Asianet Suvarna News Asianet Suvarna News

ಕಾಂಗ್ರೆಸ್‌ನ ಯಾವ ನಾಯಿ ಕೂಡ ತುರ್ತು ಪರಿಸ್ಥಿತಿ ವೇಳೆ ಹೋರಾಟ ಮಾಡಿಲ್ಲ: ಸಿಟಿ ರವಿ

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಕಾಂಗ್ರೆಸ್ ನ ಯಾವ ನಾಯಿ ಕೂಡ ಹೋರಾಟ ಮಾಡಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

Indian Congress any one do not fought during the emergency situation criticize CT Ravi sat
Author
First Published Aug 21, 2023, 2:24 PM IST

ನವದೆಹಲಿ (ಆ.21): ಕೋಳಿ ಕೇಳಿ ಯಾರು ಮಸಾಲೆ ಅರೆಯಲ್ಲ ಎಂದು ಹೇಳಿದ ಕಾಂಗ್ರೆಸ್‌ನವರಿಗೆ ಮಾತ್ರ ಮಸಾಲೆ ಅರೆಯೋಕೆ ಬರುತ್ತಾ, ನಮಗೂ ಬರುತ್ತದೆ. ಇನ್ನು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಕಾಂಗ್ರೆಸ್ ನ ಯಾವ ನಾಯಿ ಕೂಡ ಹೋರಾಟ ಮಾಡಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಈ ಕುರಿತು ಬಿಜೆಪಿ ಕೋರ್‌ ಕಮಿಟಿ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ ಕೋಳಿ ಕೇಳಿ ಮಸಾಲೆ ಅರೆಯೊಲ್ಲ ಎಂದಿದ್ದಾರೆ. ಆದರೆ, ಮಸಾಲೆ ಅರೋಯಕೆ ಕಾಂಗ್ರೆಸ್ ಮಾತ್ರ ಬರಲ್ಲ. ನಮಗೂ ಬರತ್ತದೆ. ಡಿಕೆ ಶಿವಕುಮಾರ್ ಕೇವಲ ಕೋಳಿಗಷ್ಟೆ ಸೀಮಿತವಾಗಿ ಹೇಳಿದ್ದರೆ ಸರಿ. ರಾಜಕೀಯ ವಿಚಾರವಾಗಿ ಹೇಳಿದ್ದರೆ ಆ ರಾಜಕೀಯ ನಮಗೂ ಬರತ್ತದೆ. ಇನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಯಾವ ನಾಯಿ ಕೂಡ ಹೋರಾಟ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದ್ದರಿಂದ ತುರ್ತು ಪರಿಸ್ಥಿತಿ ವೇಳೆ ಕಾಂಗ್ರೆಸ್ ನ ಯಾವ ನಾಯಿ ಕೂಡ ಹೋರಾಟ ಮಾಡಿಲ್ಲ ಎಂದು ಹೇಳಿಕೆ ನೀಡುತ್ತಿದ್ದೇನೆ ಎಂದು ಹೇಳಿದರು.

