ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ: ಸಚಿವ ಪರಮೇಶ್ವರ್‌

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸ ನನಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಎಂದರು.

India will come to power in Lok Sabha elections Says Minister Dr G Parameshwar gvd

ತುಮಕೂರು (ಆ.01): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸ ನನಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಎಂದರು. ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 10 ವರ್ಷ ಆಡಳಿತ ನಡೆಸಿದ್ದಾರೆ. ಹೀಗಾಗಿ ಈ ಬಾರಿ ದೇಶದ ಜನ ಬದಲಾವಣೆ ಬಯಸಿದ್ದು, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಈ ಹಿಂದೆ ಕೇಂದ್ರದಲ್ಲಿ ಡಾ. ಮನಮೋಹನ್‌ ಸಿಂಗ್‌ ಅವರು 10 ವರ್ಷಗಳ ಕಾಲ ಆಡಳಿತ ನಡೆಸಿದರು. 

ಆಗಲೂ ಸಹ ಜನ ಬದಲಾವಣೆ ಬಯಸಿ ನರೇಂದ್ರ ಮೋದಿಯವರಿಗೆ ಅಧಿಕಾರ ಕೊಟ್ಟರು. ಅದೇ ರೀತಿ ಈಗಲೂ ಸಹ ಜನ ಬದಲಾವಣೆ ಬಯಸಿದ್ದು, ನಮಗೆ ಅಧಿಕಾರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಗರದ ಅಮಾನಿಕೆರೆಗೆ ಭೇಟಿ ನೀಡಿ ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಮತ್ತಷ್ಟುಬೆಳೆಯಬೇಕು, ಬಲಿಷ್ಠವಾಗಬೇಕು ಎಂಬುದು ನಮ್ಮೆಲ್ಲ ಆಶಯವಾಗಿದೆ. ಹಾಗಾಗಿ ಕೇಂದ್ರದಲ್ಲಿ ಆಡಳಿತ ವ್ಯವಸ್ಥೆಯೂ ಬದಲಾಗಬೇಕಿದೆ ಎಂದರು.

ಆ.15ರಿಂದ ಇ-ಆಫೀಸ್ ಮೂಲಕವೇ ಪತ್ರ ವ್ಯವಹಾರ: ಸಚಿವ ಕೃಷ್ಣ ಬೈರೇಗೌಡ

ಭಾರತ ವಿಶ್ವದಲ್ಲಿ ಬಲಿಷ್ಠವಾಗಿ ಎಲ್ಲ ಕ್ಷೇತ್ರಗಳಲ್ಲೂ ಬೆಳೆಯುತ್ತಿದೆ. ಇದಕ್ಕೆ ಮೋದಿ ಅವರು ಒಂದಿಷ್ಟುಮಾಡಿದ್ದಾರೆ, ಇಲ್ಲ ಎಂದು ಹೇಳಲ್ಲ. ಆದರೆ ಅಡಿಪಾಯ ಹಾಕಿದವರು ಯಾರು, ಅಡಿಪಾಯ ಹಾಕಿದವರು ಇದ್ದಾರಲ್ವಾ ಎಂದು ಅವರು ಪ್ರಶ್ನಿಸಿದರು. ರಾಜ್ಯದ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಊರಿಗೆ, ದೇವಸ್ಥಾನಕ್ಕೆ ಹೋಗುವಾಗ ಅವರಿಗೆ ಸಹಾಯವಾಗಲಿ ಎಂಬ ಸದುದ್ದೇಶದಿಂದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ವ್ಯವಸ್ಥೆ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಆಟೋರಿಕ್ಷಾದವರನ್ನು ಗುರಿಯಾಗಿಸಿಕೊಂಡು ಈ ಯೋಜನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮುಂದಿನ ದಿನಗಳಲ್ಲಿ ಆಟೋ ಚಾಲಕರನ್ನು ಕರೆದು ಅವರ ಸಮಸ್ಯೆಯನ್ನು ಆಲಿಸುವ ಕೆಲಸ ಮಾಡುತ್ತೇವೆ ಎಂದರು.

