ರಾಮನಗರದಲ್ಲಿನ ಗಲಾಟೆಗೆ ಜೆಡಿಎಸ್-ಬಿಜೆಪಿ ಕಾರಣ: ಡಿ.ಕೆ.ಶಿವಕುಮಾರ್

ನಾನೂ ಕೂಡ ಹೇಳಿದ್ದೆ. ಶಾಸಕರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದಿದ್ದರು. ಈ ಬಗ್ಗೆ ತನಿಖೆ ಮಾಡಿ ತಪ್ಪಿದ್ದರೆ ಕ್ರಮ ತಗೊಳ್ಳಿ ಎಂದು ನಾವು ಅಧಿಕಾರಿಗಳಿಗೆ ಹೇಳಿದ್ದೆವು. ಇಲ್ಲಿ ಯಾರಿಗೂ ಅನ್ಯಾಯ ಆಗಬಾರದು ಅಂತ ಹೇಳಿದ್ದೆ. ಅದರಂತೆ ಗೃಹ ಸಚಿವ ಪರಮೇಶ್ವರ್ ರವರು ಕಾನೂನು ಪ್ರಕಾರ ಪಿಎಸ್ಸೈನನ್ನು ಅಮಾನತ್ತು ಮಾಡಿದ್ದಾರೆ ಎಂದ ಡಿ.ಕೆ. ಶಿವಕುಮಾರ್ 
 

JDS BJP was Responsible for Clash in Ramanagara Says DCM DK Shivakumar grg

ಕನಕಪುರ/ರಾಮನಗರ(ಫೆ.22): ರಾಮನಗರದಲ್ಲಿ ಗಲಾಟೆ ಮಾಡಿಸುತ್ತಿರುವುದೇ ಜೆಡಿಎಸ್ ನಾಯಕ ಕುಮಾರಸ್ವಾಮಿ ಮತ್ತು ಬಿಜೆಪಿಯವರು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿ (ರಾಮನಗರದಲ್ಲಿ) ನಡೆಯುತ್ತಿರುವ ಎಲ್ಲಾ ಗಲಾಟೆಗಳಿಗೆ ಕುಮಾರಸ್ವಾಮಿ ಅವರೇ ನೇರ ಕಾರಣ. ಅವರ ಜೊತೆಗೆ ಬಿಜೆಪಿಯವರು ಸೇರಿಕೊಂಡಿದ್ದಾರೆ ಎಂದು ರಾಮನಗರದಲ್ಲಿ ಡಿಕೆ ಸಹೋದರರಿಂದ ಅಶಾಂತಿ ಸೃಷ್ಟಿ ಎಂಬ ಜೆಡಿಎಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.

ಪಿಎಸ್ಐ ಸಸ್ಪೆಂಡ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ನಾನೂ ಕೂಡ ಹೇಳಿದ್ದೆ. ಶಾಸಕರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದಿದ್ದರು. ಈ ಬಗ್ಗೆ ತನಿಖೆ ಮಾಡಿ ತಪ್ಪಿದ್ದರೆ ಕ್ರಮ ತಗೊಳ್ಳಿ ಎಂದು ನಾವು ಅಧಿಕಾರಿಗಳಿಗೆ ಹೇಳಿದ್ದೆವು. ಇಲ್ಲಿ ಯಾರಿಗೂ ಅನ್ಯಾಯ ಆಗಬಾರದು ಅಂತ ಹೇಳಿದ್ದೆ. ಅದರಂತೆ ಗೃಹ ಸಚಿವ ಪರಮೇಶ್ವರ್ ರವರು ಕಾನೂನು ಪ್ರಕಾರ ಪಿಎಸ್ಸೈನನ್ನು ಅಮಾನತ್ತು ಮಾಡಿದ್ದಾರೆ ಎಂದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಎಚ್‌ಡಿಕೆ ಸ್ಪರ್ಧೆ ಮಾಡಲ್ವಾ?: ಶಾಸಕ ಬಾಲಕೃಷ್ಣ

