ಬೆಂಗಳೂರು, (ಅ.02): ರಾಜರಾಜೇಶ್ವರಿ ನಗರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಮೂರು ಪಕ್ಷಗಳು ಅಂತಿಮ ಕಸರತ್ತಿನಲ್ಲಿ ತೊಡಗಿದೆ

"

ಸದ್ಯ ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಗಡಿ ಬಾಲಕೃಷ್ಣ ಹೆಸರು ಚರ್ಚೆಯಾಗುತ್ತಿದೆ.  ಬಿಜೆಪಿ ಈಗಾಗಲೇ ಮುನಿರತ್ನ ತುಳಸಿ ಮುನಿರಾಜು ಎರಡು ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್ ಗೆ ಕಳುಹಿಸಿದೆ. ಇನ್ನು ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ಸಹ ಮೂವರು ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿದೆ.

ಇಂದು (ಶುಕ್ರವಾರ) ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆ ಅಂತ್ಯವಾಗಿದ್ದು, ಈ ಸಭೆಯಲ್ಲಿ ಪ್ರಮುಖ ಮೂವರನ್ನ ಪಟ್ಟಿಯನ್ನು ಫೈನಲ್ ಮಾಡಿದೆ. ಈ ಬಗ್ಗೆ ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ ಮಾಹಿತಿ ನೀಡಿದ್ದಾರೆ.

RR ನಗರಕ್ಕೆ ಡಿ.ಕೆ. ರವಿ ಪತ್ನಿ ಬದಲು ಅಚ್ಚರಿ ಹೆಸ್ರು: ಕುತೂಹಲ ಕೆರಳಿಸಿದ ಹಿರಿಯ ನಾಯಕರ ಸಭೆ

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ, ಪ್ರಾಮಾಣಿಕ ಕಾರ್ಯಕರ್ತರಿಗೆ ಈ ಬಾರಿ ಟಿಕೆಟ್ ಕೊಡಬೇಕು ಅಂತ ತೀರ್ಮಾನವಾಗಿದೆ. ಬೆಂಗಳೂರು ನಗರ ಅಧ್ಯಕ್ಷ ಪ್ರಕಾಶ್, ಆರ್.ಆರ್. ನಗರ ಕ್ಷೇತ್ರದ ಅಧ್ಯಕ್ಷ ಬೆಟ್ಟಸ್ವಾಮಿ ಗೌಡ, ಜ್ಞಾನಭಾರತಿ ಕೃಷ್ಣಮೂರ್ತಿ ಹೆಸರು ಅಂತಿಮವಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಮೂವರ ಹೆಸರಲ್ಲಿ ಒಬ್ಬರನ್ನು ವರಿಷ್ಠ ಫೈನಲ್ ಮಾಡ್ತೀವಿ. ಕಳೆದ ಎರಡು ಚುನಾವಣೆಯಲ್ಲಿ 50-60 ಸಾವಿರಕ್ಕೂ ಹೆಚ್ಚು ಮತ ಜೆಡಿಎಸ್ ಪಡೆದಿತ್ತು. ಎರಡು ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನರು ಭ್ರಮನಿರಸರಾಗಿದ್ದಾರೆ. ಹೀಗಾಗಿ ಈ ಬಾರಿ ಜೆಡಿಎಸ್ ಗೆಲ್ಲುವ ಅವಕಾಶ ಹೆಚ್ಚಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆರ್‌.ಆರ್‌.ನಗರಕ್ಕೆ ಈ ಮೂವರು ಹೆಸರುಗಳನ್ನು ಅಂತಿಮಗೊಳಿಸಿದ್ದು, ಇವರಲ್ಲಿ ಒಬ್ಬರಿಗೆ ಯಾರಿಗೆ ಟಿಕೆಟ್ ಸಿಗುತ್ತೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.