Asianet Suvarna News Asianet Suvarna News

5-6 ಹಾಲಿ ಶಾಸಕರಿಗೆ ಟಿಕೆಟ್‌ ಸಿಗೋಲ್ಲ ಎಂದಿಲ್ಲ: ಬಿ.ಎಸ್‌.ಯಡಿಯೂರಪ್ಪ

ಬಿಜೆಪಿಯಲ್ಲಿ ಟಿಕೆಟ್‌ ವಿಚಾರವಾಗಿ ಚುನಾವಣಾ ಸಮಿತಿ ಏನು ನಿರ್ಧಾರ ಮಾಡಲಿದೆಯೋ ಅದೇ ಅಂತಿಮ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

It has not been said that 5 to 6 sitting MLAs cannot get tickets says bs yediyurappa gvd
Author
First Published Mar 12, 2023, 8:21 AM IST

ಸಿಂಧನೂರು/ಮಸ್ಕಿ (ಮಾ.12): ಬಿಜೆಪಿಯಲ್ಲಿ ಟಿಕೆಟ್‌ ವಿಚಾರವಾಗಿ ಚುನಾವಣಾ ಸಮಿತಿ ಏನು ನಿರ್ಧಾರ ಮಾಡಲಿದೆಯೋ ಅದೇ ಅಂತಿಮ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶೀಘ್ರದಲ್ಲೇ ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್‌ ಶಾ ಸೇರಿ ಚುನಾವಣಾ ಸಮಿತಿಯವರು ಚರ್ಚಿಸಿ ಬಿಡುಗಡೆ ಮಾಡಲಿದ್ದಾರೆ ಎಂದರು. ರಾಜ್ಯದಲ್ಲಿ ಐದಾರು ಹಾಲಿ ಶಾಸಕರಿಗೆ ಟಿಕೆಟ್‌ ನೀಡುವುದಿಲ್ಲ ಎಂದು ನಾನು ಹೇಳಿದ್ದೇನೆಂದು ಕೆಲ ಮಾಧ್ಯಮಗಳಲ್ಲಿ ಪ್ರಕಟವಾಯಿತು. 

ಆದರೆ, ನಾನು ಆ ರೀತಿ ಹೇಳಿಲ್ಲ. ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲು ತೀರ್ಮಾನಿಸಲಾಗಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿದೆ ಎಂದರು. ಇದಕ್ಕೂ ಮಸ್ಕಿ ಹಾಗೂ ಲಿಂಗಸ್ಗೂರು ಪಟ್ಟಣಗಳಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ದಿವಾಳಿ ಹಂತಕ್ಕೆ ತಲುಪಿದೆ. ಇಡೀ ಜಗತ್ತು ಮೋದಿ ಅವರನ್ನು ಕೊಂಡಾಡುತ್ತಿದೆ. ಮೋದಿ, ಅಮಿತ್‌ ಶಾ ನೇತೃತ್ವದಲ್ಲಿ 140 ಕ್ಷೇತ್ರದಲ್ಲಿ ಬಿಜೆಪಿ ಮತ್ತೆ ಸರ್ಕಾರ ಅಸ್ತಿತ್ವಕ್ಕೆ ಬರುವುದು ಶತ ಸಿದ್ಧ ಎಂದು ಹೇಳಿದರು. 

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ನಿರ್ಮಿಸಿದ್ದು ಯಾರೆಂದು ಜನ ನಿರ್ಧರಿಸಲಿ: ಸಿಎಂ ಬೊಮ್ಮಾಯಿ

