Asianet Suvarna News Asianet Suvarna News

ಸಿದ್ದರಾಮಯ್ಯ-ಸಿಎಂ ಕಂಬಳಿ ಕದನಕ್ಕೆ ಈಗ ಎಚ್‌ಡಿಕೆ ಎಂಟ್ರಿ

 • ಚುನಾವಣಾ ಪ್ರಚಾರದ ಕೊನೆ ದಿನವೂ ಕಂಬಳಿ ವಿಷಯವಾಗಿ ರಾಜಕೀಯ ನಾಯಕರ ಜಟಾಪಟಿ
 •  ಒಂದು ಕಡೆ ಕಂಬಳಿಯನ್ನು ರಾಜಕೀಯಕ್ಕೆ ಎಳೆದು ತಂದದ್ದೇ ಮುಖ್ಯಮಂತ್ರಿ ಬೊಮ್ಮಾಯಿ ಎಂದು ಸಿದ್ದರಾಮಯ್ಯ
 • ಇನ್ನೊಂದು ಕಡೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಂಬಳಿಯನ್ನು ಬೀದಿ ಚರ್ಚೆಯ ವಸ್ತುವಾಗಿ ಮಾಡಿದ್ದೇ ಸಿದ್ದರಾಮಯ್ಯ ಎಂದು ಆರೋಪ
JDS Leader HD Kumaraswamy Enter Blanket Politics snr
Author
Bengaluru, First Published Oct 28, 2021, 7:22 AM IST
 • Facebook
 • Twitter
 • Whatsapp

 ಸಿಂದಗಿ (ಅ.28):  ಚುನಾವಣಾ ಪ್ರಚಾರದ (Election ) ಕೊನೆ ದಿನವೂ ಕಂಬಳಿ ವಿಷಯವಾಗಿ ರಾಜಕೀಯ (Politics) ನಾಯಕರ ಜಟಾಪಟಿ ಮುಂದುರಿಯಿತು. ಒಂದು ಕಡೆ ಕಂಬಳಿಯನ್ನು ರಾಜಕೀಯಕ್ಕೆ ಎಳೆದು ತಂದದ್ದೇ ಮುಖ್ಯಮಂತ್ರಿ ಬೊಮ್ಮಾಯಿ (Basavaraja Bommai) ಎಂದು ಸಿದ್ದರಾಮಯ್ಯ (Siddaramaiah) ಆರೋಪಿಸಿದರೆ, ಇನ್ನೊಂದು ಕಡೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumarasway) ಅವರು ಕಂಬಳಿಯನ್ನು ಬೀದಿ ಚರ್ಚೆಯ ವಸ್ತುವಾಗಿ ಮಾಡಿದ್ದೇ ಸಿದ್ದರಾಮಯ್ಯ (Siddaramaiah) ಎಂದು ಆರೋಪಿಸಿದ್ದಾರೆ.

ಸಿಂದಗಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಸಿದ್ದರಾಮಯ್ಯ (Siddaramaiah) ಅವರಿಗೆ ಕಂಬಳಿ ಬಗ್ಗೆ ಗೌರವ ಇದ್ದರೆ ಅದನ್ನು ಈ ರೀತಿ ಬೀದಿ ಬದಿಯ ಚರ್ಚೆಯ ವಿಚಾರವಾಗಿ ಮಾಡಬಾರದಿತ್ತು ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯಗೆ ತೀಕ್ಷ್ಣವಾಗಿ ತಿರುಗೇಟು ಕೊಟ್ಟ ನಿಖಿಲ್ ಕುಮಾರಸ್ವಾಮಿ

ಇದೇ ವೇಳೆ ತಮಗೆ ಕೃಷಿ ಮಾಡಿ ಗೊತ್ತಾ? ಎಂಬ ಸಿದ್ದರಾಮಯ್ಯ ಟೀಕೆಗೂ ಪ್ರತಿಕ್ರಿಯಿಸಿದ ಕುಮಾರಸ್ವಾಮಿ (HD Kumaraswamy), ಎಚ್‌.ಡಿ. ದೇವೇಗೌಡರು (HD Devegowda) ಶಾಸಕರಿದ್ದಾಗ, ಅವರು ಆಲೂಗಡ್ಡೆ ಬಿತ್ತನೆ ಮಾಡುವಾಗ ನಾವು ಕೃಷಿ ಕೆಲಸ ಮಾಡುತ್ತಿದ್ದೆವು. ಹೊಲದಲ್ಲಿ ಕೆಲಸ ಮಾಡುವ ಬದ್ಧತೆಯನ್ನು ನಮ್ಮ ತಂದೆಯಿಂದ ಕಲಿತಿದ್ದೇವೆ. ಆಗ ಕುರಿಮಂದೆಯಲ್ಲೆ ಊಟ ಮಾಡಿದ್ದೇವೆ, ಕುರಿಗಳ ಜೊತೆಗೆ ಮಲಗಿದ್ದೇವೆ. ಕುರಿ ಗೊಬ್ಬರವನ್ನೂ ಜಮೀನಿಗೆ ಹಾಕಿದ್ದೇವೆ ಎಂದು ತಿರುಗೇಟು ನೀಡಿದರು.

