ಲೋಕಸಭಾ ಚುನಾವಣೆ 2024: ಮಂಡ್ಯದಲ್ಲಿ ಜೆಡಿಎಸ್ ಕಾರಕರ್ತ ನಿಂತೂ ಗೆಲ್ತಾನೆ, ಎಚ್‌ಡಿಕೆ
ಪಕ್ಷಗಳ ಬಿರುಸಿನ ರಾಜಕೀಯ ಬೆಂಗಳೂರಿನಿಂದ ದೆಹಲಿ ತಲುಪಿದೆ. ನಮ್ಮ ಪಕ್ಷದ ಚಟುವಟಿಕೆ ಎರಡು ಪಕ್ಷಕ್ಕೂ ಹೋಲಿಸಿದರೆ ನಾವುಗಳು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದೇವೆ: ಮಾಜಿ ಸಿಎಂ ಎಚ್ .ಡಿ.ಕುಮಾರಸ್ವಾಮಿ
ಚಿಕ್ಕಮಗಳೂರು(ಜ.12): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್ .ಡಿ.ಕುಮಾರಸ್ವಾಮಿ ಅವರೇ ಸ್ಪರ್ಧಿಸಬಹುದು ಎನ್ನುವ ಸುದ್ದಿ ಹಬ್ಬಿರುವ ಬೆನ್ನಲ್ಲೇ, ಈ ಬಗ್ಗೆ ಸ್ವತಃ ಅವರೇ ಪ್ರತಿಕ್ರಿಯಿಸಿದ್ದು, ಮಂಡ್ಯದಿಂದ ಜೆಡಿಎಸ್‌ನ ಸಾಮಾನ್ಯ ಕಾರ್ಯಕರ್ತ ಸ್ಪರ್ಧಿಸಿದರೂ ಗೆಲ್ಲಬಲ್ಲ ಎಂದಿದ್ದಾರೆ.
ಇಲ್ಲಿನ ಖಾಸಗಿ ರೆಸಾರ್ಟ್‌ನಲ್ಲಿ ಮಂಡ್ಯ ಜಿಲ್ಲಾ ಶಾಸಕರು, ಮುಖಂಡರ ಜತೆ ಸಭೆ ನಡೆಸುತ್ತಿರುವ ಕುಮಾ ರಸ್ವಾಮಿ, ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಎಚ್ .ಡಿ.ಕುಮಾರಸ್ವಾಮಿ ಅವರು, ಸಂಕ್ರಾಂತಿ ನಂತರ ಮೈತ್ರಿಯ ಸಿಹಿ ಸುದ್ದಿಗಳು ಶುರುವಾಗಲಿದೆ. 'ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಾಮಾನ್ಯ ಕಾರಕರ್ತ ಸ್ಪರ್ಧಿಸಿದರೂ ಗೆಲ್ಲುವ ಸಾಧ್ಯತೆ ಇದೆ. ಆದರೆ, ಕಳೆದ ಬಾರಿ ಕಾಂಗ್ರೆಸ್ ನಮಗೆ ಕೇವಲ 2-3 ಪರ್ಸೆಂಟ್ ಮಾತ್ರ ಸಹಕಾರ ನೀಡಿತ್ತು ಎಂದು ಆರೋಪಿಸಿದರು. ಮಂಡ್ಯದಲ್ಲಿ ತಮ್ಮ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೈತ್ರಿ ನಂತರ ಪರಿಸ್ಥಿತಿ ಏನಾಗುತ್ತೋ ನೋಡೋಣ ಎಂದರು.
ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡ್ತಿದೆ ಕಾಂಗ್ರೆಸ್: ಕುಮಾರಸ್ವಾಮಿ
ಸುಮಲತಾ ಸ್ಪರ್ಧೆ ಬಗ್ಗೆ ಕೇಳಿದಾಗ, ಬಿಜೆಪಿ ಜೊತೆಗಿನ ಹೊಂದಾಣಿಕೆ ಮುಗಿದ ಮೇಲೆ ಚರ್ಚೆ, ತೀರ್ಮಾನ ಆಗಲಿದೆ ಎಂದು ಉತ್ತರಿಸಿದರು. ಪಕ್ಷದ ನಾಯಕರ ಸಭೆಯಲ್ಲಿ ಮಂಡ್ಯ ಅಷ್ಟೇ ಅಲ್ಲ, ರಾಜ್ಯ ಹಾಗೂ ಎಲ್ಲಾ ಜಿಲ್ಲೆಗಳ ಬಗ್ಗೆಯೂ ಚರ್ಚೆ ಆಗಿದೆ. ಎರಡೂ ರಾಜಕೀಯ ಪಕ್ಷಗಳ ಬಿರುಸಿನ ರಾಜಕೀಯ ಬೆಂಗಳೂರಿನಿಂದ ದೆಹಲಿ ತಲುಪಿದೆ. ನಮ್ಮ ಪಕ್ಷದ ಚಟುವಟಿಕೆ ಎರಡು ಪಕ್ಷಕ್ಕೂ ಹೋಲಿಸಿದರೆ ನಾವುಗಳು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದರು.
ಮೈತ್ರಿಯಲ್ಲಿ ನಮ್ಮದು ಎಷ್ಟು ಸ್ಥಾನ, ನಮ್ಮ ಅಭ್ಯರ್ಥಿಗಳ ವಿಶ್ವಾಸ ಅವರು ಹೇಗೆ ಪಡೆಯಬೇಕು, ನಾವು ಅವರ ವಿಶ್ವಾಸ ಹೇಗೆ ಪಡೆಯಬೇಕು ಎಂಬ ಎಲ್ಲಾ ಚರ್ಚೆ ಆಗಿದೆ. ಮಂಡ್ಯ, ಮೈಸೂರು ಹಾಗೂ ಹಾಸನದ ಬಗ್ಗೆಯೂ ಚರ್ಚೆ ಆಗಿದೆ. ಮೈತ್ರಿಗೆ ಇಮೇಜ್ ಇದೆ. ಮೋದಿ ಇಮೇಜ್ ಇದೆ, ರಾಮ ಮಂದಿರ ಉದ್ಘಾಟನೆ ಮುಂಚೂಣಿಯಲ್ಲಿದೆ. ದೇಶದ ಜನರಿಗೆ ಸ್ಥಿರ ಸರ್ಕಾರ ಬರಬೇಕೆಂಬ ಆಶಯವಿದೆ. ಎರಡೂ ಪಕ್ಷಕ್ಕೂ ನಮ್ಮ ಶಕ್ತಿ ಏನೆಂದು ಗೊತ್ತಿದೆ ಎಂದು ಹೇಳಿದರು.