ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿ ನಿಸ್ಸಂದೇಹವಾಗಿ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. 

ವರದಿ: ಪವನ್ ಕುಮಾರ್ ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ 

ಹಾವೇರಿ (ಮೇ.31): ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿ ನಿಸ್ಸಂದೇಹವಾಗಿ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಚುನಾವಣೆ ಹಿನ್ನಲೆ ಇಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರಚಾರ ನಡೆಸಿದರು. ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಪರ ಸಚಿವ ಬಿ‌ಸಿ ಪಾಟೀಲ್, ಶಾಸಕ ಓಲೆಕಾರ್, ಮಾಜಿ ಸಚಿವ ಆರ್ ಶಂಕರ್, ಯು.ಬಿ ಬಣಕಾರ್ ಕೂಡಾ ಪ್ರಚಾರ ನಡೆಸಿದರು. 

ಬಳಿಕ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಜಂಟಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶೆಟ್ಟರ್, ಬಿಜೆಪಿಯಿಂದ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರ ಇಟ್ಟುಕೊಂಡಿದ್ದೇವೆ. ಬಸವರಾಜ ಹೊರಟ್ಟಿಯವರ ಪರವಾಗಿ ಪ್ರಚಾರಕ್ಕೆ ಚಾಲನೆ ನೀಡಿದ್ದೇವೆ‌.ಬೆಳೆಗ್ಗೆ ಗದಗ ಜಿಲ್ಲೆಯಲ್ಲಿ ಸಮಾವೇಶ ಮಾಡಿದೆವು. ನಾಳೆ ಕಾರವಾರ ಜಿಲ್ಲೆಯ ಶಿರಸಿ, ಅಂಕೋಲಾದಲ್ಲೂ ಸಭೆ ನಡೆಸುತ್ತೇವೆ. ಬಸವರಾಜ ಹೊರಟ್ಟಿಯವರಿಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಹಿಂದೆ ಅವರು ಜೆಡಿಎಸ್‌ನಲ್ಲಿದ್ದಾಗ ನಮಗೆ ನೇರ ಸ್ಪರ್ಧೆ ಕೊಡ್ತಾ ಇದ್ರು.

ಹಾವೇರಿ ಗ್ರಾಮೀಣ ಭಾಗದಲ್ಲಿ ಡೀಸೆಲ್‌ಗೆ ಹಾಹಾಕಾರ, ಬಿತ್ತನೆ ಹುರುಪಿನಲ್ಲಿದ್ದ ರೈತರಿಗೆ ಆತಂಕ

ಈಗ ಹೊರಟ್ಟಿಯವರೇ ಬಿಜೆಪಿಯಿಂದ ಸ್ಪರ್ದೆ ಮಾಡುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ನಗಣ್ಯವಾಗಿತ್ತು,‌ಇವತ್ತೂ ನಗಣ್ಯವೇ. ಹೆಚ್ಚಿನ ಮತಗಳಿಂದ ಹೊರಟ್ಟಿ ಗೆದ್ದು ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಶಿಕ್ಷಕರ ಪರವಾಗಿ ನಿರಂತರ ಹೋರಾಟ ಮಾಡುತ್ತಾ ಬಂದವರು ಹೊರಟ್ಟಿ. ಹೋರಾಟದ ಹೊರಟ್ಟಿಯವರು ಎಂದೇ ಅವರು ಹೆಸರು ಮಾಡಿದ್ದಾರೆ.ಏಷ್ಯಾ ಖಂಡದಲ್ಲೇ ಹೊರಟ್ಟಿ ದಾಖಲೆ ಮಾಡಿದ್ದಾರೆ. ಸತತ 7 ಬಾರಿ ಗೆದ್ದು ಈಗ 8 ನೇ ಬಾರಿ ಸ್ಪರ್ದೆ ಮಾಡುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೊರಟ್ಟಿಯವರನ್ನು ಹಾಡಿ ಹೊಗಳಿದರು.

