ಈ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು, ಆರ್ಥಿಕ ದುರುಪಯೋಗವೇ ಇದಕ್ಕೆಲ್ಲಾ ಕಾರಣ, ಮೋದಿ ಒಬ್ಬರಿಂದಲೇ 100 ಲಕ್ಷ ಕೋಟಿ ರು. ಸಾಲ 

ನವದೆಹಲಿ(ಜೂ.11): ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ 9 ವರ್ಷದ ಅವಧಿಯಲ್ಲಿ ಭಾರತದ ಸಾಲ ಮೂರು ಪಟ್ಟು ಹೆಚ್ಚಾಗಿದ್ದು, 155 ಕೋಟಿ ರು.ಗೆ ಹೆಚ್ಚಳವಾಗಿದೆ ಎಂದು ಶನಿವಾರ ಆರೋಪಿಸಿರುವ ಕಾಂಗ್ರೆಸ್‌ ಈ ಕುರಿತಾಗಿ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೇತ್‌, ‘2014ರಲ್ಲಿ ದೇಶದ ಸಾಲ 55 ಲಕ್ಷ ಕೋಟಿ ರು.ನಷ್ಟಿತ್ತು. 2014ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಈ ಸರ್ಕಾರ ಸಾಲಕ್ಕೆ 100 ಲಕ್ಷ ಕೋಟಿ ರು.ಗಳನ್ನು ಸೇರಿಸಿದೆ. ಪ್ರಸ್ತುತ ದೇಶದ ಪರಿಸ್ಥಿತಿಗೆ ಆರ್ಥಿಕ ದುರುಪಯೋಗವೇ ಕಾರಣವಾಗಿದೆ’ ಎಂದ​ರು.

ಪ್ರಧಾನಿ ಮೋದಿ ಭೇಟಿಗೂ ಮುನ್ನ 'ನ್ಯಾಟೋ' ಆಫರ್‌ ನೀಡಿದ ಅಮೆರಿಕ, ತಿರಸ್ಕರಿಸಿದ ಭಾರತ!

‘ಆರ್ಥಿಕತೆಯ ನಿರ್ವಹಣೆ ಮಾಡುವುದು ಹೆಡ್‌ಲೈನ್‌ಗಳನ್ನು ನಿರ್ವಹಣೆ ಮಾಡಿದಂತಲ್ಲ. ಇದನ್ನು ಟೆಲಿಪ್ರಾಂಪ್ಟರ್‌ ಮತ್ತು ವಾಟ್ಸಾಪ್‌ ಫಾರ್ವರ್ಡ್‌ಗಳ ಮೂಲಕ ನಿಯಂತ್ರಣ ಮಾಡಲಾಗುವುದಿಲ್ಲ. ಈ ಕುರಿತಾಗಿ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ನಾವು ಆಗ್ರಹಿಸುತ್ತೇವೆ’ ಎಂದು ಅವರು ಹೇಳಿದರು.