಂಗಾಣ, ಆಂಧ್ರ, ತಮಿಳುನಾಡು, ಕೇರಳದಲ್ಲಿ ನಿಮ್ಮ ಬೇಳೆ ಬೇಯಲಿಲ್ಲ. ಅದಕ್ಕೀಗ ಪರಿವಾರ ಮುಕ್ತ ರಾಜಕೀಯ ಎಂದು ರಾಗ ತೆಗೆಯುತ್ತಿದ್ದೀರಿ. ಪ್ರಾದೇಶಿಕ ಪಕ್ಷಗಳನ್ನು ಎದುರಿಸಲಾಗದ ಬಿಜೆಪಿ, ಈಗ ಪರಿವಾರ ಜಪ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಪರಿವಾರ ರಾಜಕಾರಣಕ್ಕೆ ಬಿಜೆಪಿ ಅತೀತವಲ್ಲ. ರಾಜ್ಯದ ಲೆಕ್ಕ ಕೊಟ್ಟಿದ್ದೇನೆ. ಭಾರತದ ಪಟ್ಟಿಕೊಡಲೇ? ಅಬ್ಬರ ಜಾಸ್ತಿ, ಅಭಿವೃದ್ಧಿ ನಾಸ್ತಿ. ಇದು ಬಿಜೆಪಿ ನೀತಿ. ಬಿಜೆಪಿ ಪಕ್ಷದ್ದು ಆಪರೇಷನ್‌ ದಕ್ಷಿಣ್‌ ಅಲ್ಲ, ಆ ಬಿಜೆಪಿ ಅಸ್ತಿತ್ವಕ್ಕೆ ಆಪರೇಷನ್‌ ಆಗುವ ಕಾಲ ಹತ್ತಿರದಲ್ಲಿಯೇ ಇದೆ ಎಂದು ತಿಳಿಸಿದ್ದಾರೆ.

ರಾಜಣ್ಣಗೆ ಖಡಕ್ ಎಚ್ಚರಿಕೆ: ದೇವೇಗೌಡ್ರು ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ ಎನ್ನುವ ಕಾಂಗ್ರೆಸ್ ನಾಯಕ ಕೆ.ಎನ್ ರಾಜಣ್ಣ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇನ್ನು ಈ ಬಗ್ಗೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ರಾಜಣ್ಣಗೆ ಏಕವಚನದಲ್ಲೇ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಅದು ಅವರ ಸಂಸ್ಕೃತಿ ತೋರುತ್ತದೆ. ಅವತ್ತು ಅವರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಾಗ ದೇವೇಗೌಡರು ಪ್ರಚಾರಕ್ಕೆ ಬರಲೇಬೇಕು ಅಂತಾ ಹಠ ಹಿಡಿದಿದ್ರು. ಅವತ್ತು ದೇವೇಗೌಡರು, ಪ್ರಚಾರಕ್ಕೆ ಹೋಗಿದ್ದಕ್ಕೆ ಅವರು ಗೆದ್ದಿದ್ದು. ಇವತ್ತು ದೇವೇಗೌಡರ ಬಗ್ಗೆ ಈ ರೀತಿಯ ಮಾತಾಡ್ತೀರಾ ಎಂದು ರಾಜಣ್ಣ ವಿರುದ್ಧ ಕಿಡಿಕಾರಿದರು. 

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ 70 ದಾಟಲ್ಲ, ಚಾಲೆಂಜ್‌: ಎಚ್‌ಡಿಕೆ

ತುಮಕೂರಿನಲ್ಲಿ ದೇವೇಗೌಡರು ಅಷ್ಟು ಜ್ವರ ಇದ್ದಾಗ ಬಂದು ನಿನ್ನ ಪರವಾಗಿ ಪ್ರಚಾರ ಮಾಡಿ ಗೆಲ್ಲಿಸಿದ್ದರು. ಆದರೆ ದೇವೇಗೌಡರು ತುಮಕೂರಿನಲ್ಲಿ ಸೋಲಲು ನೀನೂ ಕಾರಣನಾದ್ಯಲ್ಲಪ್ಪಾ. ದೇವೇಗೌಡರ ಆರೋಗ್ಯದಲ್ಲಿ ಆದ ಏರುಪೇರಿಗೆ ನಿಮ್ಮಂತಹಾ ಕೃತಘ್ನರು ಕಾರಣ. ಇನ್ನೂ ಎರಡು ತಿಂಗಳು ಕಾದು ನೋಡು. ಯಾರ ಸಹಾಯವಿಲ್ಲದೇ ನಡೆಯುತ್ತಾರೆ. ನೀನು ಕ್ಷಮೆ ಕೇಳು ಅಂತಾ ನಾನು ಹೇಳಲ್ಲ. ಹುಷಾರ್ ಅಂತಾ ಹೇಳಲು ಬಯಸ್ತೀನಿ. ಮಧುಗಿರಿಯಲ್ಲಿ ಬಂದು ಕಾರ್ಯಕರ್ತರಿಂದ ಉತ್ತರ ಕೊಡಿಸುತ್ತೇನೆ. ಪ್ರಾಯಶ್ಚಿತ್ತ ಅನಿಭವಿಸಬೇಕಾಗುತ್ತದೆ. ಹುಷಾರ್ ಎಂದು ಗರಂ ಆಗಿ ರಾಜಣ್ಣಗೆ ಎಚ್ಚರಿಕೆ ನೀಡಿದರು.