ದೆಹಲಿಯಲ್ಲಿ ಬೀಡುಬಿಟ್ಟ ಜಾರಕಿಹೊಳಿ ಬ್ರದರ್ಸ್: ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡ

* ನವದೆಹಲಿಯಲ್ಲಿ ಬೀಡುಬಿಟ್ಟ ಜಾರಕಿಹೊಳಿ ಬ್ರದರ್ಸ್
* ಸಚಿವ ಸ್ಥಾನಕ್ಕೆ ಇನ್ನಿಲ್ಲದ ಕಸರತ್ತು
* ಕರ್ನಾಟಕ ಭವನದಲ್ಲಿ ಸಿಎಂ ಭೇಟಿ
 

Jarkiholi Brothers Lobbying for Minister Post at Delhi rbj

ನವದೆಹಲಿ, (ಆ.25): ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ವಿಸ್ತರಣೆಯಾಗಿದ್ದು, ಇನ್ನೂ ಮೂರು ಸ್ಥಾನಗಳು ಬಾಕಿ ಉಳಿದಿವೆ. ಅವುಗಳಿಗೆ ಇದೀಗ ಭರ್ಜರಿ ಲಾಬಿ ನಡೆದಿವೆ.

ಹೌದು...ಉಳಿದಿರುವ ಮೂರು ಸಚಿವ ಸ್ಥಾನಗಳಲ್ಲಿ ಒಂದಾದರೂ ಪಡೆಯಬೇಕೆಂದು ಜಾರಕಿಹೊಳಿ ಬ್ರದರ್ಸ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. 

ಜೆಡಿಎಸ್ ತೊರೆದು ಕಾಂಗ್ರೆಸ್‌ನತ್ತ ಚಿತ್ತ: ಅಧಿಕೃತ ಘೋಷಣೆ ಮಾಡಿದ ಶಾಸಕ

 ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಜೊತೆಗೆ ಶ್ರೀಮಂತ ಪಾಟೀಲ್ ಹಾಗೂ ಮಹೇಶ್ ಕುಮಟಹಳ್ಳಿ ಜತೆ ಜಾರಕಿಹೊಳಿ ಸಹೋದರರು ದೆಹಲಿಗೆ ಆಗಮಿಸಿದ್ದಾರೆ. 
 
ಇಂದು (ಆ.25) ದೆಹಲಿಗೆ ಸಿಎಂ ಬಸವರಾಜ ಬೊಮ್ಮಾಯಿ ಬಂದಿಳಿಯುತ್ತಿದ್ದಂತೆಯೇ  ಕರ್ನಾಟಕ ಭವನದಲ್ಲಿ ಜಾರಕಿಹೊಳಿ ಸಹೋದರರು ಭೇಟಿ ಮಾಡಿ ಸಚಿವ ಸ್ಥಾನದ ಬಗ್ಗೆ ಮಾತುಕತೆ ನಡೆಸಿದರು.

ಇನ್ನು ಸಿಎಂ ಭೇಟಿಗೂ ಮೊದಲು ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ,  ಸಿಎಂ ಬಂದಿದ್ದಾರೆಂದು ಗೊತ್ತಾಯ್ತು. ಹಾಗಾಗಿ, ಭೇಟಿಗೆ ಆಗಮಿಸಿದ್ದೇವೆ. ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ರಮೇಶ್ ಜಾರಕಿಹೊಳಿ​ಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡುತ್ತೇವೆ ಎಂದರು.

ಎಲ್ಲವೂ ಶಾಂತವಾಯ್ತು ಬೊಮ್ಮಾಯಿ ಸರ್ಕಾರವನ್ನು ಚೆನ್ನಾಗಿ ನಡೆಸಿಕೊಂಡು ಹೋಗಬೇಕೆನ್ನುವಷ್ಟರಲ್ಲಿಯೇ ಜಾರಕಿಹೊಳಿ ಬ್ರದರ್ಸ್ , ಸಚಿವ ಸ್ಥಾನಕ್ಕೆ ನಡೆಸುತ್ತಿರುವ ಕಸರತ್ತು ನೋಡಿದ್ರೆ, ಬಿಜೆಪಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದೆ. 

Latest Videos
Follow Us:
Download App:
  • android
  • ios