ಕಾಂಗ್ರೆಸ್‌ನಲ್ಲಿ ಪಕ್ಷ ನಿಷ್ಠೆ ಇಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸೋನಿಯಾ ಗಾಂಧಿಗೆ ಅವರದೇ ಮತ್ತೊಂದು ಗುಂಪು ಪತ್ರ ಬರೆದು ದೂರುಕೊಟ್ಟಿದೆ.
ಹುಬ್ಬಳ್ಳಿ (ಸೆ.06): ಕಾಂಗ್ರೆಸ್‌ನಲ್ಲಿ ಪಕ್ಷ ನಿಷ್ಠೆ ಇಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಸೋನಿಯಾ ಗಾಂಧಿಗೆ ಅವರದೇ ಮತ್ತೊಂದು ಗುಂಪು ಪತ್ರ ಬರೆದು ದೂರುಕೊಟ್ಟಿದೆ. ಇದು ಅಧಿಕಾರಕ್ಕಾಗಿ ನಡೆಯುತ್ತಿರೋ ಹೋರಾಟದ ಮತ್ತೊಂದು ತಂತ್ರವಾಗಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ಉದ್ದೇಶಿಸಿರುವುದು ಮೂರ್ಖತನದ ಪರಮಾವಧಿ. ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್‌ಗೆ ಗೊತ್ತಾಗಿದೆ. ಹೀಗಾಗಿ ಗೂಂಡಾಗಿರಿ ಮೂಲಕ ಗೆಲ್ಲಲು ಹವಣಿಸುತ್ತಿದೆ. ತಮ್ಮ ನಾಯಕ ರಾಹುಲ್ ಗಾಂಧಿಯನ್ನು ಮೆಚ್ಚಿಸುವ ಉದ್ದೇಶದಿಂದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ. ಮತಯಂತ್ರಗಳು ಸರಿಯಿಲ್ಲದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಹೇಗೆ 136 ಸ್ಥಾನ ಗೆಲ್ಲುತ್ತಿತ್ತು ಎಂದು ಕಿಡಿಕಾರಿದರು.
ಶರಣರ ತತ್ವದಿಂದ ಜೀವನ ಸಾರ್ಥಕ: ಕಾಯಕವೇ ಕೈಲಾಸ ಎಂಬ ತತ್ವ ಸಿದ್ಧಾಂತವನ್ನು ಸಮಾಜಕ್ಕೆ ಸಾರಿ ಕ್ರಾಂತಿಯನ್ನು ಸೃಷ್ಟಿಸಿದವರು ಬಸವಣ್ಣನವರು. ಅವರ ತತ್ವಗಳನ್ನು ಪಾಲಿಸಿದರೆ ಜೀವನ ಸಾರ್ಥಕತೆ ಹೊಂದಲು ಸಾಧ್ಯವೆಂದು ತಿಳಿಸಿದರು. ಪಟ್ಟಣದ ಲಲಾಟೇಶ್ವರ ಮಂಗಲ ಭವನದಲ್ಲಿ ಭಾನುವಾರ ಜರುಗಿದ ತಾಲೂಕು ಬಣಜಿಗ ಸಮಾಜದ ತೃತೀಯ ಸಮಾವೇಶ ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸುವ ಕೆಲಸ ಉತ್ತಮವಾಗಿದ್ದು, ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನಾರ್ಜನೆಯನ್ನು ಪಡೆದು ತಂದೆ- ತಾಯಿಗಳನ್ನು ಮತ್ತು ಸಮಾಜಕ್ಕೆ ಕೊಡುಗೆಯನ್ನು ನೀಡುವ ವ್ಯಕ್ತಿಗಳಾಗಿ ಹೊರಹೊಮ್ಮಬೇಕು. ಸಮಾಜದ ಏಳ್ಗೆಗಾಗಿ ನನ್ನ ಅಳಿಲುಸೇವೆಯನ್ನು ನೀಡುತ್ತೇನೆ ಎಂದರು. ಬಣಜಿಗ ಸಮಾಜದ ಜನಗಣತಿ ಕೈಪಿಡಿ ಪುಸ್ತಕವನ್ನು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಬಿಡುಗಡೆ ಮಾಡಿ ಮಾತನಾಡಿ, ಯಾವ ವ್ಯಕ್ತಿ ವಿಭೂತಿಯನ್ನು ಧರಿಸಿ ಲಿಂಗದಾರಣೆಯನ್ನು ಮಾಡಿಕೊಂಡು ಭಕ್ತಿಯಿಂದ ಪೂಜಿಸುತ್ತಾನೋ ಅವನು ಲಿಂಗಾಯತ ಎನ್ನುವಂತದ್ದು ಅಂದಿನ ಕಾಲದಲ್ಲಿತ್ತು.
ಆದರೆ, ಇಂದಿನ ರಾಜಕೀಯ ಹಿತಾಸಕ್ತಿಗೆ ಉಪಜಾತಿಗಳು ಹುಟ್ಟಿಕೊಂಡಿದೆ. ಇವೆಲ್ಲವನ್ನು ಮರೆತು ವೀರಶೈವ ಲಿಂಗಾಯತ ಒಂದೇ ಎನ್ನುವಂತ ಮನೋಭಾವನೆ ಬಂದಾಗ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದರು.ಸಾನ್ನಿಧ್ಯವನ್ನು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಶಾಸಕ ಯಾಸೀರ್‌ಅಹ್ಮದ ಖಾನ್ ಪಠಾಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚನ್ನಬಸಪ್ಪ ಅಂಗಡಿ ವಹಿಸಿದ್ದರು.
