ಮಾಜಿ ಪ್ರಧಾನಿ ದೇವೇಗೌಡರ ಅವಹೇಳನ: ಸಿ.ಟಿ.ರವಿ ವಿರುದ್ಧ ಜೆಡಿಎಸ್‌ ಆಕ್ರೋಶ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದತ್ತ ಮಾಲೆ ಹಿಡಿದುಕೊಂಡು ಚಿಕ್ಕಮಗಳೂರಿನಲ್ಲಿ ಆಟವಾಡಬೇಕೇ ಹೊರತು ಮಂಡ್ಯದಲ್ಲಿ ಅವರ ಆಟ ನಡೆಯೋದಿಲ್ಲ ಎಂದು ಜೆಡಿಎಸ್‌ ಯುವ ಘಟಕ ಜಿಲ್ಲಾಧ್ಯಕ್ಷ ಕಂಸಾಗರ ರವಿ ಎಚ್ಚರಿಸಿದರು.

Insulting former Prime Minister Deve Gowda JDS outrage against CT Ravi at chikkamagaluru rav

ಮಳವಳ್ಳಿ (ಫೆ.24) : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದತ್ತ ಮಾಲೆ ಹಿಡಿದುಕೊಂಡು ಚಿಕ್ಕಮಗಳೂರಿನಲ್ಲಿ ಆಟವಾಡಬೇಕೇ ಹೊರತು ಮಂಡ್ಯದಲ್ಲಿ ಅವರ ಆಟ ನಡೆಯೋದಿಲ್ಲ ಎಂದು ಜೆಡಿಎಸ್‌ ಯುವ ಘಟಕ ಜಿಲ್ಲಾಧ್ಯಕ್ಷ ಕಂಸಾಗರ ರವಿ ಎಚ್ಚರಿಸಿದರು.

ಪಟ್ಟಣದ ಅನಂತರಾವ್‌ ವೃತ್ತದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರ(HD Devegowda) ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ ಕಾರ್ಯಕರ್ತರು(JDS workers) ನಡೆಸಿದ ಪ್ರತಿಭಟನೆ(Protest)ಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿಗೆ ತಲೆನೋವಾದ ಪಕ್ಷಾಂತರಿಗಳು!

ಮಾಜಿ ಪ್ರಧಾನಿ ದೇವೇಗೌಡರು ಭಾವನಾತ್ಮಕವಾಗಿ ಮುಂದಿನ ಜನ್ಮದಲ್ಲಿ ಹುಟ್ಟಿದರೇ ಮುಸ್ಲಿಂರಾಗಿ ಹುಟ್ಟುತ್ತೇನೆ ಎಂದು ಹೇಳಿದ್ದಾರೆ. ಈ ಕುರಿತು ಸಿ.ಟಿ.ರವಿ ಮುಸ್ಲಿಮರಾಗಿ ಹುಟ್ಟುವುದಿದ್ದರೆ ತಡ ಮಾಡುವುದೇಕೆ ಈಗಲೇ ಹೋಗಲಿ ಎಂದು ನಾಲಿಗೆ ಹರಿಯಬಿಟ್ಟಿದ್ದಾರೆ. ಗೌಡರ ಮಾತಿಗೆ ಧರ್ಮದ ಲೇಪನ ಹಚ್ಚಿ ದ್ವೇಷ ಮೂಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಮಂಡ್ಯದಲ್ಲಿ 7 ಕ್ಷೇತ್ರಕ್ಕೆ 7 ಸೀಟನ್ನು ಗೆಲ್ಲಿಸುವುದಾಗಿ ಹೇಳಿದ್ದಾರೆ. ಕೆ.ಆರ್‌.ಪೇಟೆಯಲ್ಲಿ ನಾರಾಯಣಗೌಡ(KR Pete Narayanagowda) ಅವರನ್ನು ಬಿಜೆಪಿಯಲ್ಲಿಯೇ ಇಟ್ಟುಕೊಂಡು ಚುನಾವಣೆಯಲ್ಲಿ ಗೆಲ್ಲಿಸಿ ತೋರಿಸಿ. ಆ ನಂತರ ಉಳಿದ ಕ್ಷೇತ್ರಗಳ ಬಗ್ಗೆ ಮಾತನಾಡುವಂತೆ ಸವಾಲು ಹಾಕಿದರು.

ದೇವೇಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಿ.ಟಿ.ರವಿ(CT Ravi statement) ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜೆಡಿಎಸ್‌ ಪಕ್ಷದ ವತಿಯಿಂದ ರಾಜ್ಯಪಾಲರಿಗೆ ದೂರು ನೀಡಲಾಗುವುದು. ಸಿ.ಟಿ.ರವಿ ಜೆಡಿಎಸ್‌ ವಿರುದ್ಧವಾಗಿ ಮಾತನಾಡುವುದನ್ನು ನಿಲ್ಲಿಸಬೇಕು, ಮಾಜಿ ಪ್ರಧಾನಿ ದೇವೇಗೌಡರ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಬೇಕು. ಇಲ್ಲದಿದ್ದರೆ ದೇವೇಗೌಡ, ಕುಮಾರಸ್ವಾಮಿ ಹಾಗೂ ನಿಖಿಲ್‌ ಕುಮಾರಸ್ವಾಮಿ ಅಭಿಮಾನಿಗಳು ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿರುವ ಸಿ.ಟಿ.ರವಿ ಹೇಳಿಕೆಯನ್ನು ಖಂಡಿಸುತ್ತೇವೆ. ಪೊಲೀಸ್‌ ಇಲಾಖೆ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಳ್ಳಬೇಕು. ಸಚಿವ ಡಾ.ಸಿ.ಎನ್‌.ಅಶ್ವಥ್‌ನಾರಾಯಣ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್‌ನನ್ನು ಹೊಡೆದು ಹಾಕಿದಂತೆ ಹೊಡೆದುಹಾಕಬೇಕೆಂದು ಹೇಳಿಕೆ ಕೊಟ್ಟಿರುವುದು ಬಿಜೆಪಿ ಪಕ್ಷದ ಅನಾಗರಿಕತನವನ್ನು ಬಯಲುಮಾಡಿದೆ. ಬಿಜೆಪಿ ವರಿಷ್ಠರು ಅವರನ್ನು ಪಕ್ಷದಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.

ಮಂಡ್ಯದಲ್ಲಿ ಜನರ ಮಧ್ಯೆ ಬಿಜೆಪಿ ನಾಯಕರು ಸಾಮರಸ್ಯವನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ, ಮಂಡ್ಯ ಜಿಲ್ಲೆ ಮಳವಳ್ಳಿ ಗಂಡು ಭೂಮಿಯಾಗಿದ್ದು, ಬಿಜೆಪಿ ನಾಯಕರು ಮತ ಕೇಳಬೇಕೆ ಹೊರತು ಟಿಪ್ಪು ಸೇರಿದಂತೆ ಇತರ ನಾಯಕರ ಬಗ್ಗೆ ಮಾತನಾಡಬಾರದು. ಇದೇ ರೀತಿ ಮಾತುಗಳು ಮುಂದುವರೆದರೆ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

Pancharatna rathayatre:: ಮೂರು ತಿಂಗಳು ತಡೀರಿ ಸೈಕಲ್ ಕೊಡ್ತೇನೆ; ಶಾಲಾ ಮಕ್ಕಳಿಗೆ ಮಾತುಕೊಟ್ಟ ಕುಮಾರಣ್ಣ

ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್‌ ಕುಮಾರ್‌ ಅವರಿಗೆ ಮನವಿಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಪುರಸಭೆ ಉಪಾಧ್ಯಕ್ಷ ಪ್ರಶಾಂತ್‌, ಸದಸ್ಯರಾದ ನೂರುಲ್ಲಾ, ನಂದಕುಮಾರ್‌, ಮುಖಂಡರಾದ ಪ್ರಭು, ಪುಟ್ಟುಬುದ್ದಿ, ಮೆಹಬೂಬ್‌ಪಾಷ, ಸದಾನಂದ, ಮಾದೇಶ್‌, ರಾಜೇಶ್‌, ನಾಗರಾಜು, ಆನಂದ್‌, ಕುಮಾರ್‌, ಮಲ್ಲೇಶ್‌ ಇತರರಿದ್ದರು.

Latest Videos
Follow Us:
Download App:
  • android
  • ios