ಸರ್ಕಾರ ಬರಲಾರದ ಕಡೆಗೆ ಕಾಂಗ್ರೆಸ್‌ನವರು ಆಶ್ವಾಸನೆ ನೀಡುತ್ತಿದ್ದಾರೆ. ನಮ್ಮಲ್ಲಿ ರೈತರ ಸಾಲ ಮನ್ನಾದ ಬಗ್ಗೆ ಮಾತನಾಡುತ್ತಿಲ್ಲ. ಇಲ್ಲಿಯ ರೈತರಿಗೆ ಏನು ಪರಿಹಾರ ಕೊಟ್ಟಿಲ್ಲ. ಅಲ್ಲಿ ಪರಿಹಾರ ಕೊಡ್ತಿನಿ ಎಂದಿದ್ದಾರೆ. ಇದ್ಯಾಕ್‌ ಈ ರೀತಿಯ ದ್ವಂದ್ವ ನಿಲುವುಗಳನ್ನು ಕಾಂಗ್ರೆಸ್‌ನವ್ರು ಮಾಡ್ತಿದ್ದಾರೆ. ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷವೇ ಇಲ್ಲವೇ ಗಲ್ಲಿ ಪಾರ್ಟಿಯೇ ಎಂದು ಖಾರವಾಗಿ ಪ್ರಶ್ನಿಸಿದ ಬಂಡೆಪ್ಪ ಖಾಶೆಂಪುರ್

ಬೀದರ್‌(ನ.18): ತನ್ನ ಪಕ್ಷದ ಸರ್ಕಾರ ಬಾರದಿರುವ ಕಡೆಗೆಲ್ಲ ಹೆಚ್ಚೆಚ್ಚು ಗ್ಯಾರಂಟಿಗಳ ಘೋಷಣೆ ಮಾಡುತ್ತ, ಸರ್ಕಾರ ಇರುವ ರಾಜ್ಯಗಳಲ್ಲಿ ಜನರನ್ನು ಕಡೆಗೆಣಿಸುತ್ತಿರುವ ಕಾಂಗ್ರೆಸ್‌ ನ್ಯಾಷನಲ್‌ ಪಾರ್ಟಿನಾ ಅಥವಾ ಗಲ್ಲಿ ಪಾರ್ಟಿನಾ ಎಂಬುವುದಕ್ಕೆ ರಾಹುಲ್‌ ಗಾಂಧಿ ಅವರೇ ಉತ್ತರಿಸಲಿ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌ ಸವಾಲೆಸೆದರು.

ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಗುಜರಾತ್‌ನಲ್ಲಿ ಮತ್ತು ಉತ್ತರಪ್ರದೇಶದಲ್ಲಿ ಅವರ ಸರ್ಕಾರ ಬರೋಲ್ಲ ಆದರೆ ಅಲ್ಲಿ ಕಾಂಗ್ರೆಸ್‌ ರೈತರ ಸಾಲ ಮನ್ನಾ ಎಂದು ಘೋಷಿಸಿದೆ. ತೆಲಂಗಾಣಾದಲ್ಲಿ ಮಹಿಳೆಯರಿಗೆ ಎರಡೂವರೆ ಸಾವಿರ ರು., 300 ಯುನಿಟ್‌ವರೆಗೆ ವಿದ್ಯುತ್‌ ಉಚಿತವೆಂದು ಹೇಳಿದೆ ಎಂದರು.

ರಾಜ್ಯದಲ್ಲಿ ಕೊಲ್ಕತ್ತಾ ಡ್ಲೂಪಿಕೇಟ್ ಡಾಕ್ಟರ್ಸ್ ಹಾವಳಿ..! ಕವರ್ ಸ್ಟೋರಿಯಲ್ಲಿ ನಕಲಿ ವೈದ್ಯರ ಬಣ್ಣಬಯಲು..!

ಹೀಗೆಯೇ ಸರ್ಕಾರ ಬರಲಾರದ ಕಡೆಗೆ ಕಾಂಗ್ರೆಸ್‌ನವರು ಆಶ್ವಾಸನೆ ನೀಡುತ್ತಿದ್ದಾರೆ. ನಮ್ಮಲ್ಲಿ ರೈತರ ಸಾಲ ಮನ್ನಾದ ಬಗ್ಗೆ ಮಾತನಾಡುತ್ತಿಲ್ಲ. ಇಲ್ಲಿಯ ರೈತರಿಗೆ ಏನು ಪರಿಹಾರ ಕೊಟ್ಟಿಲ್ಲ. ಅಲ್ಲಿ ಪರಿಹಾರ ಕೊಡ್ತಿನಿ ಎಂದಿದ್ದಾರೆ. ಇದ್ಯಾಕ್‌ ಈ ರೀತಿಯ ದ್ವಂದ್ವ ನಿಲುವುಗಳನ್ನು ಕಾಂಗ್ರೆಸ್‌ನವ್ರು ಮಾಡ್ತಿದ್ದಾರೆ. ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷವೇ ಇಲ್ಲವೇ ಗಲ್ಲಿ ಪಾರ್ಟಿಯೇ ಎಂದು ಬಂಡೆಪ್ಪ ಖಾಶೆಂಪುರ್ ಅವರು ಖಾರವಾಗಿ ಪ್ರಶ್ನಿಸಿದರು.

ರಾಜ್ಯದಲ್ಲಿ ಶಿಷ್ಯ ವೇತನ, ಶಾಸಕರ ಅನುದಾನವನ್ನು ಈ ಸರ್ಕಾರ ಕಡಿಮೆ ಮಾಡಿದೆ. ಗ್ಯಾರಂಟಿ ಗದ್ದಲದಲ್ಲಿ ಅಭಿವೃದ್ಧಿ ಕುಂಠಿತಗೊಳಿಸಿದೆ. ಗ್ಯಾರಂಟಿ ಕೂಡ ಸಮರ್ಪಕವಾಗಿ ಜಾರಿಗೆ ತರುತ್ತಿಲ್ಲ. ಏನೇ ಕೇಳಿದರೂ ಸರ್ವರ್‌ ಡೌನ್‌ ಅಂತಾರೆ, ಅದೆಲ್ಲ ಸುಳ್ಳು. ಸರ್ವರ್‌ ಅಲ್ಲ ಸರ್ಕಾರವೇ ಡೌನ್‌ ಆಗಿದೆ ಎಂದೆನಿಸ್ತಿದೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌ ವ್ಯಂಗ್ಯವಾಡಿದರು.