Asianet Suvarna News Asianet Suvarna News

Election Result: ಗೆದ್ದ ಗಂಡ-ಹೆಂಡ್ತಿ, ಅಕ್ಕ-ತಂಗಿ, ಅತ್ತೆಯನ್ನು ಸೋಲಿಸಿದ ಸೊಸೆ, ಇಲ್ಲಿವೆ ಅಚ್ಚರಿ ರಿಸಲ್ಟ್

* ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಪ್ರಕಟ
* ಈ ಬಾರಿಯ ಅಚ್ಚರಿ ಫಲಿತಾಂಶಗಳು
* ಗೆದ್ದ ಗಂಡ-ಹೆಂಡ್ತಿ, ಅಕ್ಕ-ತಂಗಿ, ಅತ್ತೆಯನ್ನು ಸೋಲಿಸಿದ ಸೊಸೆ

It is all a family affair check Karnataka local body election results 2021 rbj
Author
Bengaluru, First Published Dec 30, 2021, 5:26 PM IST
  • Facebook
  • Twitter
  • Whatsapp

ಬೆಂಗಳೂರು, (ಡಿ.30): ಕುತೂಹಲ ಕೆರಳಿಸಿದ್ದ 5 ನಗರಸಭೆ, 19 ಪುರಸಭೆ ಹಾಗೂ 34 ಪಟ್ಟಣ ಪಂಚಾಯಿತಿಗಳ ಚುನಾವಣೆ ಫಲಿತಾಂಶ ಇಂದು (ಡಿ. 30) ಪ್ರಕಟವಾಗಿದೆ.. 

ಈ ಸ್ಥಳೀಯ ಸಂಸ್ಥೆಯ ಕೆಲವು ಕಡೆ  ಅಚ್ವರಿ ಹಾಗೂ ರಣರೋಚಕ ಈ ಫಲಿತಾಂಶಗಳು(Karnataka Local Body Election Results) ಬಂದಿವೆ. ಗಂಡ-ಹೆಂಡ್ತಿ, ಅಕ್ಕ-ತಂಗಿ ಗೆಲುವು ಸಾಧಿಸಿದ್ರೆ, ಅತ್ತೆಯನ್ನು ಸೊಸೆ ಸೋಲಿಸಿದ್ದಾಳೆ. ಇನ್ನೊಂದು ಕಡೆ ಅಜ್ಜಿ ವಿರುದ್ಧ ಮೊಮ್ಮಗಳು ಗೆದ್ದಿದ್ದಾಳೆ. ಈ ಅಚ್ಚರಿ ಫಲಿತಾಂಶಗಳ ಮಾಹಿತಿ ಈ ಕೆಳಗಿನಂತಿದೆ.

Local Body Poll Result ಕಾಂಗ್ರೆಸ್‌ ಮೇಲುಗೈ, ಸಿಎಂ, ರಾಮುಲು, ಆಚಾರ್, ಸಿಂಗ್, ಜೊಲ್ಲೆಗೆ ಮುಖಭಂಗ

ಗೆದ್ದು ಬೀಗಿದ ಪೆಟ್ರೋಲ್ ಹಾಕುವ ಯುವಕ
ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದಲ್ಲಿ ಅಚ್ಚರಿ ಎಂಬಂತೆ ಯಾದಗಿರಿ ಜಿಲ್ಲೆಯಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕುವ ಯುವಕನೋರ್ವ ಚುನಾವಣೆ ಗೆದ್ದು ಅಚ್ಚರಿ ಮೂಡಿಸಿದ್ದಾರೆ.

ಯಾದಗಿರಿಯಲ್ಲಿ(Yadagiri) ಪೆಟ್ರೋಲ್ ಬಂಕ್‌ನಲ್ಲಿ‌ ಕೆಲಸ ಮಾಡುವ ಯುವಕ ಗೆಲವು ಸಾಧಿಸಿ, ಪುರಸಭೆಗೆ ಪ್ರವೇಶ ಮಾಡಿದ್ದಾನೆ. ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವ ಪರಶುರಾಮ ಕಕ್ಕೇರಾ ಪುರಸಭೆಯ ವಾರ್ಡ್ ನಂಬರ್ 6ರಿಂದ ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿದಿದ್ರು. ಇದೀಗ ಗೆಲುವು ಸಾಧಿಸಿದ್ದು, ಫುಲ್ ಖುಷ್ ಆಗಿದ್ದಾನೆ.

