ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ನಿರ್ಮಿಸಿದ್ದು ಯಾರೆಂದು ಜನ ನಿರ್ಧರಿಸಲಿ: ಸಿಎಂ ಬೊಮ್ಮಾಯಿ

‘ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ನಿರ್ಮಾಣದ ವಾಸ್ತಾವಂಶಗಳನ್ನು ಜನರ ಮುಂದಿಡಲಾಗುವುದು. ಯಾರು ನಿರ್ಮಿಸಿದರು ಎಂಬುದನ್ನು ಸಾರ್ವಜನಿಕರೇ ತೀರ್ಮಾನಿಸಲಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್‌ಗೆ ಸವಾಲು ಹಾಕಿದ್ದಾರೆ.
 

CM Basavaraj Bommai Outraged Against Congress gvd

ಬೆಂಗಳೂರು (ಮಾ.12): ‘ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ನಿರ್ಮಾಣದ ವಾಸ್ತಾವಂಶಗಳನ್ನು ಜನರ ಮುಂದಿಡಲಾಗುವುದು. ಯಾರು ನಿರ್ಮಿಸಿದರು ಎಂಬುದನ್ನು ಸಾರ್ವಜನಿಕರೇ ತೀರ್ಮಾನಿಸಲಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್‌ಗೆ ಸವಾಲು ಹಾಕಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾಕಷ್ಟುಗೊಂದಲ ಸೃಷ್ಟಿಯಾಗಿವೆ. ವಿರೋಧ ಪಕ್ಷಗಳು ಇದರ ಲಾಭ ಪಡೆಯುವುದಕ್ಕೆ ಮುಂದಾಗಿವೆ. ಹೀಗಾಗಿ, ದಾಖಲೆ ಸಮೇತ ಅಂಕಿ ಅಂಶಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಲಾಗುತ್ತಿದೆ. ಅಂತಿಮವಾಗಿ ಜನರೇ ಯಾರ ಅಧಿಕಾರವಧಿಯಲ್ಲಿ ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಮಾಡಿದರು ಎಂಬುದನ್ನು ತೀರ್ಮಾನಿಸಲಿ’ ಎಂದರು.

ಅಪಾಯದಲ್ಲಿ ಕೃಷ್ಣೆ: ಕೆಮಿಕಲ್‌ ನೀರು ಮಿಶ್ರಣವಾಗಿ ನದಿ ನೀರಾಯ್ತು ವಿಷ!

‘ಬೆಂಗಳೂರು-ಮೈಸೂರು ನಾಲ್ಕು ಪಥದ ಹೆದ್ದಾರಿ ನಿರ್ಮಾಣ ಕಾರ್ಯವು 2004ರಿಂದ 2007ರ ಅವಧಿಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ಪ್ರಾಧಿಕಾರದಿಂದ ಆರಂಭಿಸಲಾಯಿತು. ನಂತರ 2014ರಲ್ಲಿ ಕೇಂದ್ರ ಸರ್ಕಾರವು ಇದನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಿ, ಸಮಗ್ರ ಯೋಜನಾ ವರದಿ ಮತ್ತು ಸಾಧ್ಯತಾ ವರದಿ ಸಿದ್ಧಪಡಿಸುವುದಕ್ಕೆ 2.36 ಕೋಟಿ ರು.ನೀಡಿತು. 2015ರಲ್ಲಿ ಮಂಡ್ಯ ಸೇರಿದಂತೆ ಇತರೆ ಮಾರ್ಗವಾಗಿ ನಿರ್ಮಿಸಬೇಕೆಂದು ಅಂತಿಮಗೊಳಿಸಲಾಯಿತು. 2016ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎ) ಬೆಂಗಳೂರು-ಮೈಸೂರು ಹೆದ್ದಾರಿಯೂ ಹಸ್ತಾಂತರವಾಯಿತು’ ಎಂದರು.

‘ನಂತರ ಟೆಂಡರ್‌ ಪ್ರಕ್ರಿಯೆ ನಡೆಸಲಾಯಿತು. ಮೊದಲ ಹಂತದಲ್ಲಿ ಸಿವಿಲ್‌ ಕಾಮಗಾರಿಗೆ 2,190 ಕೋಟಿ ರು. ಹಾಗೂ ಭೂ ಸ್ವಾಧೀನಕ್ಕೆ 2,036 ಕೋಟಿ ರು. ನೀಡಲಾಯಿತು. ಬಳಿಕ 4,429 ಕೋಟಿ ರು. ವೆಚ್ಚದ ಪರಿಷ್ಕೃತ ಯೋಜನೆ ಸಿದ್ಧಪಡಿಸಲಾಯಿತು. ಹಣ ಬಿಡುಗಡೆಯಾಗಿ 2019ರಲ್ಲಿ ಕಾಮಗಾರಿ ಆರಂಭಿಸಿ 2023ರಲ್ಲಿ ಕಾಮಗಾರಿ ಪೂರ್ಣಗೊಳಿಸಲಾಯಿತು. ಇಡೀ ಯೋಜನೆ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಪ್ರಾರಂಭವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧಿಕಾರವಧಿಯಲ್ಲಿ ಪೂರ್ಣಗೊಂಡಿದೆ’ ಎಂದರು.

ಅಥಣಿ ಬಿಡಲ್ಲ: ರಮೇಶ್‌ ಜಾರಕಿಹೊಳಿಗೆ ಲಕ್ಷ್ಮಣ ಸವದಿ ಪುತ್ರ ತಿರುಗೇಟು

‘ರಾಜ್ಯದ ಜನರಿಗೆ ಈ ಮಾಹಿತಿ ನೀಡುವುದು ಅತ್ಯಗತ್ಯವಿದೆ ಎಂಬ ಉದ್ದೇಶದಿಂದ ನೀಡಲಾಗಿದೆ. ಪ್ರಧಾನ ಮಂತ್ರಿಗಳಿಗೆ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಪ್ರಾಮುಖ್ಯತೆ ಅವರಿಗೆ ತಿಳಿದಿದೆ. ಹಿಂದೆ ಘೋಷಿಸಿದ ಹಲವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳು 50 ವರ್ಷ ಪೂರ್ಣಗೊಂಡರೂ ಪೂರ್ಣಗೊಂಡಿಲ್ಲ. ಆದರೆ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಅನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿದ್ದಾರೆ. ಕೇವಲ 90 ನಿಮಿಷದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಮಾಡುವ ವ್ಯವಸ್ಥೆಯನ್ನು ಮಾಡಿದ್ದಾರೆ’ ಎಂದರು.

Latest Videos
Follow Us:
Download App:
  • android
  • ios