ಬೆಂಗಳೂರು (ಅ.13): ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಕೇರಳ ಜೆಡಿಎಸ್‌ ಶಾಸಕ ಸಿ.ಕೆ.ನಾನು ನೇತೃತ್ವದ ರಾಜ್ಯ ಘಟಕವನ್ನು ವಿಸರ್ಜಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಆದೇಶಿಸಿದ್ದಾರೆ. 

ಪಕ್ಷದ ಸಂಘಟನಾತ್ಮಕ ಮೇಲುಸ್ತುವಾರಿ ವಹಿಸಲು ತಾತ್ಕಾಲಿಕವಾಗಿ ಹಂಗಾಮಿ ಅಧ್ಯಕ್ಷರನ್ನಾಗಿ ಮ್ಯಾಥ್ಯೂ ಟಿ.ಥಾಮಸ್‌ ಅವರನ್ನು ನೇಮಕ ಮಾಡಿದ್ದಾರೆ. 

ಬೈ ಎಲೆಕ್ಷನ್‌ನಲ್ಲಿ ಜಾತಿ ವಾರ್: ಹಳೆ ಜೋಡೆತ್ತುಗಳ ನಡುವೆ ಶುರುವಾಯ್ತು ಕಾದಾಟ ..

ಸಂಘಟನೆ ವಿಚಾರದಲ್ಲಿ ವಿಫಲವಾಗಿರುವ ಮತ್ತು ಪಕ್ಷ ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ್ದರು ಎಂಬ ಆರೋಪದ ಮೇಲೆ ಜೆಡಿಎಸ್‌ ರಾಷ್ಟ್ರೀಯ ಕಾರ್ಯಾಧ್ಯಕ್ಷ ಬಿ.ಎಂ.ಫಾರೂಕ್‌ ವಿವರಣೆ ಕೇಳಿ ನೋಟಿಸ್‌ ನೀಡಿದ್ದರು. 

ಆದರೆ, ನಾನು ಅವರು ನೋಟಿಸ್‌ಗೆ ಯಾವುದೇ ಉತ್ತರ ನೀಡದ ಕಾರಣಕ್ಕಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜೋಸೆ ತೆಟ್ಟಾಯಿಲ್‌, ಜಮೀಲಾ ಪ್ರಕಾಶಂ ಅವರನ್ನು ಉಪಾಧ್ಯಕ್ಷರನ್ನಾಗಿ, ಬೆನ್ನಿ ಮೂಂಜೇಲಿ, ವಿ.ಮುರುಗದಾಸ್‌, ಬಿಜೈ ಜೋಸೆಫ್‌ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಮಹಮದ್‌ ಶಾ ಅವರನ್ನು ಖಜಾಂಚಿಯಾಗಿ ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.