ಜನರಿಗಾಗಿ ಧರ್ಮ ಇರಬೇಕೆ ಹೊರತು ಧರ್ಮಕ್ಕಾಗಿ ಧಮರ್ಮ ಇರುವುದು ಬೇಡ. ದಯ, ಕರುಣೆ, ಮಾನವೀಯ ಮೌಲ್ಯಗಳೊಂದಿಗೆ ಧರ್ಮ ಜನರನ್ನು ಪೊರೆಯಬೇಕು. ಧರ್ಮ ನಮ್ಮ ಬದುಕಿನ ದಾರಿಯಾಗಬೇಕು ಎಂದ ಸಿದ್ದರಾಮಯ್ಯ 

ಕಲಬುರಗಿ(ಸೆ.19):  ಕಾಂಗ್ರೆಸ್‌ ಸೇರಿ ಹಲವಾರು ಪಕ್ಷಗಳ ಕೂಟವಾಗಿರುವ ಇಂಡಿಯಾ ಒಕ್ಕೂಟ ಯಾವುದೇ ಧರ್ಮದ ವಿರೋಧಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಿಗಾಗಿ ಧರ್ಮ ಇರಬೇಕೆ ಹೊರತು ಧರ್ಮಕ್ಕಾಗಿ ಧಮರ್ಮ ಇರುವುದು ಬೇಡ. ದಯ, ಕರುಣೆ, ಮಾನವೀಯ ಮೌಲ್ಯಗಳೊಂದಿಗೆ ಧರ್ಮ ಜನರನ್ನು ಪೊರೆಯಬೇಕು. ಧರ್ಮ ನಮ್ಮ ಬದುಕಿನ ದಾರಿಯಾಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಕಲ್ಯಾಣ ರಾಜ್ಯ ಸಂಕಲ್ಪ ಸಾಕಾರಕ್ಕೆ ಬದ್ಧ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ 3 ಡಿಸಿಎಂಗಳು ಬೇಕೆಂದು ಸಚಿವ ರಾಜಣ್ಣ ಪತ್ರ ಬರೆಯೋದಾಗಿ ಹೇಳಿದ್ದಾರಲ್ಲ ಎಂದು ಗಮನ ಸೆಳೆದಾಗ ಈಗಾಗಲೇ ಒಬ್ಬರು ಡಿಸಿಎಂ ಇದ್ದಾರೆ. ರಾಜಣ್ಣ ಹೀಗೆ ಹೇಳಿದ್ದಾರೆ. ಇವೆಲ್ಲ ವಿಚಾರ ಹೈಕಮಾಂಡ್‌ ತೀರ್ಮಾನಿಸಲಿದೆ. ಈ ವಿಚಾರದಲ್ಲಿ ಹೈಕಮಾಂಡ್‌ ನಿರ್ಧಾರ ತಾವು ಪಾಲಿಸೋದಾಗಿ ಸಿದ್ದರಾಮಯ್ಯ ಹೇಳಿದರು.