ಬೆಳಗಾವಿ(ನ. 28) ಚುನಾವಣಾ ಪ್ರಚಾರದ ವೇಳೆ ಯಾವ ಊರಿನಲ್ಲಿ ಏನು ಮಾತನಾಡಬೇಕು ಎಂದ ಅಜೆಂಡಾ ರಾಜಕೀಯ ಪಕ್ಷಗಳಿಗೆ ಇರುವುದು ಸರ್ವೇ ಸಾಮಾನ್ಯ.  ಆದರೆ ಈ ವಿಚಾರ ಬಹಿರಂಗವಾಗಿಬಿಟ್ಟರೆ? 

ಜೆಡಿಎಸ್ ಅಂಥ ಮುಜುಗರದ ಸನ್ನಿವೇಶವೊಂದಕ್ಕೆ ಸಿಲುಕಿ ಹಾಕಿಕೊಂಡಿದೆ. ಡಿ.5ರಂದು ಬೆಳಗಾವಿ ಜಿಲ್ಲೆ ಗೋಕಾಕ್ ವಿಧಾನಸಭಾ ಕ್ಷೇತ್ರ ಉಪಚುನಾವಣೆ ನಡೆಯಲಿದೆ.  ಪ್ರಚಾರ ಬಗ್ಗೆ ಮಾಹಿತಿ ನೀಡುವಾಗ ಜೆಡಿಎಸ್ ಕಾರ್ಯಕರ್ತರು ಎಡವಟ್ಟು ಮಾಡಿಕೊಂಡಿದ್ದಾರೆ.

ಯಾವ ಊರಲ್ಲಿ ಏನು ವಿಷಯ ಮಾತನಾಡಬೇಕೆಂಬ ಮಾಹಿತಿಯೂ ಪೋಸ್ಟರ್‌ನಲ್ಲಿ ಹಾಕಿಕೊಂಡಿದ್ದಾರೆ. ಪ್ರಚಾರ ಮಾಡುವ ಊರಿನ ಹೆಸರು, ಸಮಯ ಜೊತೆ ಚುನಾವಣಾ ಅಜೆಂಡಾ‌ ಮಾಹಿತಿಯ ವಿವರಣೆಯನ್ನು ನೀಡಲಾಗಿದೆ.

17 ಶಾಸಕರನ್ನು ಬರಮಾಡಿಕೊಂಡ ಬಿಎಸ್ ವೈಗೆ ಸಂಕಷ್ಟ

'ಕುಟುಂಬ ರಾಜಕೀಯ, ದಬ್ಬಾಳಿಕೆ, ದೌರ್ಜನ್ಯ, ದುರಾಡಳಿತ' 'ಭ್ರಷ್ಟಾಚಾರ, ಜಾತಿ ರಾಜಕೀಯ' ಹೀಗೆ ಯಾವ ವಿಚಾರ ಮಾತನಾಡಬೇಕು ಎಂಬುದನ್ನು ಬರೆಯಲಾಗಿದೆ.

ಕುಟುಂಬ ರಾಜಕೀಯ ಬಗ್ಗೆ ಪ್ರಚಾರ ವೇಳಾಪಟ್ಟಿ ಪೋಸ್ಟರ್‌ನಲ್ಲಿ ಮಾಹಿತಿ ನೀಡಿದ್ದು ಇನ್ನೊಂದು ಕಡೆ ದೇವೇಗೌಡರ ಕುಟುಂಬದ ಪೋಟೋಗಳೇ ರಾರಾಜಿಸುತ್ತಿವೆ.  ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ, ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಪೋಟೋಗಳೆ ಇವೆ.

ಸೋಶಿಯಲ್ ಮೀಡಿಯಾದಲ್ಲಿ ಈ ಪೋಟೋ ಸಖತ್ ವೈರಲ್ ಆಗುತ್ತಿದೆ. ನವೆಂಬರ್ 26ರ ಚುನಾವಣಾ ಪ್ರಚಾರ ವೇಳಾಪಟ್ಟಿಯ ಫೋಟೋ ವೈರಲ್ ಆಗುತ್ತಿದೆ.