ಬಿಜೆಪಿ ಮತ್ತು ಜೆಡಿಎಸ್ ನವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಬಿಜೆಪಿಯವರಿಗೆ ಅಶಾಂತಿ ಮೂಡಿಸುವುದೇ ಕೆಲಸ. ಅವರೊಂದಿಗೆ ಈಗ ಜೆಡಿಎಸ್ ನವರು ಸೇರಿಕೊಂಡಿದ್ದಾರೆ. ಕಮ್ಯೂನಲ್ ವಿಷಯ ತೆಗೆದುಕೊಂಡು ಗಲಾಟೆ ಹಬ್ಬಿಸುತ್ತಾರೆ. ಮೊನ್ನೆ ಎಂಎಲ್ ಎ ಮುಸ್ಲಿಂ, ಸಬ್ ಇನ್ಸ್ ಪೆಕ್ಟರ್ ಮುಸ್ಲಿಂ ಅಂತ ಹೇಳಿದ್ದಾರೆ. ಅವರಿಗೆಲ್ಲ ಮುಸ್ಲಿಂರನ್ನು ಕಂಡರೆ ಆಗುವುದಿಲ್ಲ. ವಿಧಾನಸೌಧಕ್ಕೆ ಯಾರೂ ಮುಸ್ಲಿಂರು ಬರಬಾರದೆಂದು ಬಿಜೆಪಿ ನಾಯಕರೇ ಹೇಳಿದ್ದರಲ್ಲ. ಅವರೆಲ್ಲರು ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿಯವರು ನಮ್ಮನ್ನು ಕಟ್ಟಿಹಾಕಲಿ ನೋಡೋಣ:

ಲೋಕಸಭಾ ಚುನಾವಣೆಗೆ ತಯಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಕಳೆದ ಚುನಾವಣೆ ಮುಗಿದ ಮರುದಿನದಿಂದಲೇ ಕೆಲಸ ಆರಂಭಿಸಿದ್ದೇವೆ. ನಮ್ಮನ್ನು ಕಟ್ಟಿ ಹಾಕುತ್ತೇವೆ ಎನ್ನುತ್ತಿದ್ದಾರಲ್ಲ, ಕಟ್ಟಿಹಾಕಲಿ ನೋಡೋಣ ಎಂದು ಸವಾಲು ಹಾಕಿದರು.

ನನ್ನನ್ನು ಜೈಲಿಗೆ ಕಳುಹಿಸಲು ಷಡ್ಯಂತ್ರ ನಡೀತಿದೆ: ಡಿಕೆಶಿ

ಹಿರಿಯ ವಕೀಲ ಫಾಲಿ ನಾರಿಮನ್ ನಿಧನಕ್ಕೆ ಡಿಕೆಶಿ ಸಂತಾಪ

ರಾಮನಗರ: ಸುಪ್ರೀಂ ಕೋರ್ಟ್ ಹಿರಿಯ ವಕೀಲ ಫಾಲಿ ನಾರಿಮನ್ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಸುಪ್ರೀಂ ಕೋರ್ಟ್ ಖ್ಯಾತ ವಕೀಲರಾದ ಫಾಲಿ ನಾರಿಮನ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬೇಸರವಾಗಿದೆ. ಕಾವೇರಿ ನೀರು ಕುರಿತ ಕರ್ನಾಟಕದ ಕಾನೂನು ಹೋರಾಟದಲ್ಲಿ ನಾರಿಮನ್ ಅವರ ಕೊಡುಗೆ ಅಪಾರ.

ಕಾನೂನು ಕ್ಷೇತ್ರದಲ್ಲಿ ನಾರಿಮನ್ ಅವರು ಒಂದು ದಂತಕತೆ. ಅವರ ನಿಧನದಿಂದ ದೇಶದ ಕಾನೂನು ಕ್ಷೇತ್ರದಲ್ಲಿ ಮಹಾನ್ ಪ್ರತಿಭೆಯ ಯುಗಾಂತ್ಯವಾಗಿದೆ. ನಾರಿಮನ್ ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಅವರ ಕುಟುಂಬ ವರ್ಗಕ್ಕೆ ನೋವು ಭರಿಸುವ ಶಕ್ತಿಯನ್ನು ನೀಡಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios