ಹೊಸ ಪಕ್ಷದಿಂದ ಜನಾರ್ದನ ರೆಡ್ಡಿಗೆ ನಷ್ಟ, ಬಿಜೆಪಿಗಲ್ಲ: ಎಂ.ಪಿ.ರೇಣುಕಾಚಾರ್ಯ
ಮಾಜಿ ಸಚಿವ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಕ್ಷ ಘೋಷಣೆ ಮಾಡಿದ್ದು, ಇದರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ, ಜನಾರ್ದನ ರೆಡ್ಡಿ ಅವರಿಗೆ ನಷ್ಟಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ (ಡಿ.26) : ಮಾಜಿ ಸಚಿವ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಕ್ಷ ಘೋಷಣೆ ಮಾಡಿದ್ದು, ಇದರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ, ಜನಾರ್ದನ ರೆಡ್ಡಿ ಅವರಿಗೆ ನಷ್ಟಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಜನಾರ್ದನ ರೆಡ್ಡಿಯವರಿಗೆ ಎಲ್ಲವನ್ನೂ ನೀಡಿದೆ, ಜನಾರ್ದನ ರೆಡ್ಡಿ ಆತ್ಮವಲೋಕನ ಮಾಡಿಕೊಳ್ಳಲಿ, ಬಿಜೆಪಿಯಲ್ಲಿ ಇದ್ದರೇ ಅವರಿಗೆ ಶಕ್ತಿ ಬರುತ್ತೇ ಅದನ್ನು ಬಿಟ್ಟು ಹೊಸ ಪಕ್ಷ ಕಟ್ಟುವುದರಿಂದ ಅವರ ವರ್ಚಸ್ಸಿಗೆ ಧÜಕ್ಕೆಯಾಗಲಿದೆ ಎಂದರು.
ಗ್ರಾಮ ವಾಸ್ತವ್ಯ ಮೋಜು ಮಸ್ತಿಗಾಗಿ ಮಾಡುತ್ತಿಲ್ಲ: ಶಾಸಕ ರೇಣುಕಾಚಾರ್ಯ
ಕರ್ನಾಟಕದಲ್ಲಿ ಬಿಜೆಪಿ ಸದೃಢವಾಗಿದ್ದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ ಅವರು ಒಳ್ಳೆಯ ಕೆಲಸ ಮಾಡಿದ್ದು 2023ರಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು. ಇಂತಹ ನೂರು ಜನರು ಪಾರ್ಟಿ ಕಟ್ಟಿದರೂ ಬಿಜೆಪಿ ಸೋಲಿಸಲು ಸಾಧ್ಯವಿಲ್ಲ ಎಂದ ರೇಣುಕಾಚಾರ್ಯ, ಇಂತಹ ಬ್ಲಾಕ್ ಮೇಲ್‌ಗಳಿಗೆಲ್ಲಾ ಜಗ್ಗಲ್ಲಾ, ಬಗ್ಗಲ್ಲಾ, ಜನಾರ್ದನ ರೆಡ್ಡಿಯವರು ಭ್ರಮಾಲೋಕದಲ್ಲಿದ್ದು, ಹಗಲು ಗನಸು ಕಾಣುತ್ತಿದ್ದಾರೆಂದರು.
ಜನಾರ್ದನ ರೆಡ್ಡಿ ಅವರನ್ನು ಬಂಧಿಸಿದ್ದು ಸಿಬಿಐನವರು, ಸಿಬಿಐಗೆ ಕೊಟ್ಟಿದ್ದು ಕಾಂಗ್ರೆಸ್ ಮುಖಂಡರು, ಇದೆಲ್ಲಾ ಕಾಂಗ್ರೆಸ್‌ನ ಷಡ್ಯಂತ್ರ ಎಂದ ರೇಣುಕಾಚಾರ್ಯ ಜನಾರ್ದನ ರೆಡ್ಡಿ ಅವರಲ್ಲಿ ನಾನು ಮನವಿ ಮಾಡುತ್ತೇನೆ, ನೀವು ಆರೋಪ ಮುಕ್ತರಾಗಿ ಬಂದು ಕಾರ್ಯಕರ್ತರಾಗಿ ಪಕ್ಷ ಸಂಘಟನೆ ಕೆಲಸ ಮಾಡಿ ಎಂದರು.