ಕಾಂಗ್ರೆಸ್‌ಗೆ ಮೋದಿ ಸಾಧನೆ ಸಹಿಸೋಕೆ ಆಗುತ್ತಿಲ್ಲ: ಒಬ್ಬೊಬ್ರೆ ಪಾರ್ಟಿ ಬಿಟ್ಟು ಹೋಗ್ತಾ ಇದ್ದಾರೆ. ಕಬಿಲ್ ಸಿಬಲ್ ಕೂಡಾ ಕಾಂಗ್ರೆಸ್ ಬಿಟ್ಟು ಸಮಾಜವಾದಿ ಪಾರ್ಟಿ ಸೇರಿದರು. ಕಾಂಗ್ರೆಸ್‌ನಲ್ಲಿ ಒಂದು ಯುನಿಟಿ ಇಲ್ಲ. ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣಗಳ ನಡುವಿನ ಫೈಟ್‌ನಿಂದ ಕಾಂಗ್ರೆಸ್ ನಿರ್ನಾಮ ಆಗಲಿದೆ. ಕಾಂಗ್ರೆಸ್‌ನಲ್ಲಿ ಪಂಜಾಬ್ ನಲ್ಲೊಬ್ಬ ಸಿದ್ದು, ಇಲ್ಲೊಬ್ಬ ಸಿದ್ದು ಇದ್ದಾರೆ. ಪಂಜಾಬ್ ಸಿದ್ದು ಜೈಲಿಗೆ ಹೋಗಿದ್ದಾರೆ. ಕಾಂಗ್ರೆಸ್‌ನನವರು ಆರ್‌ಎಸ್‌ಎಸ್ ಬಗ್ಗೆ ಮಾತಾಡಿ ಅಲ್ಪ ಸಂಖ್ಯಾತರ ತುಷ್ಟೀಕರಣ ಮಾಡ್ತಿದ್ದಾರೆ ಎಂದರು.

ಟಿಕೆಟ್ ಸಿಗದ ಹಿನ್ನಲೆ: ಮಾಜಿ ಎಂ.ಎಲ್.ಸಿ ಮೋಹನ್ ಲಿಂಬಿಕಾಯಿ ಮೌನ ವಹಿಸಿರೋ ವಿಚಾರವಾಗಿ ಮಾತನಾಡಿದ ಶೆಟ್ಟರ್,‌ ಪಕ್ಷದ ವ್ಯವಸ್ಥೆಯಲ್ಲಿ ಹೈಕಮಾಂಡ್ ನಿರ್ಧರಿಸಿ ಟಿಕೆಟ್ ನೀಡಿದೆ. ಹೊರಟ್ಟಿ ಅಭ್ಯರ್ಥಿ ಅಂತ ಘೋಷಣೆ ಮಾಡಿದಾರೆ. ಹೊರಟ್ಟಿ ನಮ್ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ನಾವು ಅವರನ್ನು ವಿಶ್ವಾಸ ಇಟ್ಟು ಪಕ್ಷಕ್ಕೆ ಕರೆದುಕೊಂಡಿದ್ದೇವೆ ಎಂದರು.

ಶಿಕ್ಷಣದ ಬಗ್ಗೆ ಕಾಂಗ್ರೆಸ್ ನವರಿಗೆ ಒಂದು ನಯಾಪೈಸೆನೂ ಗೊತ್ತಿಲ್ಲ: ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆಯಲ್ಲಿ ತಾವು ಭರ್ಜರಿ ಗೆಲುವು ಸಾಧಿಸೋದಾಗಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು. ಇಂದು ಚುನಾವಣೆ ಪ್ರಚಾರಕ್ಕಾಗಿ ಹಾವೇರಿ ನಗರದಕ್ಕೆ ಆಗಮಿಸಿದ್ದ ಬಸವರಾಜ ಹೊರಟ್ಟಿ, ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

