Asianet Suvarna News Asianet Suvarna News

ಈಶ್ವರ ಖಂಡ್ರೆ ಕುಟುಂಬದಿಂದ ನಕಲಿ ಮನೆ ಪತ್ರ ವಿತರಣೆ: ಬಿಜೆಪಿ ಮುಖಂಡರ ಆರೋಪ

ಶಾಸಕ ಈಶ್ವರ ಖಂಡ್ರೆ ಅವರು ವಸತಿ ಯೋಜನೆಯಡಿ ಹಂಚಕೆಯಾದ ಮನೆ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮಾಡಿರುವ ಅಕ್ರಮ ಮುಚ್ಚಿ ಹಾಕಲು ಬಿಜೆಪಿ ನಾಯಕರು, ಪಕ್ಷ, ಸರ್ಕಾರದ ಮೇಲೆ ಗೂಬೆ ಕುಡಿಸುವ ಪ್ರಯತ್ನ ಮಾಡುತ್ತಿದ್ದಾರೆ: ಬಿಜೆಪಿ ಮುಖಂಡರು 

Issue of Fake House Letter by Eshwar Khandre Family Says BJP Leaders grg
Author
First Published Dec 7, 2022, 10:15 PM IST

ಭಾಲ್ಕಿ(ಡಿ.07):  ವಸತಿ ಯೋಜನೆಯಡಿ ನಕಲಿ ವಸತಿ ಫಲಾನುಭವಿಗಳು, ಮುಗ್ಧ ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿ ತಾವೊಬ್ಬ ಮೇಧಾವಿ ಶಾಸಕರಾಗಲು ಹೊರಟಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಈ ಕುರಿತು ತಾಲೂಕು ಬಿಜೆಪಿ ಕಚೇರಿಯಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಡಿಕೆ ಸಿದ್ರಾಮ ಹಾಗೂ ಪ್ರಕಾಶ ಖಂಡ್ರೆ ಅವರು ಸ್ಥಳೀಯ ಶಾಸಕ ಈಶ್ವರ ಖಂಡ್ರೆ ಅವರು ವಸತಿ ಯೋಜನೆಯಡಿ ಹಂಚಕೆಯಾದ ಮನೆ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮಾಡಿರುವ ಅಕ್ರಮ ಮುಚ್ಚಿ ಹಾಕಲು ಬಿಜೆಪಿ ನಾಯಕರು, ಪಕ್ಷ, ಸರ್ಕಾರದ ಮೇಲೆ ಗೂಬೆ ಕುಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

2018ರ ವಿಧಾನ ಸಭೆ ಚುನಾವಣೆಯಲ್ಲಿ ಬೋಗಸ್‌ ವಸತಿ ಪತ್ರ ನೀಡಿ ಜನರನ್ನು ವಂಚಿಸಿ ಕುತಂತ್ರದಿಂದ ಗೆಲುವು ಸಾಧಿಸಿದ್ದಾರೆ. ಮಂಜೂರು ಆಗಿರುವ ವಸತಿ ಮನೆಗಳು ಕಾಂಗ್ರೆಸ್‌ ಕಾರ್ಯಕರ್ತರು, ಶ್ರೀಮಂತರಿಗೆ ಹಂಚಿಕೆ ಮಾಡಲಾಗಿದೆ. ತಮ್ಮ ಮನೆಯಲ್ಲಿಯೇ ಬೋಗಸ್‌ ಮನೆ ಪತ್ರ ಸೃಷ್ಟಿಸಿ ಬಡ ಜನರನ್ನು ವಂಚಿಸಲಾಗಿದೆ ಎಂದು ದೂರಿದರು.

ಡಿ.10ಕ್ಕೆ ಕಲಬುರಗಿಯಲ್ಲಿ ಖರ್ಗೆ ಅಭಿನಂದನಾ ಸಮಾರಂಭ: ಈಶ್ವರ ಖಂಡ್ರೆ

ರದ್ದಿ(ಹಳೆ) ಪೇಪರ್‌ ತರಹ ನಕಲಿ ವಸತಿ ಪತ್ರ ಹಂಚಿರುವ ಶಾಸಕರು ಇದೀಗ ಕಂತಿನ ಹಣ ಬಿಡುಗಡೆ ಮಾಡುವಂತೆ ಬಿಜೆಪಿ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಿರುವುದು ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು. ಮಾಡುತ್ತಿರುವ ದ್ರೋಹ ಜನರಿಗೆ ತಿಳಿಸಲು ಅಂದು ಬಹಿರಂಗ ಸಭೆ ಮಾಡಲಾಗುತ್ತಿದ್ದು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ ನಡೆಸಿರುವ ಪ್ರತಿಭಟನೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಡಿ.ಕೆ.ಸಿದ್ರಾಮ ಅವರ ಭಾವಚಿತ್ರ ಬಳಸಿರುವುದಕ್ಕೆ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು ಮಾಡಿರುವ ತಪ್ಪನ್ನು ಬಿಜೆಪಿ ಮುಖಂಡರ ಮೇಲೆ ಹೇರುತ್ತಿರುವುದಕ್ಕೆ ಕಿಡಿ ಕಾರಿದ್ದರು.

ಡಿ.16 ರಂದು ಪಟ್ಟಣದಲ್ಲಿ ತಾಲೂಕು ಬಿಜೆಪಿ ವತಿಯಿಂದ ಬೆಳಗ್ಗೆ 10ಕ್ಕೆ ಮಹಾತ್ಮ ಗಾಂಧಿ ವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದ್ದು ಜಿಲ್ಲಾ, ರಾಜ್ಯ ಮತ್ತು ಕೇಂದ್ರದ ಸಚಿವರು, ನಾಯಕರು ಭಾಗಿಯಾಗಲಿದ್ದಾರೆ. ಸಾವಿರಾರು ಜನ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಡಾ.ದಿನಕರ ಮೋರೆ, ದಿಗಂಬರರಾವ ಮಾನಕಾರಿ, ಪಂಡಿತ ಶಿರೋಳೆ, ಸಂತೋಷ ಪಾಟೀಲ್‌ ಹಲ್ಸಿ ಹಾಜರಿದ್ದರು.
 

Follow Us:
Download App:
  • android
  • ios