ಭಾರತ ಮೂಲದ ವೈದ್ಯ ಡಾ ಗೌರವ್ ಶರ್ಮಾ ಅವರು ನ್ಯೂಝಿಲೆಂಡ್ ಸಂಸತ್ತಿನ ಸಂಸದರಾಗಿ ಆಯ್ಕೆಯಾಗಿದ್ದಾರೆ. ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಇವರು.

33 ವರ್ಷದ ಡಾ. ಗೌರವ್ ಶರ್ಮಾ ಹಿಮಾಚಲಪ್ರದೇಶದ ಹಮೀರ್‌ಪುರದವರು. ಇವರು ಲೇಬರರ್ ಪಾರ್ಟಿ ಅಭ್ಯರ್ಥಿಯಾಗಿ ಹಮಿಲ್ಟನ್ ವೆಸ್ಟ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ಈ ದೇಶದಲ್ಲಿನ್ನು ಪೀರಿಯಡ್ಸ್ ಪ್ರಾಡಕ್ಟ್‌ಗಳೆಲ್ಲವೂ ಫ್ರೀ..!

ನ್ಯೂಝಿಲೆಂಡ್ ಪಾರ್ಲಿಮೆಂಟ್‌ನಲ್ಲಿ ಚುನಾಯಿತರಾದ ಯುವ ಅಭ್ಯರ್ಥಿ ಡಾ. ಗೌರವ್ ಶರ್ಮಾ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮೊದಲು ನ್ಯೂಝಿಲೆಂಡ್‌ನ ಪ್ರಾದೇಶಿಕ ಇಂಡಿಜಿನಿಯಸ್ ಮವೊರಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಅವರು, ನಂತರ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ನ್ಯೂಝಿಲೆಂಡ್‌ ಹೈ ಕಮಿಷನ್ ಮುಕ್ತೇಶ್ ಪರದೇಶಿ ತಿಳಿಸಿದ್ದಾರೆ.

ಹಿಂದಿಯಲ್ಲದೆ ಸಂಸ್ಕೃತ ಆರಿಸಿಕೊಂಡ ಬಗ್ಗೆ ಕೇಳಿದಾಗ, ನಿಜವಾಗಿಯೂ ನಾನು ಆ ಬಗ್ಗೆ ಯೋಚಿಸಲಿಲ್ಲ. ಹಾಗೆ ನೋಡಿದರೆ ನನ್ನ ಮಾತೃ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಬಹುದಿತ್ತು. ಆದರೆ ಸಂಸ್ಕೃತ ಎಲ್ಲ ಭಾಷೆಗಳ ಮೂಲ, ನನಗೆ ತಿಳಿಯದ ಭಾಷೆಗಳಿಗೂ ಎಂದಿದ್ದಾರೆ ಶರ್ಮಾ.