'ಕರ್ನಾಟಕದಲ್ಲಿ ಬಹುಮತದೊಂದಿಗೆ ಜೆಡಿಎಸ್ ಸರ್ಕಾರ ರಚನೆ'
ಪಂಚರತ್ನ ಯಾತ್ರೆಯಿಂದ ಜೆಡಿಎಸ್‌ಗೆ ಅಪಾರ ಜನಬೆಂಬಲ ವ್ಯಕ್ತವಾಗುತ್ತಿದ್ದು, ಅದು ಮತವಾಗಿ ಪರಿವರ್ತಿತವಾಗುವುದರಲ್ಲಿ ಯಾವ ಅನುಮಾನಗಳೂ ಇಲ್ಲ, ಈ ನೆಲ- ಜಲದ ಅಸ್ಮಿತೆಯನ್ನು ಉಳಿಸಿಕೊಂಡು, ಪ್ರಾದೇಶಿಕ ಹಿನ್ನಲೆಯಲ್ಲಿ ಬಡವರ, ರೈತರ ಪರವಾದ ಸರ್ಕಾರ ರಚಿಸುತ್ತೇವೆ: ಎಂ.ಬಿ. ಸದಾಶಿವ
ಯಲ್ಲಾಪುರ(ಏ.08): ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಧುರೀಣ ಕುಮಾರಸ್ವಾಮಿ ನ್ಝೇ=ತ್ವದಲ್ಲಿ ಚುನಾವಣೆಯ ಹೊಸ ಗಾಳಿ ಬೀಸತೊಡಗಿದ್ದು, ಈ ಚುನಾವಣೆಯಲ್ಲಿ ನಿಶ್ಚಿತವಾಗಿ ಜನತಾದಳ ಅತ್ಯಂತ ಭಲಿಷ್ಠ ಪಕ್ಷವಾಗಿ ಹೊರ ಹೊಮ್ಮಲಿದೆ. ಅಲ್ಲದೇ ವಿಪಕ್ಷಗಳ ನೆರವು ಪಡೆದು ಸರ್ಕಾರ ರಚಿಸುವ ಪರಿಸ್ಥಿತಿ ಬಾರದೇ ಸಂಪೂರ್ಣ ಬಹುಮತ ಪಡೆದು ನಮ್ಮದೇ ಸರ್ಕಾರ ರಚನೆಯಾಗುವುದು ಖಂಡಿತ ಎಂದು ಜೆಡಿಎಸ್ ರಾಜ್ಯ ವಕ್ತಾರ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಎಂ.ಬಿ. ಸದಾಶಿವ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಪಟ್ಟಣದಲ್ಲಿ ಹಮ್ಮಿಕೊಂಡ ಸದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂಚರತ್ನ ಯಾತ್ರೆಯಿಂದ ಜೆಡಿಎಸ್‌ಗೆ ಅಪಾರ ಜನಬೆಂಬಲ ವ್ಯಕ್ತವಾಗುತ್ತಿದ್ದು, ಅದು ಮತವಾಗಿ ಪರಿವರ್ತಿತವಾಗುವುದರಲ್ಲಿ ಯಾವ ಅನುಮಾನಗಳೂ ಇಲ್ಲ ಎಂದ ಅವರು, ಈ ನೆಲ- ಜಲದ ಅಸ್ಮಿತೆಯನ್ನು ಉಳಿಸಿಕೊಂಡು, ಪ್ರಾದೇಶಿಕ ಹಿನ್ನಲೆಯಲ್ಲಿ ಬಡವರ, ರೈತರ ಪರವಾದ ಸರ್ಕಾರ ರಚಿಸುತ್ತೇವೆ. ಪಕ್ಷದ ಹಳೆಯ ಕಾರ್ಯಕರ್ತರು, ಮತ್ತೆ ಮಂಚೂಣಿಯಲ್ಲಿ ಬರುತ್ತಿದ್ದು ಮಿಷನ್ 123 ಗುರಿ ತಲುಪಿಯೇ ತಲುಪುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
KARNATAKA ELECTION 2023: ಹೊಸ ಚುನಾವಣೆ, ಹಳೆಯ ಕಲಿಗಳ ಕಾಳಗ
