ಕಾಂಗ್ರೆಸ್ ತಂತ್ರಕ್ಕೆ ಜೆಡಿಎಸ್ ಪ್ರತಿತಂತ್ರ..!

ವಿಧಾನಪರಿಷತ್ ಸಭಾಪತಿ ಚುನಾವಣೆ ತೀವ್ರ ಕುತೂಹಲ ಮೂಡಿಸಿದ್ದು, ಕಾಂಗ್ರೆಸ್ ತಂತ್ರಕ್ಕೆ ಜೆಡಿಎಸ್ ಪ್ರತಿತಂತ್ರ ರೂಪಸಿದೆ.

JDS issues whip His Party Member Over council chairman Election rbj

ಬೆಂಗಳೂರು, (ಫೆ.08): ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆನಿಂದ ತೆರವಾಗಿರುವ ಸ್ಥಾನಕ್ಕೆ ನಾಳೆ (ಮಂಗಳವಾರ) ಚುನಾವಣೆ ನಡೆಯಲಿದೆ.

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಾಳೆ (ಮಂಗಳವಾರ) ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿದೆ.

ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ರೂ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕೆ: ಎಲೆಕ್ಷನ್ ಕುತೂಹಲ 

ಜೆಡಿಎಸ್ ಪಕ್ಷದ ವಿಧಾನಪರಿಷತ್ ಮುಖ್ಯಸಚೇತಕ ಎನ್. ಅಪ್ಪಾಜಿಗೌಡ ಅವರು ಮಂಗಳವಾರ ಸದನದಲ್ಲಿ ಎಲ್ಲಾ ಸದಸ್ಯರು ಕಡ್ಡಾಯವಾಗಿ ಹಾಜರಿರುವಂತೆ ವಿಪ್ ಜಾರಿ ಮಾಡಿದ್ದಾರೆ. ಅಧಿವೇಶನ ಮುಗಿಯುವವರೆಗೂ ಕಲಾಪಗಳಲ್ಲಿ ಸದಸ್ಯರು ಹಾಜರಾಗಬೇಕೆಂದು ಸೂಚನೆ ನೀಡಲಾಗಿದೆ.

ಹೌದು..ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಬಸವರಾಜ್ ಹೊರಟ್ಟಿ ಅವರು ನಾಮಪತ್ರಸಲ್ಲಿದ್ದಾರೆ. ಇನ್ನು ಗೆಲ್ಲಲು ಬಹುಮತ ಇಲ್ಲದಿದ್ದರೂ ಸಹ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಕಾಂಗ್ರೆಸ್​ ಅಭ್ಯರ್ಥಿಯಾಗಿ ನಜೀರ್​​​ ಅಹಮ್ಮದ್​​ ಇಂದು (ಸೋಮವಾರ) ನಾಮಪತ್ರ ಸಲ್ಲಿಸಿದ್ದು, ತೀವ್ರ ಕುತೂಹಲ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಅನಿರ್ವಾಯವಾಗಿ ವಿಪ್ ಜಾರಿ ಮಾಡಬೇಕಾಗಿ ಬಂದಿದೆ. ಒಂದು ವೇಳೆ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕದಿದ್ದರೇ ಜೆಡಿಎಸ್‌ನ ಬಸವರಾಜ್ ಹೊರಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು.

ವಿಧಾನಪರಿಷತ್ ನ ಒಟ್ಟು ಸದಸ್ಯ ಬಲ -  75.
ಆಡಳಿತಾರೂಢ ಬಿಜೆಪಿಯ ಬಲ - 31
ಪ್ರತಿಪಕ್ಷ ಕಾಂಗ್ರೆಸ್ ಬಲ - 29
ಜೆಡಿಎಸ್ ಸದಸ್ಯ ಬಲ - 13
ಪಕ್ಷೇತರರ ಸಂಖ್ಯೆ -01
ಖಾಲಿ -01 

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಒಟ್ಟು ಬಲ - 31 + 13 = 44 
ಪ್ರತಿಪಕ್ಷ ಕಾಂಗ್ರೆಸ್ ಬಲ - 29
ಪಕ್ಷೇತರರ ಬೆಂಬಲ ಕಾಂಗ್ರೆಸ್ ಗೆ ಸಿಕ್ಕರೂ ಒಟ್ಟು ಬಲ - 30 ಮಾತ್ರ.

Latest Videos
Follow Us:
Download App:
  • android
  • ios