ಬಿ.ಆರ್‌. ಪಾಟೀಲ್‌ ಅವರು ಕ್ಷಮೆ ಕೇಳಬೇಕಾಗಿಲ್ಲ, ಕ್ಷಮೆ ಕೇಳಿ ಎಂದು ಯಾರೂ ಹೇಳಿಲ್ಲ. ಬೇರೆ ಉದ್ದೇಶಕ್ಕೆ ನಾವು ಈ ರೀತಿ ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಅದಕ್ಕೆ ಯಾರು ಕ್ಷಮೆ ಕೇಳುವ ಅಗತ್ಯವಿಲ್ಲ ಎಂದ ಅವರು, ಸಿಎಲ್‌ಪಿ ಸಭೆ ಕರೆಯುವಂತೆ ಶಾಸಕರು ಮನವಿ ಮಾಡಿದ್ದರು. ಅದರಂತೆ ಸಭೆ ಕರೆದು ಚರ್ಚೆ ಮಾಡಲಾಗಿದೆ ಅಷ್ಟೆ. ಈ ಬಗ್ಗೆ ವಿನಾ ಕಾರಣ ಬೇರೇ ಬೇರೇ ಅರ್ಥ ಕಲ್ಪಿಸುವುದು ಅನಗತ್ಯ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್‌, ಜಿ.ಪಂ. ಸಿಇಒ ಜಿ. ಪ್ರಭು, ಸ್ಮಾರ್ಟ್‌ಸಿಟಿ ಅಧಿಕಾರಿಗಳು, ಟೂಡಾ ಅಧಿಕಾರಿಗಳು ಉಪಸ್ಥಿತರಿದ್ದರು.

ಆಗಸ್ಟ್‌ ಮೊದಲ ವಾರವೇ ಭದ್ರಾ ನಾಲೆಗೆ ನೀರು: ಸಚಿವ ಮಲ್ಲಿಕಾರ್ಜುನ್‌

ಶೀಘ್ರ ಪಿಎಸ್‌ಐ ಹಗರಣದ ತನಿಖೆ ಮುಕ್ತಾಯ: ಪಿಎಸ್‌ಐ ನೇಮಕಾತಿ ಅಕ್ರಮದ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷಯ. ಈ ಹಗರಣದಿಂದ ಬಹಳಷ್ಟುಮಂದಿಗೆ ತೊಂದರೆಯಾಗಿದೆ. ನೇಮಕಾತಿಯೂ ನಿಂತು ಹೋಗಿದೆ. ಎಲ್ಲವೂ ಸರಿ ಹೋಗಿದ್ದರೆ 545 ಮಂದಿ ಪಿಎಸ್‌ಐಗಳ ನೇಮಕಾತಿಯಾಗಬೇಕಾಗಿತ್ತು. ಈಗ ಮತ್ತೆ ಗೃಹ ಇಲಾಖೆ 400 ಮಂದಿ ಪಿಎಸ್‌ಐಗಳ ನೇಮಕ ಮಾಡಿಕೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಿದೆ. ಈ ಎರಡೂ ಸೇರಿದಂತೆ ಒಟ್ಟು ಸಾವಿರ ಮಂದಿ ಪಿಎಸ್‌ಐಗಳ ನೇಮಕಾತಿ ಮಾಡಿಕೊಳ್ಳಬೇಕಾಗಿದೆ. ಮೊದಲು ಈಗಿರುವ ಪಿಎಸ್‌ಐ ನೇಮಕಾತಿ ಹಗರಣ ಮುಕ್ತಾಯಗೊಳ್ಳುವವರೆಗೂ ಹೊಸ ನೇಮಕಾತಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಈ ಹಗರಣದ ತನಿಖೆ ಮುಕ್ತಾಯಗೊಂಡು ಸಮಸ್ಯೆ ಬಗೆಹರಿದ ಬಳಿಕವಷ್ಟೆಹೊಸ ನೇಮಕಾತಿ ಮಾಡಬೇಕಾಗಿದೆ. ಆದಷ್ಟುಶೀಘ್ರ ಇದನ್ನು ಬಗೆಹರಿಸುತ್ತೇವೆ. ಅಭ್ಯರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಗೃಹಸಚಿವ ಪರಮೇಶ್ವರ್‌ ಹೇಳಿದರು.

Latest Videos
Follow Us:
Download App:
  • android
  • ios