ನಮ್ಮ ಸರ್ಕಾರ ಬಂದ ನಂತರದಲ್ಲಿ ರೈತರು ಕೃಷಿಯಲ್ಲಿ ಉನ್ನತಿ ಸಾಧಿಸಲು ನೆರವಾಗುವ ನಿಟ್ಟಿನಲ್ಲಿ ರೈತರಿಗೆ .10 ಸಾವಿರ ಆರ್ಥಿಕ ನೆರವು, ಮಹಿಳೆಯರ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮತ್ತಿತರ ಉಪಯುಕ್ತ ಯೋಜನೆಗಳನ್ನು ಜನರಿಗೆ ತಲುಪಿಸಲಿದೆ. ಇದು ರೈತರಿಗೆ ಉಚಿವಾಗಿರದೇ, ಉತ್ಪಾದಕತೆಗೆ ಪೂರಕವಾಗಿ ನೀರಾವರಿ, ರಸಗೊಬ್ಬರಕ್ಕೆ ಸಹಾಯಧನವಾಗಿದೆ ಎಂದರು. ಪಕ್ಷ ಸಂಘಟನೆಗಾಗಿ ಕುಮಾರಸ್ವಾಮಿ ಅವರು ಏಪ್ರಿಲ್ ಎರಡನೇ ವಾರ ಜಿಲ್ಲೆಗೆ ಆಗಮಿಸಿ ಜೋಯಿಡಾ, ದಾಂಡೇಲಿ, ಶಿರಸಿ, ಕುಮಟಾಗಳಲ್ಲಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಉಚಿತ ನೆರವುಗಳಿಗೆ ಸಂಪನ್ಮೂಲ ಕ್ರೋಢೀಕರಣ ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ರೈತರ ಸಾಲ ಮನ್ನಾಕ್ಕೆ .52 ಸಾವಿರ ಕೊಟಿ ಮನ್ನಾ ಮಾಡಿ ಯಶಸ್ವಿಯಾದಂತೆ ಇದನ್ನೂ ಮಾಡಲಾಗುವುದು. ಹಣದ ದುರ್ಬಳಕೆ ತಡೆದು, ಬೊಕ್ಕಸಕ್ಕೆ ನಷ್ಠವಾಗದಂತೆ ಸಂಪನ್ಮೂಲ ಕ್ರೋಢಿಕರಿಸಲು ವಿತ್ತ ಸಚಿವರಾಗಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ ಎಂದರು.
ಹಳೇ ಮೈಸೂರು ಭಾಗವನ್ನು ಹೊರತು ಪಡಿಸಿದರೆ ಜೆಡಿಎಸ್‌ಗೆ ಜನಬೆಂಬಲವಿಲ್ಲ ಎಂದು ವಿರೊಧಿಗಳು ಹೇಳುತ್ತಿದ್ದಾರೆ. ಉತ್ತರ ಕರ್ನಾಟಕದ ಸಾಕಷ್ಟುಕ್ಷೇತ್ರಗಳಲ್ಲಿ ಜೆಡಿಎಸ್ ದ್ವಿತೀಯ ಸ್ಥಾನದಲ್ಲಿರುವುದನ್ನು ಇವರು ಮರೆತಿದ್ದಾರೆ ಎಂದರು.
ಜಿಲ್ಲೆಯಲ್ಲಿ ಅಭಿವೃದ್ಧಿ ಮತ್ತು ಮೀಸಲಾತಿಯಲ್ಲಿ ಜನರಿಗೆ ಅನ್ಯಾಯವಾಗಿದೆ. ಈ ಅನ್ಯಾಯ ಸರಿಪಡಿಸಲು ಮುಂದಿನ ಸರ್ಕಾರ ರಚನೆಯಲ್ಲಿ ಜಿಲ್ಲೆಯ ಪಾಲು ಇರಲಿದೆ ಎಂದರು.
ಪ್ರಜಾಪ್ರಭುತ್ವದ ಮೌಲ್ಯ, ರಾಷ್ಟ್ರಹಿತಕ್ಕಾಗಿ ಬಿಜೆಪಿ ಕಾರ್ಯ ಮಾಡುತ್ತಿದೆ: ಸಚಿವ ಶಿವರಾಮ್ ಹೆಬ್ಬಾರ್
ಸುದ್ದಿಗೋಷ್ಠಿಯಲ್ಲಿ ರಾಜ್ಯ ಹಿರಿಯ ಉಪಾಧ್ಯಕ್ಷ ಎಂ. ಗಂಗಣ್ಣ, ಜಿಲ್ಲಾ ಪ್ರಭಾರಿ ಅಧ್ಯಕ್ಷ ಮುನಾಫ್ ಮಿರ್ಜಾನಕರ್, ಪ್ರಮುಖರಾದ ಸದಾಶಿವ ನಾಯ್ಕ, ತುಕಾರಾಮ ಗುಡಿಕರ್, ಸಯ್ಯದ ಮಜೀದ್, ಅಜರ್ ಶೇಖ, ಇಸಾಕ ಗುಡ್ನಾನ್ನವರ್, ಮುತ್ತಣ್ಣ ಸಂಗೂರಮಠ ಮುಂತಾದವರಿದ್ದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.