ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲೇ ಇರ್ತಾರಾ?: ಕೃಷ್ಣ ಬೈರೇಗೌಡ
ಯೋಗೇಶ್ವರ್ ಅವರು ಗೆದ್ದರೂ ನಿಮ್ಮ ಜತೆ ಇರುತ್ತಾರೆ. ಸೋತಾಗಲೂ ನಿಮ್ಮ ಜೊತೆಯಲ್ಲೇ ಇದ್ದರು. ಚನ್ನಪಟ್ಟಣ ಬಿಟ್ಟು ಬೇರೆಲ್ಲೂ ಹೋಗಿಲ್ಲ. ಯೋಗೇಶ್ವರ್ ಅವರಿಗೆ ಕ್ಷೇತ್ರದ ಪ್ರತಿ ಹಳ್ಳಿ, ವಾರ್ಡ್‌ಗಳ ಪರಿಚಯವಿದೆ. ಎಲ್ಲಿ ಏನು ಸಮಸ್ಯೆ ಇದೆ ಎಂದು ಗೊತ್ತಿದೆ. ಆದರೆ ಎನ್‌ಡಿಎ ಅಭ್ಯರ್ಥಿಗೆ ಕ್ಷೇತ್ರದಲ್ಲಿ ಎಷ್ಟು ಹಳ್ಳಿಗಳಿವೆ ಎಂದೇ ಗೊತ್ತಿಲ್ಲ ಎಂದು ಕಟುಕಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ
ಚನ್ನಪಟ್ಟಣ(ನ.08): ಮಂಡ್ಯ, ರಾಮನಗರ, ಚನ್ನಪಟ್ಟಣ ಎಂದು ಪ್ರತಿ ಚುನಾವಣೆಗೂ ಕ್ಷೇತ್ರ ಬದಲಿಸುವ ಎನ್‌ಡಿಎ ಅಭ್ಯರ್ಥಿ ಚನ್ನಪಟ್ಟಣದಲ್ಲಿ ಗ್ಯಾರಂಟಿ ಇರುತ್ತಾರಾ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು.
ನಗರ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಪರ ಪ್ರಚಾರ ನಡೆಸಿದ ಅವರು, ಯೋಗೇಶ್ವರ್ ಅವರು ಗೆದ್ದರೂ ನಿಮ್ಮ ಜತೆ ಇರುತ್ತಾರೆ. ಸೋತಾಗಲೂ ನಿಮ್ಮ ಜೊತೆಯಲ್ಲೇ ಇದ್ದರು. ಚನ್ನಪಟ್ಟಣ ಬಿಟ್ಟು ಬೇರೆಲ್ಲೂ ಹೋಗಿಲ್ಲ. ಯೋಗೇಶ್ವರ್ ಅವರಿಗೆ ಕ್ಷೇತ್ರದ ಪ್ರತಿ ಹಳ್ಳಿ, ವಾರ್ಡ್‌ಗಳ ಪರಿಚಯವಿದೆ. ಎಲ್ಲಿ ಏನು ಸಮಸ್ಯೆ ಇದೆ ಎಂದು ಗೊತ್ತಿದೆ. ಆದರೆ ಎನ್‌ಡಿಎ ಅಭ್ಯರ್ಥಿಗೆ ಕ್ಷೇತ್ರದಲ್ಲಿ ಎಷ್ಟು ಹಳ್ಳಿಗಳಿವೆ ಎಂದೇ ಗೊತ್ತಿಲ್ಲ ಎಂದು ಕಟುಕಿದರು.
ಕಾಂಗ್ರೆಸ್ ಸರ್ಕಾರ ತೆಗೆವವರೆಗೂ ಕರ್ನಾಟಕಕ್ಕೆ ನೆಮ್ಮದಿ ಇಲ್ಲ: ದೇವೇಗೌಡ
ನಿಮಗೇನಾದರೂ ಕಷ್ಟ ಅಂದರೆ ಯೋಗೇಶ್ವರ್ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ. ಆದರೆ ದೊಡ್ಡ ಮನೆಯವರು ಬರ್ತಾರಾ? ನಿಮ್ಮ ಕಷ್ಟ ಕೇಳುವವರನ್ನು ಮತದಾರರು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಯೋಗೇಶ್ವರ್ ಅವರು ಕ್ಷೇತ್ರದಲ್ಲಿ ಸಮರ್ಥ ನಾಯಕ ಎಂಬುದು ಅವರು ಮಾಡಿರುವ ಕೆಲಸಗಳಿಂದ ಸಾಬೀತಾಗಿದೆ. ಕಾಂಗ್ರೆಸ್ ಸರ್ಕಾರದ ಸಾಧನೆಗಳು, ಯೋಗೇಶ್ವರ್ ಅವರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಒಗ್ಗೂಡುವುದರಿಂದ ಕಾಂಗ್ರೆಸ್ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದು ಮಾಜಿ ಸಭಾಪತಿ ಬಿ.ಎಲ್.ಶಂಕರ್ ತಿಳಿಸಿದ್ದಾರೆ.