ದಾವಣಗೆರೆ, (ಜ.29): ಪಂಚಮಸಾಲಿ ಸಮಾಜದ ಶಾಸಕರುಗಳು ನೀವು ರಾಜೀನಾಮೆ ಕೊಡಬೇಡಿ, ಮುಖ್ಯಮಂತ್ರಿಗಳೇ ರಾಜೀನಾಮೆ ನೀಡುವಂತೆ ಒತ್ತಡಹಾಕಿ ಎಂದು ಜಯಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ.

ಹರಿಹರದಲ್ಲಿ ನಡೆದ ಪಂಚಮಸಾಲಿ ಸಮುದಾಯದ ಪಾದಯಾತ್ರೆ ಸಮಾವೇಶದ ಬಹಿರಂಗ ಸಭೆಯಲ್ಲಿ ಮಾತನಾಡಿದ ಜಯಮೃತ್ಯುಂಜಯ ಶ್ರೀಗಳು, ನೀವು ರಾಜೀನಾಮೆ ಕೊಟ್ಟರೆ ಪ್ರಯೋಜನವಿಲ್ಲ. ನೀವು ನಮ್ಮ ಸಮಾಜದಿಂದ ಗೆದ್ದಿದ್ದೀರ, ರಾಜೀನಾಮೆ ಕೊಡಬೇಡಿ, ನಮ್ಮ ಬೇಡಿಕೆಯನ್ನ ಈಡೇರಿಸದ ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ತಾವೇ ರಾಜೀನಾಮೆ ಕೊಡಬೇಕು ಎಂದು ಹೇಳಿದರು.

ಮೀಸಲಾತಿಗಾಗಿ ರಾಜ್ಯದಲ್ಲೊಂದು ಬೃಹತ್ ಪಾದಯಾತ್ರೆ: ಪಂಚಲಕ್ಷ ನಡೆ ವಿಧಾನಸೌಧದ ಕಡೆ

ಪಂಚಮಸಾಲಿಯವರೇ ಸಿಎಂ ಆದ್ರೂ 2ಎ ಹೋರಾಟ ನಿಲ್ಲೋದಿಲ್ಲ. ಬಿಎಸ್​ವೈ ನಮ್ಮ ಬೇಡಿಕೆ ಈಡೇರಿಸಿಲ್ಲ, ಏನಾದರೂ ಕೇಂದ್ರದವರು ಬಿಎಸ್​ವೈ ರಾಜೀನಾಮೆ ಪಡೆದರೆ, ಉತ್ತರ ಕರ್ನಾಟಕದವರೇ ಸಿಎಂ ಆಗಬೇಕು. ಅದರಲ್ಲೂ ಲಿಂಗಾಯತರಿಗೆ ನೀಡುವಂತೆ ಹೇಳುತ್ತೇನೆ. ನಮ್ಮ ಸಮಾಜದಲ್ಲಿ 15 ಶಾಸಕರು ಸಿಎಂ ಆಗುವ ಅರ್ಹತೆ ಹೊಂದಿದ್ದಾರೆ ಎಂದರು.