Asianet Suvarna News Asianet Suvarna News

 ಪ್ರಧಾನಿ ಕಚೇರಿಗೆ 'ಟಪಾಲ್', ಮತ್ತೆ ಜನಾರ್ದನ ರೆಡ್ಡಿಗೆ ಸಂಕಷ್ಟ?

* ಮತ್ತೆ ಜನಾರ್ದನ ರೆಡ್ಡಿಗೆ ಸಂಕಷ್ಟ?
* ಪ್ರಧಾನಿ ಕಚೇರಿಗೆ ಪತ್ರ ಬರೆದಿರೋ ಟಪಾಲ್ ಗಣೇಶ್
* ಮತ್ತೊಮ್ಮೆ ಸರ್ವೇ ಮಾಡಲು ಮುಂದಾಗುತ್ತದೆಯೇ ಸರ್ಕಾರ?

Janardhana Reddy In Trouble For tapal ganesh Complaint PM Office  Over mining rbj
Author
Bengaluru, First Published Jun 8, 2022, 10:48 PM IST

ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ, (ಜೂನ್.08): ಅಕ್ರಮ ಗಣಿಗಾರಿಕೆ ವೇಳೆ ಕರ್ನಾಟಕ-ಆಂಧ್ರಪ್ರದೇಶ ಗಡಿ ವಿವಾದ ಇದೀಗ ಪ್ರಧಾನ ಮಂತ್ರಿ ಕಚೇರಿ ಮೆಟ್ಟಿಲು ಹತ್ತುವ ಮೂಲಕ ಪುನಃ ಮುನ್ನೆಲೆಗೆ ಬಂದಿದೆ. ಹೀಗಾಗಿ ಇಷ್ಟು ದಿನ ತಣ್ಣಗಿದ್ದ ಗಣಿ ಗಡಿ ವಿವಿಧ ಈಗ ಮತ್ತೆ ಜೋರಾಗಿ ಸದ್ದು ಮಾಡುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ.

ಇದು ಸದ್ಯ ಬಳ್ಳಾರಿಯಲ್ಲಿ ನಲೆಸಿರುವ ಗಾಲಿ ಜನಾರ್ದನ ರೆಡ್ಡಿ ಮತ್ತೊಮ್ಮೆ ಸಂಕಷ್ಟ ಎದುರಾಗುತ್ತೆ ಎನ್ನಲಾಗ್ತಿದೆ..ಹೌದು, ಗಣಿ ಗಡಿ ವಿವಾದದ ಹಿನ್ನೆಲೆ ಉದ್ದಿಮೆ ಟಪಾಲ್ ಗಣೇಶ್ ಆರೋಪ ನಿಜವಾದರೆ ರೆಡ್ಡಿಗೆ ಮತ್ತೆ ಸಂಕಷ್ಟ...? ತಪ್ಪಿದ್ದಲ್ಲ  ಎನ್ನಲಾಗುತ್ತಿದೆ.
 
ಪ್ರಧಾನಿ ಕಚೇರಿಗೆ ದೂರು ನೀಡಿರೋ ಟಪಾಲ್
 ಹೌದು, ಅಕ್ರಮ ಗಣಿಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಹತ್ತು ವರ್ಷಗಳಿಂದ ಆಂಧ್ರ ಮತ್ತು ಕರ್ನಾಟಕದ ಮಧ್ಯೆ ಇರೋ ಓಬಳಾಪುರಂ ಮೈನಿಂಗ್ ವಿವಾದ ನಿರಂತರವಾಗಿ ತನಿಖೆ ನಡೆಯುತ್ತಿಲೇ ಬಂದಿದೆ. ಇದೀಗ ಅಂತಿಮ ಹಂತದ ವರದಿಯನ್ನು ಸರ್ವೇ ಆಫ್ ಇಂಡಿಯಾ ಮಾಡಿಕೊಂಡಿದೆ. ಆದ್ರೇ, ಈಗಾಗಲೇ ಸರ್ವೇ ಆಫ್‌ ಇಂಡಿಯಾದವರು ನಡೆಸಿರುವ ಗಡಿ ಗುರುತು ಕಾರ್ಯಕ್ಕೆ ಗಣಿ ಉದ್ಯಮಿ ಟಪಾಲ್‌ ಗಣೇಶ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಒಂದ್ಕಾಲದಲ್ಲಿ ಬಿಜೆಪಿಯಲ್ಲಿ ಮೆರೆದ್ರೂ ಈಗ ಕೇಳೋರೇ ಇಲ್ಲ: ಕಂಗಾಲಾದ ಗಣಿಧಣಿ ಜನಾರ್ದನ ರೆಡ್ಡಿ..!

ಕರ್ನಾಟಕ ಆಂಧ್ರ ಮತ್ತು ಸರ್ವೇ ಆಫ್ ಇಂಡಿಯಾ ಅಧಿಕಾರಿಗಳು ನಡೆಸಿದ ಜಂಟಿ ಸರ್ವೇ ಸರಿಯಾಗಿಲ್ಲ ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ಪ್ರಧಾನಿ ಕಚೇರಿಗೆ ದೂರು ನೀಡಿದ್ದಾರೆ. ಸದ್ಯ ದೂರು ಆಲಿಸಿರುವ ಪ್ರಧಾನ ಮಂತ್ರಿ ಕಚೇರಿ.. ಪರಿಶೀಲಿಸಿ ಕ್ರಮ ವಹಿಸುವಂತೆ ಬಳ್ಳಾರಿ ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯ ಉಪಸಂರಕ್ಷಣಾ ಧಿಕಾರಿಗಳಿಗೆ ಸೂಚನೆ ನೀಡಿದೆ.
 