ದೇಶದಲ್ಲಿ ಅಧಿಕಾರ ನಡೆಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರಗಳ ಯೋಜನೆಗಳು ದೇಶದ ಪ್ರತಿ ಮನೆಯ ಪ್ರಜೆಗೆ ತಲುಪಿಸಲಾಗಿದೆ. ದೇಶದಲ್ಲಿ ದೀನ-ದಲಿತರು, ಬಡವರು, ಮಹಿಳೆಯರ ಅಭಿವೃದ್ಧಿಗೆ ಕೇಂದ್ರ ರಾಜ್ಯ ಸರ್ಕಾರಗಳು ಬದ್ಧತೆಯಿಂದ ಕಾರ್ಯ ಮಾಡುತ್ತಿವೆ. ಕಾಗಿನೆಲೆ 40 ಕೋಟಿ ಹಣ ನೀಡಿ ಅಭಿವೃದ್ಧಿಪಡಿಸಿದ್ದು, ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ನಿರ್ಮಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಪ್ರತಿ ಮನೆಗೂ ಮೋದಿ ಸರ್ಕಾರದ ಸೌಲತ್ತು ತಲುಪಿದೆ: ಶದಲ್ಲಿ ಅಧಿಕಾರ ನಡೆಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರಗಳ ಯೋಜನೆಗಳು ದೇಶದ ಪ್ರತಿ ಮನೆಯ ಪ್ರಜೆಗೆ ತಲುಪಿಸಲಾಗಿದೆ. ಇದು ಬಿಜೆಪಿಗೆ ಇರುವ ಬದ್ಧತೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಪಟ್ಟಣದ ಬೈಪಾಸ್‌ ರಸ್ತೆಯಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ದೀನ-ದಲಿತರು, ಬಡವರು, ಮಹಿಳೆಯರ ಅಭಿವೃದ್ಧಿಗೆ ಕೇಂದ್ರ ರಾಜ್ಯ ಸರ್ಕಾರಗಳು ಬದ್ಧತೆಯಿಂದ ಕಾರ್ಯ ಮಾಡುತ್ತಿವೆ. 

ಇನ್ನೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತ ಮಾತೆಯ ಸೇವೆಯನ್ನು ರಜೆ ಪಡೆಯದೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಪರಿಣಾಮ ದೇಶ ಪ್ರಪಂಚ ಮುಂದುವರೆದ ದೇಶಗಳ ಸಾಲಿನಲ್ಲಿ ಬಂದು ನಿಂತಿದೆ ಎಂದು ಶ್ಲಾಘಿಸಿದರು. ಕಾಗಿನೆಲೆ 40 ಕೋಟಿ ಹಣ ನೀಡಿ ಅಭಿವೃದ್ಧಿ ಪಡಿಸಿದ್ದು, ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ನಿರ್ಮಿಸಲು ಬಿಜೆಪಿಗೆ ಬೆಂಬಲಿಸಬೇಕೆಂದು ಮನವಿ ಮಾಡಿದ ಅವರು ಕಾಗಿನೆಲೆ ಅಭಿವೃದ್ಧಿ ಹೇಳುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯನವರಿಗೆ ಟಾಂಗ್‌ ಕೊಟ್ಟರು. 

ರಾಜ್ಯದ ಮೊದಲ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಇಂದು ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 140ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಕಾಂಗ್ರೆಸ್‌ ಭ್ರಮೆಯಲ್ಲಿ ಇರುವ ಜನರಿಗೆ ತಿಳಿ ಹೇಳಿ ಅವರನ್ನೂ ಬಿಜೆಪಿಗೆ ಕರೆ ತನ್ನಿ, ಕಾಂಗ್ರೆಸ್‌ ಈಗ ಹಣ, ಹೆಂಡ, ತೋಲ್ಬಳ, ಜಾತಿವಿಷ ಬೀಜ ಬಿತ್ತಿ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದು ಅದರ ಕಾರ್ಯತಂತ್ರ ಫಲಿಸದು ಎಂದು ಛೇಡಿಸಿದರು. ಪರಿಶಿಷ್ಟಜಾತಿಗೆ ಮೀಸಲಾದ ಲಿಂಗಸುಗೂರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ನೆರೆದ ಜನರಲ್ಲಿ ಮನವಿ ಮಾಡಿದ ಬಿಎಸ್‌ವೈ ಮಾಜಿ ಶಾಸಕ ಬಿಜೆಪಿ ಆಕಾಂಕ್ಷಿ ಹೆಸರು ಘೋಷಣೆ ಮಾಡದೇ ಇರುವುದು ರಾಜಕೀಯದ ಲೆಕ್ಕಾಚಾರಕ್ಕೆ ಕಾರಣವಾಯಿತು.

Follow Us:
Download App:
  • android
  • ios