Asianet Suvarna News Asianet Suvarna News

ಪಂಚರಾಜ್ಯ ಎಲೆಕ್ಷನ್‌ಗೆ ₹3000 ಕೋಟಿ ನೀಡಲು ಸಿಎಂ, ಡಿಸಿಎಂಗೆ ಸೂಚನೆ: ಸಿ.ಟಿ.ರವಿ ಆರೋಪ

ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ನಂ.1ಗೆ (ಮುಖ್ಯಮಂತ್ರಿ ಸಿದ್ದರಾಮಯ್ಯ) ಒಂದು ಸಾವಿರ ಕೋಟಿ ರು. ಮತ್ತು ನಂ.2ಗೆ (ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌) ಎರಡು ಸಾವಿರ ಕೋಟಿ ರು. ನೀಡಿ ಎಂಬ ಸೂಚನೆ ಕಾಂಗ್ರೆಸ್‌ ವರಿಷ್ಠರಿಂದ ಬಂದಿದೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದ್ದಾರೆ.

Instruction to CM and DCM to give 3000 crore for five state Election Says CT Ravi gvd
Author
First Published Oct 16, 2023, 3:40 AM IST

ಬೆಂಗಳೂರು (ಅ.16): ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ನಂ.1ಗೆ (ಮುಖ್ಯಮಂತ್ರಿ ಸಿದ್ದರಾಮಯ್ಯ) ಒಂದು ಸಾವಿರ ಕೋಟಿ ರು. ಮತ್ತು ನಂ.2ಗೆ (ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌) ಎರಡು ಸಾವಿರ ಕೋಟಿ ರು. ನೀಡಿ ಎಂಬ ಸೂಚನೆ ಕಾಂಗ್ರೆಸ್‌ ವರಿಷ್ಠರಿಂದ ಬಂದಿದೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಎಂದರೆ ಕರ್ನಾಟಕ ಪ್ರದೇಶ ಕಮಿಷನ್ ಕಾಂಗ್ರೆಸ್ ಆಗಿ ಬದಲಾಗಿದೆ. ಕರ್ನಾಟಕವನ್ನು ಇವರು ಎಟಿಎಂ ಮಾಡಿಕೊಂಡಿದ್ದಾರೆ. ಹಿಂದೆ ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದ ಗುತ್ತಿಗೆದಾರ ಅಂಬಿಕಾಪತಿ ಈಗ ಕರೋಡ್‍ಪತಿಯಾಗಿದ್ದಾರೆ. ಅವರ ಮನೆಯಲ್ಲಿ 42 ಕೋಟಿ, ಇನ್ನೊಬ್ಬ ಬಿಲ್ಡರ್ ಕೇತಮಾರನಹಳ್ಳಿ ಸಂತೋಷ್ ಕೃಷ್ಣಪ್ಪ ಮನೆಯಲ್ಲಿ 40 ಕೋಟಿ ಸೇರಿದಂತೆ ಕೋಟಿ ಕೋಟಿ ಹಣ ಹೊರಗೆ ಬರುತ್ತಿದೆ. ಇವರಿಬ್ಬರೂ ರಾಜ್ಯದ ನಂ.1, ನಂ.2 ಅವರ ಬೇನಾಮಿಗಳು ಎಂಬ ಮಾಹಿತಿ ನಮಗಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ನಂ.1 ಮತ್ತು ನಂ.2ಗಳು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ನೂರಾರು ಬೇನಾಮಿಗಳನ್ನು ನೇಮಿಸಿದ್ದಾರೆ. ಈಗ ಇಬ್ಬರು ಬೇನಾಮಿಗಳು ಮಾತ್ರ ಸಿಕ್ಕಿದ್ದಾರೆ. ಈ ಹಣವೇ ಬೇನಾಮಿಗಳ ನೇಮಕಕ್ಕೆ ಸಾಕ್ಷಿ. ಕರ್ನಾಟಕವನ್ನು ಇವರು ಎಟಿಎಂ ಮಾಡಿಕೊಂಡಿದ್ದಾರೆ. ಹಿಂದೆ ಗೋವಿಂದರಾಜು ಅವರ ಡೈರಿ ಇದಕ್ಕೆ ಸಾಕ್ಷಿ ಆಗಿತ್ತು ಎಂದು ಉದಾಹರಣೆ ನೀಡಿದರು.

ಚೀನಾದ ಫೋಟೋಗಳನ್ನ ಶೇರ್ ಮಾಡಿದ Dr Bro: ನಕಲಿಗಳ ಮಧ್ಯೆ ನೀವು ಕನ್ನಡದ ಅಸಲಿ ಚಿನ್ನ ಎಂದ ಫ್ಯಾನ್ಸ್!

‘ಬ್ರ್ಯಾಂಡ್’ ಎಂದರೆ ಭ್ರಷ್ಟ ಬೆಂಗಳೂರು: ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕಿದವರೊಬ್ಬರು ಪಂಚ ರಾಜ್ಯಗಳ ಚುನಾವಣೆ ವೆಚ್ಚಕ್ಕೆ 2 ಸಾವಿರ ಕೋಟಿ ರು. ನೀಡುವುದಾಗಿ ಹೇಳಿದ ಮಾಹಿತಿ ಇದೆ. ಮುಖ್ಯಮಂತ್ರಿಗಳು ಕಷ್ಟಪಟ್ಟು ಅದರ ಅರ್ಧ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರಂತೆ. ಸತ್ಯವನ್ನು ಅವರೇ ಹೇಳಬೇಕು. ಇದನ್ನು ನೋಡಿದರೆ ಬ್ರ್ಯಾಂಡ್ ಬೆಂಗಳೂರು ಎಂದರೆ ಭ್ರಷ್ಟ ಬೆಂಗಳೂರು ಎಂದು ಅರ್ಥವಾಗುತ್ತದೆ. ಸಿಬಿಐ ತನಿಖೆ ನಡೆದರೆ ನಂ.1 ಮತ್ತು ನಂ.2 ಸಂಗ್ರಹಿಸಿದ ಮೊತ್ತದ ವಿವರ ಹೊರಬರುತ್ತದೆ ಎಂದು ಹೇಳಿದರು.

Follow Us:
Download App:
  • android
  • ios