ಕೆಆರ್‌ಎಸ್‌ ಜಲಾಶಯದ ನೀರು 105 ಅಡಿಗೆ ಕಸಿತ: ಮಂಡ್ಯ ರೈತರು, ಬಿಜೆಪಿಯಿಂದ ಕಾವೇರಿ ಹೋರಾಟ ಆರಂಭ

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಮೇಲೆ ನಂಬಿಕೆಯಿಲ್ಲ:  ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ಬಗ್ಗೆ ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖೆ ವಿಚಾರವಾಗಿ ಮಾತನಾಡಿ, ನಾಗಮೋಹನದಾಸ್‌ ಅವರ ಮೇಲೆ ನಂಬಿಕೆ ಇಲ್ಲ. ಅವರು ಈ ಹಿಂದೆ ದತ್ತಪೀಠದಲ್ಲೂ ಹೀಗೆ ಮಾಡಿದ್ದರು. ಕಾಂಗ್ರೆಸ್ ಮರ್ಜಿಯಲ್ಲಿ ನಾಗಮೋಹನ್ ದಾಸ್ ಇದ್ದಾರೆ. ಟೂಲ್ ಕಿಟ್ ರಾಜಕೀಯ ಮಾಡೋದಕ್ಕೆ ನಾಗಮೋಹನ್ ದಾಸ್ ಕಮೀಟಿ ಮಾಡಿದ್ದಾರೆ. ನಿರ್ದಿಷ್ಟ ಪ್ರಕರಣದ ಬಗ್ಗೆ ಲೋಕಾಯುಕ್ತಕ್ಕೆ ಎಸಿಬಿಗೆ ದೂರು ನೀಡಲು ಅವಕಾಶ ಇದೆ. ಆದರೆ ಫೇಕ್ ನರೆಟಿವ್ ಸೃಷ್ಟಿ ಮಾಡಲು,  ಟೂಲ್ ಕಿಟ್ ಭಾಗವಾಗಿ ನಾಗಮೋಹನ್ ದಾಸ್ ಕಮಿಟಿ ರಚನೆ ಮಾಡಲಾಗಿದೆ. ಹಾಗೆ ಒಂದು ವೇಳೆ ತನಿಖೆಎ ವಹಿಸಿದರೂ 2013 ರಿಂದ ತನಿಖೆ ಮಾಡಿ. ಈ ಸರ್ಕಾರದ ಪರಿಸ್ಥಿತಿ ಹೇಗೆ ಇದೆ ಅಂದರೆ ಜಿಲ್ಲಾಧಿಕಾರಿ ಕಾರಿಗೆ ಪೆಟ್ರೋಲ್ ಹಾಕಲೂ ಆಗದ ಸ್ಥಿತಿಯಾಗಿದೆ. ಜೊತೆಗೆ, ಮಳೆಗಾದಲ್ಲೇ ಕರ್ನಾಟಕ ಕತ್ತಲಲ್ಲಿ ಇಡುವ ಕಾರ್ಯ ಮಾಡಿದೆ‌ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ಪತ್ರಕರ್ತರನ್ನೂ ಹೆದರಿಸುತ್ತಿದೆ: ಈ ಸರ್ಕಾರ ಎಲ್ಲಾರನ್ನೂ ಹೆದರಿಸುತ್ತಿದೆ‌. ಪತ್ರಕರ್ತರನ್ನು ಹೆದರಿಸುವ ಸುದ್ದಿಯ ಮೂಲ ಕೇಳುವ ಕೆಲಸ ಮಾಡ್ತಾ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕೋರನ್ನ ಹೆದರಿಸುವ ಕೆಲಸ ಮಾಡ್ತಾ ಇದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ನಾವು ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ. ಇನ್ನು ಬಿಜೆಪಿಯಿಂದ ಯಾರು ಪಾರ್ಟಿ ಬಿಟ್ಟು ಹೋಗಲ್ಲ. ಸೋಮಶೇಖರ್ ಪಾರ್ಟಿ ಬಿಡಲ್ಲ ಎಂದಿದ್ದಾರೆ. ಅವರು ಕೂಡ ನಿಮ್ಮ ಎದುರು ಹೇಳಿದ್ದಾರೆ. ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳಿ ಸೋಮಶೇಖರ್ ಅವರಿಗೆ ಮುಜುಗರ ಮಾಡಬೇಡಿ. ನಮ್ಮ ಪಾರ್ಟಿ ಕೇಡರ್ ಪಾರ್ಟಿಯಾಗಿದೆ. ಸಂಘಟನೆ ಆಧಾರಿತ ಪಾರ್ಟಿ ನಮ್ಮದು ಎಂದು ಹೇಳಿದರು.

ವಿಮಾನದ ಗಗನಸಖಿಗೆ ನಿನ್ನ ರೇಟ್‌ ಎಷ್ಟು? ಡಾಲರ್‌ ಕೊಟ್ರೆ ಬರ್ತಿಯಾ ಎಂದವನಿಗೆ ಸಿಕ್ಕಿದ್ದೇನು ಗೊತ್ತಾ?

ಮೋದಿ ಯಶಸ್ವಿಯಾದ್ರೆ ಕೆಲವರಿಗೆ ಮೆಣಸಿನಕಾಯಿ ಇಟ್ಟಂಗಾಯ್ತದೆ:  ಚಂದ್ರಯಾನ‌ & ಯೋಗಿ ಫೋಟೋ ಟ್ವೀಟ್ ಮಾಡಿ ಬಹುಭಾಷ‌ನಟ ಪ್ರಕಾಶ್ ರಾಜ್ ವ್ಯಂಗ್ಯದ ಬಗ್ಗೆ ಮಾತನಾಡಿದ ಸಿ.ಟಿ. ರವಿ, ಕೆಲವರಿಗೆ ಭಾರತದ ಅಸ್ಮಿತೆಯ ಬಗ್ಗೆ ಅಸಹನೆ‌ ಇದೆ. ಕೆಲವರಿಗೆ ಚಂದ್ರಯಾನ ಯಶಸ್ವಿಯಾದ್ರೆ,‌ ಇವರಿಗೆ‌‌ ಸಂಕಟ ಶುರುವಾಗಿದೆ. ಪ್ರಪಂಚದ ಮುಂದೆ‌ ಮೋದಿ ನಾಯಕತ್ವ ಯಶಸ್ವಿಯಾದ್ರೆ ಸಂಕಟ ಶುರುವಾಗುತ್ತದೆ. ಕೆಲವರಿಗೆ‌ ಹಿಂದಗಡೆ ಮೆಣಸಿನಕಾಯಿ ಇಟ್ಕೊಂಡಂಗೆ ಆಗುತ್ತದೆ ಎಂದು ನಟ ಪ್ರಕಾಶ್ ರಾಜ್ ಟ್ವೀಟ್ ಗೆ ಸಿಟಿ ರವಿ ಕೌಂಟರ್ ನೀಡಿದ್ದಾರೆ.

Follow Us:
Download App:
  • android
  • ios