ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ಕಗ್ಗಂಟು; ಗೊಂದಲಕ್ಕೆ ತೆರೆ ಎಳೆಯಲು ಫೀಲ್ಡ್‌ಗಿಳಿದ ಎಚ್‌ಡಿ ದೇವೇಗೌಡ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ಕೆಲವು ದಿನಗಳು ಉಳಿದಿವೆ. ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಗೊಂದಲ ವಿಚಾರ ಇನ್ನೂ ಮುಂದುವರಿದಿರುವ ಹಿನ್ನೆಲೆ ಗೊಂದಲ ಪರಿಹಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರೇ ಮುಂದಾಗಿದ್ದಾರೆ. 

JDS Candidate Selection for Hassan Constituency HDD Meeting at bengaluru today rav

..ಹಾಸನ (ಏ.1) : ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ಕೆಲವು ದಿನಗಳು ಉಳಿದಿವೆ. ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಗೊಂದಲ ವಿಚಾರ ಇನ್ನೂ ಮುಂದುವರಿದಿರುವ ಹಿನ್ನೆಲೆ ಗೊಂದಲ ಪರಿಹಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರು(HD Devegowda) ಮುಂದಾಗಿದ್ದಾರೆ. 

ಜೆಡಿಎಸ್(JDS) ಪಕ್ಷದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದರೆ ಹಾಸನ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಕಗ್ಗಂಟು ಆಗಿಯೇ ಉಳಿದಿದೆ. ಇದೀಗ ಟಿಕೆಟ್ ಕುರಿತು ಗೊಂದಲ ಪರಿಹಾರಕ್ಕೆ ಸ್ವತಃ ದೇವೇಗೌಡರು ಹಾಸನ ಕ್ಷೇತ್ರದ ಮುಖಂಡರ ಸಭೆ ಕರೆ ಕರೆದಿದ್ದಾರೆ.

ಗೌಡರ ಕುಟುಂಬದಲ್ಲಿ ಬಿರುಗಾಳಿ..ಸಿಂ'ಹಾಸನ' ಕೈ ತಪ್ಪಿದ್ರೆ ರೆಬೆಲ್ ಆಗ್ತಾರಾ ಭವಾನಿ..?

ಬೆಂಗಳೂರಿನ ತಮ್ಮ ನಿವಾಸದಲ್ಲಿ ಜೆಡಿಎಸ್ ಮುಖಂಡರನ್ನು ಕರೆಯಿಸಿ ಸಭೆ  ನಡೆಸುತ್ತಿರುವ ದೇವೇಗೌಡರು ಟಿಕೆಟ್ ಆಯ್ಕೆ ವಿಚಾರವಾಗಿ ಎಲ್ಲ ಗೊಂದಲಗಳಿಗೆ ಪರಿಹಾರ ಹುಡುಕುತ್ತಿದ್ದಾರೆ, ಈ ಸಭೆಯಲ್ಲಿ ಹಾಸನ ಕ್ಷೇತ್ರದ ನಗರ ಮತ್ತು ಗ್ರಾಮಾಂತರ ಭಾಗದ ನಾಯಕರು ಭಾಗಿಯಾಗಿದ್ದಾರೆ. ಸಭೆಯಲ್ಲಿ ಯಾರಿಗೆ ಟಿಕೆಟ್ ನೀಡಿದ್ರೆ ಚುನಾವಣೆಯಲ್ಲಿ ಗೆಲುವು ಸಾಧ್ಯ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.ಸೂಕ್ತ ಅಭ್ಯರ್ಥಿಯನ್ನು ಗುರುತಿಸಿ ಕಣಕ್ಕಿಳಿಸುವ ಬಗ್ಗೆ ಮುಖಂಡರ ಅಭಿಪ್ರಾಯ ಪಡೆದಿರುವ ದೇವೇಗೌಡರು.

ಭವಾನಿ ರೇವಣ್ಣ, ಸ್ವರೂಪ ಮಧ್ಯೆ ಟಿಕೆಟ್ ಗಾಗಿ ನಡೆಯುತ್ತಿರುವ ಬಿಗ್ ಫೈಟ್. ಟಿಕೆಟ್ ಫೈಟ್ ಕಾರಣಕ್ಕೆ ಕ್ಷೇತ್ರ ಕಳೆದುಕೊಳ್ಳುವ ಆತಂಕದಲ್ಲಿರುವ ಜೆಡಿಎಸ್ ನಾಯಕರು. ಸಮಸ್ಯೆ ಪರಿಹಾರಕ್ಕೆ ದೇವೆಗೌಡರ ಮೊರೆ ಹೋಗಿರುವ ಹಾಸನ ಕ್ಷೇತ್ರದ ನಿಷ್ಠಾವಂತ ಮುಖಂಡರು. ಹೀಗಾಗಿ ಇಂದು ಸ್ವತಃ ಮುಂದಾಗಿ ಹಾಸನ ಜೆಡಿಎಸ್ ಮುಖಂಡರುನ್ನು ಕರೆಯಿಸಿ ಸಭೆ ನಡೆಸುತ್ತಿರುವ ಎಚ್‌ಡಿ ದೇವೇಗೌಡರು. 

ನಾನು ಹೇಳಿದವರಿಗೆ ಹಾಸನ ಟಿಕೆಟ್‌: ರೇವಣ್ಣ ಬಿಗಿಪಟ್ಟು..!

Latest Videos
Follow Us:
Download App:
  • android
  • ios