Asianet Suvarna News Asianet Suvarna News

ಅಭಿವೃದ್ಧಿ ಕಾರ್ಯ ಮೆಚ್ಚಿ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆ

ಮಾಜಿ ಶಾಸಕರಾದ ಅಶೋಕ ಖೇಣಿ ಅವರ ಅಭಿವೃದ್ಧಿ ಕಾರ್ಯಮೆಚ್ಚಿ ಜೆಡಿಎಸ್‌, ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ 

JDS and BJP Activists Join Congress in Bidar grg
Author
First Published Dec 9, 2022, 11:00 PM IST

ಬೀದರ್‌(ಡಿ.09):  ಬೀದರ್‌ ದಕ್ಷಿಣ ಕ್ಷೇತ್ರದ ಸಿರ್ಸಿ (ಎ) ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಸದಸ್ಯರು, ಮುಖಂಡರು, ಕ್ಷೇತ್ರದ ಮಾಜಿ ಶಾಸಕರಾದ ಅಶೋಕ ಖೇಣಿ ಅವರ ಅಭಿವೃದ್ಧಿ ಕಾರ್ಯಮೆಚ್ಚಿ ಜೆಡಿಎಸ್‌, ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಮಾಜಿ ಶಾಸಕ ಅಶೋಕ ಖೇಣಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಚಂದ್ರಶೇಖರ ಚನಶೆಟ್ಟಿ, ಕರೀಮಸಾಬ ಕಮಠಾಣ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.

ಗ್ರಾ.ಪಂ ಸದಸ್ಯ ರವಿಕುಮಾರ್‌ ನಾಗನಕೇರಾ ಮಾತನಾಡಿ, ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 2231 ಕೋಟಿ ರು. ವೆಚ್ಚದಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಅವರಿಗೆ ನಮ್ಮ ಬೆಂಬಲ ನೀಡಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ಮತ್ತಷ್ಟು ಅಭಿವೃದ್ಧಿ ನೋಡೋಣ ಎಂದು ಹೇಳಿದರು.

GROUND REPORT: ಬೀದರ್ ಕುರುಕ್ಷೇತ್ರ: ಹಾಲಿ ಶಾಸಕರಿಗೆ ಹೊಸ ಸ್ಪರ್ಧಿಗಳೇ ಸವಾಲ್

ಗ್ರಾಮ ಪಂಚಾಯತ ಅಧ್ಯಕ್ಷ ರಮೇಶ ಖಾಶೆಂಪೂರ, ಸದಸ್ಯರಾದ ರಾಕೇಶ್‌ ಹುಮನಾಬಾದೆ, ಪಿಕೆಪಿಸ್‌ ಸದಸ್ಯ ಮಲ್ಲಿಕಾರ್ಜುನ ಎಳ್ಳಿ, ಮುಖಂಡರಾದ ಜಗನಾಥ ನಿಂಬೂರೆ, ಮಹೇಬೂಬ್‌ ಖುರೇಷಿ, ನೀಲಕಂಠ ಸ್ವಾಮಿ, ಅಜಿಮೊದ್ದಿನ್‌, ವಾಸುದೇವ ಕೋಲಿ ಸೇರಿದಂತೆ ಅನೇಕರು ಸೇರ್ಪಡೆಯಾದರು. ಗ್ರಾಮದ ಯುವ ಮುಖಂಡರಾದ ಅಡ್ಡೆಪ್ಪಾ ಶೇರಿಕಾರ, ಶರಣು ಸಿದ್ದಾ, ಎಸ್‌ಟಿ ಘಟಕದ ಅಧ್ಯಕ್ಷÜ ಸೂಯ ರ್‍ಕಾಂತ ಸಿಂದೋಲ, ಕಿಸಾನ್‌ ಸೇಲ್‌ ಅಧ್ಯಕ್ಷ ಸಂತೋಷÜ ಪಾಟೀಲ, ಉದಯಕುಮಾರ್‌ ಮಲಶೆಟ್ಟಿ, ಅಮೃತರಾವ ಪಾಟೀಲ, ಮೈನಾರಿಟಿ ಘಟಕದ ಉಪಾಧ್ಯಕ್ಷರಾದ ಖುದ್ದೂಸ್‌ ನಾಗನಕೇರಾ, ಮುಖಂಡರಾದ ವೀರಪ್ಪಾ ಅಡ್ಡೆ ಸೇರಿದಂತೆ ಅನೇಕರು ಹಾಜರಿದ್ದರು.
 

Follow Us:
Download App:
  • android
  • ios