ಗಡಿ ರೇಖೆಯನ್ನು ತಪ್ಪಾಗಿ ಗುರುತಿಸಿದ್ದಾರೆ.
 ಇನ್ನೂ  ಸರ್ವೇ ಆಫ್ ಇಂಡಿಯಾ  ಅಧಿಕಾರಿಗಳು ಪೂರಕ ದಾಖಲೆ ಇಲ್ಲದೇ, ಆಂಧ್ರ- ಕರ್ನಾಟಕ ಗಡಿ ರೇಖೆ ತಪ್ಪಾಗಿ ಗುರುತಿಸಿದ್ದಾರೆ ಎನ್ನುವುದು ಟಪಾಲ್ ಗಣೇಶ್ ಆರೋಪವಾಗಿದೆ.  ಕಾಂಟೂರ್‌ ಮೆಥಡಾಲಜಿಯನ್ನು ಅನುಸರಿಸದೇ ಕಾಲ್ಪನಿಕ‌ ನಕ್ಷೆ ಇಟ್ಟುಕೊಂಡು ಸರ್ವೆ ಮಾಡಿದ್ದಾರೆ. ಹೀಗಾಗಿ  ಈ ಸರ್ವೇಯಿಂದ ತಮ್ಮ ಗಣಿ ಪ್ರದೇಶಕ್ಕಷ್ಟೇ ಅಲ್ಲದೇ ಕರ್ನಾಟಕದ ಗಡಿಕೂಡ ಒತ್ತುವರಿ ಮಾಡಿದಂತಾಗುತ್ತದೆ ಎನ್ನುವುದು ಗಣೇಶ್ ಅವರ ವಾದವಾಗಿದೆ.
 
ಜನಾರ್ದನ ರೆಡ್ಡಿಗೆ ಸಂಕಷ್ಟ ?
 ಹೌದು, ಆಂಧ್ರ ಮತ್ತು ಕರ್ನಾಟಕ ಗಡಿಯಲ್ಲಿರೋ ಎಎಂಸಿ ಮತ್ತು ಓಎಂಸಿ ಮೈನಿಂಗ್ ಕಂಪನಿಗಳು ಗಡಿಗೆ ಹೊಂದಿಕೊಂಡಂತೆ ಇದೆ. ಈ ಇದೇ ವ್ಯಾಪ್ತಿಯಲ್ಲಿ  ಉದ್ಯಮಿ ಟಪಾಲ್ ಗಣೇಶ್ ಅವರಿಗೆ ಸೇರಿದ ಮೈನಿಂಗ್ ಪ್ರದೇಶವಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಈ ಪ್ರದೇಶದಲ್ಲಿ ಎಗ್ಗಿಲ್ಲದೆ ಅಕ್ರಮ ಗಣಿಗಾರಿಕೆ ಮಾಡೋ ಮೂಲಕ ಅತ್ತ ಆಂಧ್ರದಲ್ಲಿ ಇತ್ತ ಕರ್ನಾಕದಲ್ಲಿ ರಾಯಲ್ಟಿ ಸೇರಿದಂತೆ ಯಾವುದೇ ರೀತಿಯ ರಾಜಧನವನ್ನು ನೀಡದೇ ಅಕ್ರಮವಾಗಿ ಜನಾರ್ದಾನ ರೆಡ್ಡಿ ಅವರು ಅಕ್ರಮ ಗಣಿಗಾರಿಕೆ ಮಾಡಿದ್ರು. 

ಇದರಿಂದ ಕೋಟಿಗಟ್ಟಲೇ ಹಣವನ್ನು ಕೊಳ್ಳೆ ಹೊಡೆದು ಮೂರು ವರ್ಷಗಳ ಕಾಲ ಜೈಲುವಾಸವನ್ನು ಅನುಭಿಸಿದ್ರು. ಆದ್ರೇ, ಇದೀಗ ಮತ್ತೊಮ್ಮೆ ಗಡಿ ಗುರುತನ್ನು ನಾಶ ಮಾಡಿದ ಪ್ರಕರಣ ಸಾಭಿತಾದ್ರೇ, ಮತ್ತೊಮ್ಮೆ ಗಣಿ ಧಣಿ ಜನಾರ್ಧನ ರೆಡ್ಡಿಗೆ ಸಂಕಷ್ಟ ತಪ್ಪಿದ್ದಲ್ಲ ಎನ್ನಲಾಗುತ್ತಿದೆ. ಹೀಗಾಗಿ ಸರ್ವೇಯೂ ಜನಾರ್ದನ ರೆಡ್ಡಿ ಸಂರಕ್ಷಣೆ ಮಾಡೋ ರೀತಿಯಲ್ಲಿ ಸರ್ವೇ ಮಾಡುತ್ತಿದ್ದಾರೆಂದು ಟಪಾಲ್ ಆರೋಪಿಸಿದ್ದಾರೆ.  
 

Follow Us:
Download App:
  • android
  • ios