400 ಸೀಟಿನ ಭವಿಷ್ಯ ನುಡಿಯಲು ಬಿಜೆಪಿಯವರೇನು ಜ್ಯೋತಿಷಿಗಳೇ?: ಪ್ರಿಯಾಂಕಾ ಗಾಂಧಿ

ಬಿಜೆಪಿಯು ಚುನಾವಣೆಗೆ ಮೊದಲೇ 400ಕ್ಕಿಂತ ಅಧಿಕ ಸೀಟು ಗೆಲ್ಲುವುದಾಗಿ ಹೇಳಿಕೊಂಡು ತಿರುಗುತ್ತಿದೆ. ಆದರೆ ಚುನಾವಣೆಗೆ ಮೊದಲೇ ಅಷ್ಟು ಕರಾರುವಕ್ಕಾಗಿ ಎಷ್ಟು ಸ್ಥಾನ ಗೆಲ್ಲುತ್ತೇವೆಂದು ಹೇಳಲು ಅವರೇನು ಜ್ಯೋತಿಷಿಗಳೇ? ಇವಿಎಂಗಳನ್ನು ತಿರುಚದೇ, ನ್ಯಾಯಸಮ್ಮತವಾಗಿ ಲೋಕಸಭಾ ಚುನಾವಣೆ ನಡೆದಿದ್ದೇ ಆದಲ್ಲಿ ಬಿಜೆಪಿ 180 ಸ್ಥಾನಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಗೆಲ್ಲಲಿದೆ’ ಎಂದು ತಿಳಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ 

Is BJP are Astrologers Says Priyanka Gandhi grg

ಸಹರಾನ್‌ಪುರ್‌(ಉ.ಪ್ರ)(ಏ.18):  ಲೋಕಸಭಾ ಚುನಾವಣೆಯು ನ್ಯಾಯಸಮ್ಮತವಾಗಿ ನಡೆದಿದ್ದೇ ಆದಲ್ಲಿ ಬಿಜೆಪಿಯು 180 ಸ್ಥಾನಗಳಿಗಿಂತ ಅಧಿಕ ಗಳಿಕೆ ಮಾಡುವುದಿಲ್ಲ ಎಂಬುದಾಗಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ, ‘ಬಿಜೆಪಿಯು ಚುನಾವಣೆಗೆ ಮೊದಲೇ 400ಕ್ಕಿಂತ ಅಧಿಕ ಸೀಟು ಗೆಲ್ಲುವುದಾಗಿ ಹೇಳಿಕೊಂಡು ತಿರುಗುತ್ತಿದೆ. ಆದರೆ ಚುನಾವಣೆಗೆ ಮೊದಲೇ ಅಷ್ಟು ಕರಾರುವಕ್ಕಾಗಿ ಎಷ್ಟು ಸ್ಥಾನ ಗೆಲ್ಲುತ್ತೇವೆಂದು ಹೇಳಲು ಅವರೇನು ಜ್ಯೋತಿಷಿಗಳೇ? ಇವಿಎಂಗಳನ್ನು ತಿರುಚದೇ, ನ್ಯಾಯಸಮ್ಮತವಾಗಿ ಲೋಕಸಭಾ ಚುನಾವಣೆ ನಡೆದಿದ್ದೇ ಆದಲ್ಲಿ ಬಿಜೆಪಿ 180 ಸ್ಥಾನಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಗೆಲ್ಲಲಿದೆ’ ಎಂದು ತಿಳಿಸಿದರು.

ಕೇಜ್ರಿವಾಲ್, ಹೇಮಂತ್ ಸೊರೆನ್ ತಕ್ಷಣ ಬಿಡುಗಡೆಗೊಳಿಸಿ, 5 ಬೇಡಿಕೆ ಮುಂದಿಟ್ಟ ಪ್ರಿಯಾಂಕಾ ಗಾಂಧಿ!

ಇದೇ ವೇಳೆ ಇಂಡಿಯಾ ಕೂಟ ಲೋಕಸಭಾ ಚುನಾವಣೆಯಲ್ಲಿ ಗಳಿಸುವ ಸ್ಥಾನಗಳ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.

Latest Videos
Follow Us:
Download App:
  • android
  • ios