ಸಿದ್ದುಗೆ ಜೆಡಿಎಸ್‌ (JDS) ಅಂದ್ರೆ ವೈರಿ: ನನ್ನ ಬೆಳವಣಿಗೆ ಸಹಿಸದೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಶಾಸಕ ಜಮೀರ್‌ ಅಹಮದ್‌ (zameer Ahmed) ಟೀಕೆ ಮಾಡುತ್ತಿದ್ದಾರೆ. ಜೆಡಿಎಸ್‌ ಪಕ್ಷವನ್ನು ಸಿದ್ದರಾಮಯ್ಯ ವೈರಿಯಂತೆ ನೋಡುತ್ತಾರೆ. ಅದೇ ಕಾರಣಕ್ಕೆ ಪಕ್ಷದ ಬಗ್ಗೆ ಪದೇ ಪದೆ ಮಾತನಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

ಕುಮಾರಸ್ವಾಮಿಗೆ ಸಂಜೆವರೆಗೆ ಫುಲ್‌ ಫ್ರೀಡಂ ಇದೆ ಎಂದ ಸೋಮಣ್ಣಗೆ ಎಚ್‌ಡಿಕೆ ತಿರುಗೇಟು

ಜೆಡಿಎಸ್‌ಗೆ ಮತ ಕೊಟ್ಟರೆ ಬಿಜೆಪಿಗೆ (BJP) ಲಾಭ ಎನ್ನುವ ಸಿದ್ದರಾಮಯ್ಯ ಹೇಳಿಕೆಗೂ ಆಕ್ರೋಶ ವ್ಯಕ್ತಪಡಿಸಿದ ಅವರು, ಈ ರೀತಿಯ ಮಾತು ಕೇಳಿ ಕೇಳಿ ಸಿಂದಗಿ ಜನ ಬೇಸತ್ತು ಹೋಗಿದ್ದಾರೆ. ಹಾಡಿದ್ದೇ ಹಾಡೋ ಕಿಸುಬಾಯಿ ದಾಸ ಎನ್ನುವ ಗಾದೆ ಮಾತು ಸಿದ್ದರಾಮಯ್ಯ ಅವರಿಗೆ ಅನ್ವಯ ಆಗುತ್ತದೆ ಎಂದರು.

ಜೆಡಿಎಸ್‌ ಪಕ್ಷ ಸಿದ್ದರಾಮಯ್ಯ ಪಾಲಿಗೆ ವೈರಿ. ಅವರಿಗೆ ಬಿಜೆಪಿಗಿಂತಲೂ ದೊಡ್ಡ ವೈರಿ ಅಂದರೆ ಅದು ಜೆಡಿಎಸ್‌. ಹೀಗಾಗಿ ಜೆಡಿಎಸ್‌ ಕುರಿತು ಪದೇ ಪದೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಲಘುವಾಗಿ ಮಾತನಾಡಿದಷ್ಟುಜೆಡಿಎಸ್‌ ದ್ವಿಗುಣವಾಗಿ, ದೊಡ್ಡಪಕ್ಷವಾಗಿ ಬೆಳೆಯುತ್ತಲೇ ಇರುತ್ತದೆ ಎಂದು ವ್ಯಂಗ್ಯವಾಡಿದರು.

ಕುಮಾರಸ್ವಾಮಿಯವರನ್ನು ಬುಧವಾರ ಸಂಜೆವರೆಗೆ ಫ್ರೀ ಬಿಟ್ಟಿದ್ದೇವೆ. ನಾಳೆಯಿಂದ ನಮ್ಮ ಆಟ ಎಂದಿರುವ ಸಚಿವ ಸೋಮಣ್ಣನವರ ಹೇಳಿಕೆಗೆ ಉತ್ತರಿಸಿದ ಅವರು, ನಾಳೆಯಿಂದ ನಮ್ಮ ಆಟ ಅಂದ್ರೆ ದುಡ್ಡು ಹಂಚುವ ಆಟವೋ? ನಿಮ್ಮ ಆಟ ಕೇವಲ ಚುನಾವಣೆಗೆ ಸೀಮಿತವಾಗಿರುತ್ತೆ. ಸಿಂದಗಿಗೆ ಈವರೆಗೆ ಬಾರದಿರುವ ಮಂತ್ರಿಗಳು ಚುನಾವಣೆ ಆದ ಮೇಲೆ ಮತ್ತೆ ಬರುತ್ತೀರಾ? ನಿಮ್ಮ ಆಟವನ್ನು ಬದಲಾಯಿಸಲು ಸಿಂದಗಿ ಜನ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್‌, ಬಿಜೆಪಿ ಹಣ ಹಂಚುವುದಕ್ಕೆ ಶುರು ಮಾಡುತ್ತವೆ ಎಂದು ಆರೋಪಿಸಿದರು.

 • ಚುನಾವಣಾ ಪ್ರಚಾರದ ಕೊನೆ ದಿನವೂ ಕಂಬಳಿ ವಿಷಯವಾಗಿ ರಾಜಕೀಯ ನಾಯಕರ ಜಟಾಪಟಿ ಮುಂದುರಿಯಿತು
 • ಒಂದು ಕಡೆ ಕಂಬಳಿಯನ್ನು ರಾಜಕೀಯಕ್ಕೆ ಎಳೆದು ತಂದದ್ದೇ ಮುಖ್ಯಮಂತ್ರಿ ಬೊಮ್ಮಾಯಿ ಎಂದು ಸಿದ್ದರಾಮಯ್ಯ ಆರೋಪ
 • ಇನ್ನೊಂದು ಕಡೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಂಬಳಿಯನ್ನು ಬೀದಿ ಚರ್ಚೆಯ ವಸ್ತುವಾಗಿ ಮಾಡಿದ್ದೇ ಸಿದ್ದರಾಮಯ್ಯ ಎಂದು ಆರೋಪ
Follow Us:
Download App:
 • android
 • ios