ಅತ್ತೆಯನ್ನು ಸೋಲಿಸಿದ ಸೊಸೆ
ದಾವಣಗೆರೆಯ(Davanagere) ಚನ್ನಗಿರಿ ತಾಲೂಕಿನ ಕರೇಕಟ್ಟೆ ಗ್ರಾಮದ ಗ್ರಾಮ‌ ಪಂಚಾಯಿತಿ ಉಪಚುನಾವಣೆಯಲ್ಲಿ ಸೊಸೆ ವಿರುದ್ಧ ಅತ್ತೆ ಗೆದ್ದ ಪ್ರಸಂಗ ನಡೆದಿದೆ. ಕೆರೆಕಟ್ಟೆ ಗ್ರಾಮ ಪಂಚಾಯತ್ ನಲ್ಲಿ ಒಟ್ಟು 14 ಸ್ಥಾನಗಳಿದ್ದವು. ಈ ಪೈಕಿ ಎರಡನೇ ವಾರ್ಡ್ ನಲ್ಲಿ ಮಹಿಳೆಯೊಬ್ಬರು ತೀರಿಕೊಂಡಿದ್ದರು. ತೆರವಾದ ಸ್ಥಾನಕ್ಕೆ ಅತ್ತೆ ಪಾರ್ವತಮ್ಮ ಮತ್ತು ಸೊಸೆ ಲಕ್ಷ್ಮಮ್ಮ ಇಬ್ಬರೂ ಸ್ಪರ್ಧೆ ಮಾಡಿದ್ದು 91 ಮತಗಳ ಅಂತರದಿಂದ ಅತ್ತೆ ಪಾರ್ವತಮ್ಮ ಗೆಲುವು ಸಾಧಿಸಿದ್ದಾರೆ.

ಗೆಲುವು ಸಾಧಿಸಿದ ಗಂಡ-ಹೆಂಡ್ತಿ 
ಬಾಗಲಕೋಟೆಯಲ್ಲಿ(Bagalakote) ಪತಿ-ಪತ್ನಿ ಇಬ್ಬರೂ ಕಮಾಲ್ ಮಾಡಿದ್ದಾರೆ. ಕಮತಗಿ ಪಟ್ಟಣ ಪಂಚಾಯಿತಿ ಮತ ಎಣಿಕೆಯಲ್ಲಿ ಪತಿ ಪತ್ನಿ ಇಬ್ಬರೂ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂಬರ್ 7ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಪತಿ ದೇವಿ ಪ್ರಸಾದ್ ನಿಂಬಲಗುಂದಿ ಜಯ ಕಂಡಿದ್ದಾರೆ. ಇನ್ನು ವಾರ್ಡ್ ನಂಬರ್ 15ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪತ್ನಿ ನೇತ್ರಾವತಿ ನಿಂಬಲಗುಂದಿ ಕೂಡ ಗೆಲುವಿನ ನಗೆ ಬೀರಿದ್ದು, ಇದರೊಂದಿಗೆ ದಂಪತಿ ಪಟ್ಟಣ ಪಂಚಾಯಿತಿ ಪ್ರವೇಶಿಸಿರುವುದು ವಿಶೇಷ.

ಅಜ್ಜಿ ವಿರುದ್ಧ ಗೆದ್ದ ಮೊಮ್ಮಗಳು
ಶಿರಸಿ ತಾಲೂಕಿನ ಅಂಡಗಿ ಗ್ರಾಮ ಪಂಚಾಯಿತಿಯ ಕಿರವತ್ತಿ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಶಿವಕ್ಕ ಚಂದ್ರಪ್ಪ ಚೆನ್ನಯ್ಯ ವಿರುದ್ಧ 76 ಮತಗಳಿಂದ ಸಂಗೀತಾ ಗಣೇಶ ಚೆನ್ನಯ್ಯ ಗೆಲುವು ಸಾಧಿಸಿದ್ದಾರೆ.  ಸೋತ ಶಿವಕ್ಕ ಗೆದ್ದ ಸಂಗೀತಾರಿಗೆ ಸಂಬಂಧದಲ್ಲಿ ಅಜ್ಜಿಯಾಗಬೇಕು. ಒಂದೇ ಕುಟುಂಬದಿಂದ ಅಜ್ಜಿ ಹಾಗೂ ಮೊಮ್ಮಗಳು ಚುನಾವಣೆಗೆ ನಿಂತಿದ್ದು ಇದೀಗ ಅಜ್ಜಿಯನ್ನು ಸೋಲಿಸಿ, ಮೊಮ್ಮಗಳು ಗೆಲುವಿನ ನಗೆ ಬೀರಿದ್ದಾರೆ.

ಸಹೋದರಿಯರ ಕಮಾಲ್ 
ಇನ್ನು  ನೂತನ ವಿಜಯನಗರ (Vijayanagara) ಜಿಲ್ಲೆಯ ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ಸಹೋದರಿಯರು ಕಮಾಲ್ ಮಾಡಿದ್ದಾರೆ. ನಗರಸಭೆಯ 33, 34ನೇ ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದ ಸಹೋದರಿಯರು ವಿಜಯಪತಾಕೆ ಹಾರಿಸಿದ್ದಾರೆ. ಆದ್ರೆ, ಒಬ್ಬರು ಕಾಂಗ್ರೆಸ್, ಮತ್ತೊಬ್ಬರು ಬಿಜೆಪಿ.  33ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ  ಅಕ್ಕ ಪರಗಂಟಿ ಲಕ್ಷ್ಮಿ, ಇನ್ನು 34ನೇ ವಾರ್ಡ್‌ನಲ್ಲಿ ಬಿಜೆಪಿಯಿಂದ ತಂಗಿ ಲತಾ ಸಂತೋಷ್ ಸ್ಪರ್ಧಿಸಿದ್ರು.

Follow Us:
Download App:
  • android
  • ios