ಎಲ್ಲಾ ಕಡೆ ನನ್ನ ಬಗ್ಗೆ ಬಹಳ ಪ್ರೀತಿ ಇಟ್ಟುಕೊಂಡಿದ್ದಾರೆ. ಶಿಕ್ಷಕರು ತಾವೇ ಸ್ಪರ್ಧೆ ಮಾಡಿದ್ದೇವೆ ಅಂತ ಓಡಾಡ್ತಿದ್ದಾರೆ. ಕಾಂಗ್ರೆಸ್‌ನವರು ಅಲ್ಲಲ್ಲಿ ಒಂದಿಬ್ರನ ಕರೆದುಕೊಂಡು ಓಡಾಡ್ತಿದ್ದಾರೆ ಅಷ್ಟೆ. ಈಗ ನನ್ನದು ಪಕ್ಷ ಅಷ್ಟೆ ಬದಲಾಗಿದೆ ಅಷ್ಟೆ. ಕಾಂಗ್ರೆಸ್ ನವರು ನನ್ನ ಸಿದ್ದಾಂತದ ಬಗ್ಗೆ ಮಾತಾಡುವ ಮೊದಲು ಅವರ ಸಿದ್ದಾಂತ ಮೊದಲು ಹೇಳಲಿ. ಈಗ ಮೌಲ್ಯಾಧಾರಿತ ರಾಜಕಾರಣ ಬಿಟ್ಟು ಬಿಡಿ.‌ಆ ಬಗ್ಗೆ ಮಾತನಾಡುವ‌ ನೈತಿಕತೆ ಯಾರಿಗೂ ಇಲ್ಲ. ಕಾಂಗ್ರೆಸ್ ಕಾರ್ಯಾದ್ಯಕ್ಷ ಸಲೀಂ ಅಹ್ಮದ್ ಮಾತಿಗೆ ಗರಂ ಆದ ಹೊರಟ್ಟಿ, ಸಲೀಂ ಅಹ್ಮದ್ ಚುನಾವಣೆ ಹೇಗೆ ಗೆದ್ದು ಬಂದಿದಾರೆ ಕೇಳಿ ನೋಡಿ.

KGF-2 ಪ್ರದರ್ಶನ ವೇಳೆ ಗುಂಡಿನ ದಾಳಿ: ಪಿಸ್ತೂಲ್ ಸಪ್ಲೈ ಮಾಡಿದ್ದ ಬಿಹಾರದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ನಾನು ಹೇಳ್ತೀನಿ. ಶಿಕ್ಷಕರು, ಕಾರ್ಯಕರ್ತರು ಬಿಜೆಪಿಗೆ ಬನ್ನಿ ಅಂತ ಹೇಳಿದರು. ನಾನು ಚರ್ಚೆ ಮಾಡಿ ಬಿಜೆಪಿಗೆ ಬಂದಿದ್ದೇನೆ. ಈಗ ಯಾರೂ ಸಿದ್ದಾಂತ ಮತ್ತು ತತ್ವದ ಬಗ್ಗೆ ಮಾತಾಡಬಾರದು. ಆರು ವರ್ಷಕ್ಕೆ ಎಷ್ಟು ಕೆಲಸ ಮಾಡಿದಿನಿ ಅಂತ ಪುಸ್ತಕ ಮಾಡಿದಿನಿ. ಇಲ್ಲಿ ಶಿಕ್ಷಕರು ಕಾಂಗ್ರೆಸ್ ಗೆ ಓಟ್ ಹಾಕಲ್ಲ. ಕಾಂಗ್ರೆಸ್ ನವರು ಎಂದೂ ಇಲ್ಲಿ ಶಿಕ್ಷರರ ಪರ ಕೆಲಸ ಮಾಡಲ್ಲ. ಇಷ್ಟು ದಿನಗಳಲ್ಲಿ ಒಂದ್ ಸಲನೂ ಕಾಂಗ್ರೆಸ್ ನವರು ಗೆದ್ದು ಬಂದಿಲ್ಲ. ಸಲೀಂಗೆ ಶಿಕ್ಷಕರ ಬಗ್ಗೆ ಏನು ಗೊತ್ತಿದೆ? ಎಂದು ಪ್ರಶ್ನೆ ಮಾಡಿದರು.