ರಾಯರ ಸನ್ನಿಧಿಯಲ್ಲಿ ಜನಾರ್ದನ ರೆಡ್ಡಿ, ರಾಜಕೀಯ ಪ್ರವೇಶ ಮಾಡುವ ಬಗ್ಗೆ ಹೇಳಿದ್ದಿಷ್ಟು
* ಮಂತ್ರಾಲಯಕ್ಕೆ ಭೇಟಿ ನೀಡಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ
* ಮಂತ್ರಾಲಯದ ಶ್ರೀ ಗುರುರಾಘವೇಂದ್ರ ರಾಯರ ದರ್ಶನ ಪಡೆದ ರೆಡ್ಡಿ
* 350ನೇ ಆರಾಧ ನಿಮಿತ್ತ ವಿಶೇಷ ಪೂಜೆ
ರಾಯಚೂರು, (ಆ.23): ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಇಂದು (ಆ.24) ಮಂತ್ರಾಲಯದ ಶ್ರೀ ಗುರುರಾಘವೇಂದ್ರ ರಾಯರ ದರ್ಶನ ಪಡೆದಿದ್ದಾರೆ. ಪತ್ನಿ ಅರುಣಾಲಕ್ಷ್ಮೀ ಜತೆ ಭೇಟಿ ನೀಡಿದ ರೆಡ್ಡಿ, 350ನೇ ಆರಾಧ ನಿಮಿತ್ತ ವಿಶೇಷ ಪೂಜೆ ಸಲ್ಲಿದರು.
ಬಳಿಕ ಸುದ್ದಿಗಾರರಿಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ, ರಾಯರ ಆರಾಧನೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲ. ಕಳೆದ 10 ವರ್ಷಗಳ ಕಾಲ ನನ್ನ ಹುಟ್ಟೂರಿಗೆ ಬರಲಾಗದೇ ವನವಾಸದ ರೀತಿಯ ಸಂಕಷ್ಟ ಅನುಭವಿಸಿದ್ದೆ. ಅದರಿಂದ ಪಾರು ಮಾಡಿದ್ದು ಶ್ರೀ ರಾಘವೇಂದ್ರಸ್ವಾಮಿಗಳ ಪವಾಡ ಎಂದರು.
ಒಂದು ಆದೇಶ, 10 ವರ್ಷ ನಂತ್ರ ಕುಟುಂಬ ಸದಸ್ಯರ ಜತೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ಗಣಿ ಧಣಿ
ನಾನು ಮಂತ್ರಾಲಯದ ರಾಯರ ಪರಮ ಭಕ್ತ. ಯಾವಾಗಲೂ ಸಂಕಷ್ಟದ ಘಳಿಗೆಯಲ್ಲಿ ರಾಘವೇಂದ್ರ ಸ್ವಾಮಿಗಳನ್ನು ಪ್ರಾರ್ಥಿಸುತ್ತೇನೆ. ರಾಯರ ಅನುಗ್ರಹದಿಂದಲೇ ಇಂದು 350ನೇ ಆರಾಧನೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದೆ ಎಂದು ಹೇಳಿದರು.
ಇನ್ನು ಇದೇ ವೇಳೆ ರಾಜಕೀಯಕ್ಕೆ ಪ್ರವೇಶ ಮಾಡುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜಕೀಯ ವಿಚಾರದ ಬಗ್ಗೆ ಮಾತಾಡಲ್ಲ. ಸಕ್ರಿಯ ರಾಜಕೀಯಕ್ಕೆ ಮರಳುವ ಬಗ್ಗೆಯೂ ಏನೂ ಹೇಳಲ್ಲ ಎಂದು ಯಾವುದೇ ಗುಟ್ಟು ಬಿಟ್ಟುಕೊಡಲಿಲ್ಲ.
ಮೊನ್ನೇ ಅಷ್ಟೇ ಅವರಿಗೆ ತವರು ಬಳ್ಳಾರಿಗೆ ಹೋಗಲು ಸುಪ್ರೀಂ ಕೋರ್ಟ್ ಅನುಮತಿ ಕೊಟ್ಟಿತ್ತು. ಅದಂತೆ ಜನಾರ್ದನ ರೆಡ್ಡಿ ಬಳ್ಳಾರಿ ನಿವಾಸದಲ್ಲಿ ಕುಟಂಬ ಸದಸ್ಯರ ಜೊತೆ ವರಮಹಾಲಕ್ಷ್ಮೀ ಹಬ್ಬ ಆಚರಿಸಿದ್ದರು.